Webdunia - Bharat's app for daily news and videos

Install App

ಪತ್ನಿ ಮನೆಗೆ ಬಂದಳೆಂದು ಮಕ್ಕಳನ್ನು ಬಾವಿಗೆ ತಳ್ಳಿದ ಪಾಪಿ ತಂದೆ

Webdunia
ಶನಿವಾರ, 20 ಜೂನ್ 2015 (18:12 IST)
ಹೆಂಡತಿ ಮೇಲಿನ ಸಿಟ್ಟಿಗೆ ವ್ಯಕ್ತಿಯೋರ್ವ ಜನ್ಮ ಕೊಟ್ಟ ಮಕ್ಕಳನ್ನೇ ಬಾವಿಗೆ ತಳ್ಳಿದ ಧಾರುಣ ಘಟನೆ ತಾಲೂಕಿನ ಬೇಲೂರಿನಲ್ಲಿ ನಡೆದಿದೆ. 
 
ಈ ಕೃತ್ಯವನ್ನು ಎಸಗಿದ ಪಾಪಿ ತಂದೆಯನ್ನು ಚನ್ನಪ್ಪ ಜೋಡಿಗೇರಿ(30) ಎಂದು ಹೇಳಲಾಗಿದ್ದು, ಗ್ರಾಮದ ನಿವಾಸಿಯಾಗಿದ್ದಾನೆ. 
 
ಪ್ರಕರಣದ ವಿವರ: ಪ್ರತಿನಿತ್ಯ ಪಾನಮತ್ತನಾಗಿ ಬರುತ್ತಿದ್ದ ಚನ್ನಪ್ಪ ಜೋಡಿಗೇರಿ, ತನ್ನ ಹೆಂತಿಯನ್ನು ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸುವ ಮೂಲಕ ತನ್ನ ಪ್ರತಾಪ ತೋರುತ್ತಿದ್ದ. ಇದರಿಂದ ಬೇಸತ್ತಿದ್ದ ಪತ್ನಿ ಕೆಲ ದಿನಗಳ ಹಿಂದೆ ಮನೆ ಬಿಟ್ಟು ತೆರಳಿದ್ದಳು. ಆದರೆ ಇದು ಮತ್ತೆ ಬಂದಿದ್ದಳು ಎನ್ನಲಾಗಿದ್ದು, ಈ ವಿಷಯವನ್ನು ಮಗ ಈರಪ್ಪ ತನ್ನ ತಂದೆ ಜೋಡಿಗೇರಿಗೆ ತಿಳಿಸಿದ್ದಾನೆ. ಇದರಿಂದ ಕುಪಿತಗೊಂಡ ಪಾಪಿ ಜೋಡಿಗೇರಿ ತನ್ನ ಒಂದೂವರೆ ವರ್ಷದ ಮಗಳು ಹಾಗೂ ಮಗ ಈರಪ್ಪ ಇಬ್ಬರನ್ನೂ ಕೂಡ ಬಾವಿಯೊಂದರ ಬಳಿ ಕರೆತಂದು ನೀರಿಗೆ ತಳ್ಳಿದ್ದಾನೆ. ಪರಿಣಾಮ ಹಸುಗೂಸು ಸಾವನ್ನಪ್ಪಿದೆ. ಆದರೆ ಮಗ ಈರಪ್ಪ ಬಾವಿಯಲ್ಲಿ ಕಡಿಮೆ ನೀಡದ್ದ ಕಾರಣ ಬದುಕುಳಿದಿದ್ದಾನೆ ಎಂದು ತಿಳಿದು ಬಂದಿದೆ. 
 
ಇನ್ನು ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಹಿರಿಯ ಪೊಲೀಸರು ಧಾವಿಸಿ ಮಗ ಈರಪ್ಪನನ್ನು ರಕ್ಷಿಸಿ ಆರೋಪಿ ತಂದೆ ಜೋಡಿಗೇರಿಯನ್ನು ಬಂಧಿಸಿದ್ದಾರೆ. ಕಿರುಕುಳ ಹಾಗೂ ಹತ್ಯೆ ಆರೋಪ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments