ಮಗಳ ಜೊತೆ ಪ್ರಿಯಕರನ ಚಲ್ಲಾಟ ನೋಡಿದ ತಂದೆ! ಮುಂದೇನಾಯ್ತು?

Webdunia
ಸೋಮವಾರ, 6 ಡಿಸೆಂಬರ್ 2021 (08:21 IST)
ಬೆಂಗಳೂರು : ಮಗಳ ಪ್ರಿಯಕರನನ್ನು ಹತ್ಯೆಗೈದಿದ್ದ ಆರೋಪಿ ತಂದೆಯನ್ನು ಬೆಂಗಳೂರಿನ ವಿ.ವಿ.ಪುರಂ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವಿನೋಬನಗರ ನಿವಾಸಿ ನಾರಾಯಣ ಬಂಧಿತ ಆರೋಪಿ. ನಿವೇಶ್ ಕುಮಾರ್(19) ಕೊಲೆಯಾದ ಯುವಕ.
ಆರೋಪಿ ನಾರಾಯಣ್, ತನ್ನ ಮಗಳನ್ನು ಪ್ರೀತಿಸುತ್ತಿದ್ದ ನಿವೇಶ್ ಕುಮಾರ್ನನ್ನು ಕೆಲ ದಿನಗಳ ಹಿಂದೆ ಕೊಲೆ ಮಾಡಿದ್ದ. ಆರೋಪಿ ನಾರಾಯಣ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ನಿವೇಶ್ ನಾರಾಯಣ್ ಮನೆಗೆ ಬಂದಿದ್ದ. ಇದೇ ವೇಳೆ ಆಚೆ ಹೋಗಿದ್ದ ನಾರಾಯಣ ಮನೆಗೆ ಹಿಂತಿರುಗಿದ್ದ. ಮನೆಗೆ ಬರುತ್ತಿದ್ದಂತೆ ಮಗಳು ಆತನ ಪ್ರಿಯಕರನ ಜೊತೆ ಇರುವುದನ್ನು ಕಂಡು ಕೋಪಗೊಂಡು ನಿವೇಶ್ ಹತ್ಯೆಗೈದಿದ್ದಾನೆ.
ನಾರಾಯಣ್ ಮನೆಯಲ್ಲಿದ್ದ ಕಟ್ಟಿಗೆಯಿಂದ ನಿವೇಶ್ ತಲೆಗೆ ಹೊಡೆದಿದ್ದಾನೆ. ನಂತರ ಅಪರಿಚಿತ ಎಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಆ ವೇಳೆಗೆ ನಿವೇಶ್ ಮೃತಪಟ್ಟಿದ್ದ. ಕಲಾಸಿಪಾಳ್ಯ ಪೊಲೀಸರು ಆಸ್ಪತ್ರೆ ಮಾಹಿತಿ ಅಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ನಡುವೆ ನಿವೇಶ್ ಕಾಣಿಸುತ್ತಿಲ್ಲ ಎಂದು ನಿವೇಶ್ ಪೋಷಕರು ವಿ.ವಿ.ಪುರಂ ಠಾಣೆಗೆ ದೂರು ನೀಡಿದ್ದರು. ಈ ವೇಳೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವ ತೋರಿಸಿದಾಗ ನಿವೇಶ್ ಗುರುತು ಪತ್ತೆಯಾಗಿದೆ. ನಿವೇಶ್ನನ್ನು ಆಸ್ಪತ್ರೆಗೆ ದಾಖಲಿಸಿದ ನಾರಾಯಣ್ ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಯಲಾಗಿದೆ. ಕಲಾಸಿಪಾಳ್ಯದಿಂದ ಪ್ರಕರಣ ವರ್ಗಾಯಿಸಿಕೊಂಡು ವಿ.ವಿ.ಪುರಂ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಅಕ್ಕನನ್ನು ಮಾರಾಟ ಮಾಡ್ಬೇಡಿ, ಅಕ್ಕನ ಮಾತು ಕೇಳಿದ್ರೆ ಕಣ್ಣೀರು ಬರುತ್ತೆ

ವಿಧಾನಸಭೆ ಚುನಾವಣೆ, ಬಿಹಾರದಲ್ಲಿ ರಾಹುಲ್ ಗಾಂಧಿ ಮೊದಲ ರ್ಯಾಲಿ

ದ್ವೇಷ ಭಾಷಣ ಮಾಡುವವರ ಬಗ್ಗೆ ಮಂಗಳೂರಿನಲ್ಲಿ ಗುಡುಗಿದ ಸಿದ್ದರಾಮಯ್ಯ

ಮಹತ್ವದ ಪೋಸ್ಟ್ ಹಂಚಿಕೊಂಡ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌

ತನ್ನವರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬದ ಜತೆ ವಿಜಯ್ ನಡೆ ಹೇಗಿತ್ತು ಗೊತ್ತಾ

ಮುಂದಿನ ಸುದ್ದಿ
Show comments