Webdunia - Bharat's app for daily news and videos

Install App

ನಗರದಲ್ಲಿ ಆಕ್ಟೀವ್ ಆಗಿದೆ ನಕಲಿ ಡೈಮಂಡ್ ಗ್ಯಾಂಗ್

Webdunia
ಮಂಗಳವಾರ, 6 ಡಿಸೆಂಬರ್ 2022 (12:21 IST)
ನಗರದಲ್ಲಿ ಡೈಮಂಡ್ ಗ್ಯಾಂಗ್ ಆಕ್ಟಿವ್ ಆಗಿದ್ದು,ಕೋಟಿ - ಕೋಟಿ ಬೆಲೆಯ ಡೈಮಂಡ್ ಎಂದು ವಂಚನೆ ಮಾಡಲಾಗಿದೆ.ಮನೆಯಲ್ಲಿ ಡೈಮಂಡ್ ಇಟ್ಟರೆ ಒಳ್ಳೆಯದು ಎಂದು ನಂಬಿಸಿ ವಂಚನೆ ಮಾಡಿದ್ದಾರೆ.ಬ್ಯುಸಿನೆಸ್ ಮ್ಯಾನ್ ಗಳನ್ನೆ ಟಾರ್ಗೆಟ್ ಮಾಡಿ ಅಸಾಮಿಗಳು ವಂಚನೆ ಮಾಡಿದ್ದಾರೆ.ಡೈಮಂಡ್ ಕೊಡೋದಾಗಿ ಹೇಳಿ ಗ್ಯಾಂಗ್ ಅಡ್ವಾನ್ಸ್ ಹಾಕಿಸಿಕೊಳ್ಳುತ್ತಿದ್ದರು.
ಹೀಗೆ ಉದ್ಯಮಿಯೊಬ್ಬರಿಗೆ ಡೈಮಂಡ್ ಆಮಿಷವೊಡ್ಡಿ ವಂಚನೆ ಯತ್ನ ಮಾಡಿದ್ದಾರೆ.
 
ವಜ್ರದ ಬೆಲೆ ಹತ್ತು ಲಕ್ಷ, ಮಾರ್ಕೆಟ್ ನಲ್ಲಿ 12 ಲಕ್ಷ ಬೆಲೆ.ನಿಮಗೆ ಎರಡು ಲಕ್ಷ ಉಳಿತಾಯ ಎಂದು ಆಮಿಷ ವೊಡ್ಡಿದ ಮೂವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.ಡೈಮಂಡ್ ಹೆಸರಲ್ಲಿ ಚೀಟಿಂಗ್ ಮಾಡುತ್ತಿದ್ದ ಮೂವರನ್ನ  ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ.ಫ್ರೇಜರ್ ಟೌನ್ ಬಳಿ ಆರೋಪಿ ನಾಗರಾಜ್ ಗೆ ಪರಿಚಯವಾಗಿದ್ದ ಉದ್ಯಮಿ.ಪಿತ್ರಾರ್ಜಿತವಾಗಿ ಬಂದ ವಜ್ರದ ಕಲ್ಲು ನೆಕ್ಲಸ್ ಇದೆ, ಮಾರಾಟ ಮಾಡಬೇಕು ಎಂದಿದ್ದ ಆರೋಪಿ.ಮಾರ್ಕೆಟ್ ಬೆಲೆಗಿಂತ ಕಡಿಮೆ ಬೆಲೆಗೆ ಕೊಡುವುದಾಗಿ ವಂಚಿಸಿದ್ದಾರೆ.ಬಳಿಕ ಅಡ್ವಾನ್ಸ್ ಆಗಿ ಹತ್ತು ಸಾವಿರ ಉದ್ಯಮಿ ಕೊಟ್ಟಿದ್ದ .ನಂತರ 92 ಕ್ಯಾರಟ್ ವಜ್ರ ಇದೆ, ಅದರ ಬೆಲೆ 25 ಕೋಟಿ ಎಂದು ಮತ್ತೊಂದು ಆಮಿಷವೊಡ್ಡಿ ಹಣ ಹೊಂದಿಸಿಕೊಂಡು ಬಂದರೆ ಆ ದೊಡ್ಡ ವಜ್ರದ ಕಲ್ಲು ಕೊಡುವುದಾಗಿ ಆಮಿಷವೊಡ್ಡಿದ್ದಾರೆ.25 ಕೋಟಿ ಕೊಟ್ಟರೆ ವಜ್ರದ ನೆಕ್ಸಸ್ ಬದಲಿಗೆ ಒಂದು ವಜ್ರದ ಕಲ್ಲನ್ನು ಕೊಡುವುದಾಗಿ ವಂಚನೆ ಮಾಡಿದ್ದಾರೆ.ಈ ಬಗ್ಗೆ ಅನುಮಾನ ಮೂಡಿ ಪೊಲೀಸರಿಗೆ ದೂರು ಕೊಡಲಾಗಿದೆ. ನಾಗರಾಜ್‌, ಬಾಲಕೃಷ್ಣ ಹಾಗೂ ರಾಜೇಶ್ ವಿರುದ್ಧ ಉದ್ಯಮಿಯ ದೂರು ಆಧರಿಸಿ ಮೂವರನ್ನ ಪೊಲೀಸರು ಬಂಧಿಸಿದ್ದಯ.ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments