Webdunia - Bharat's app for daily news and videos

Install App

ಕೊಳೆವೆ ಬಾವಿಯಲ್ಲಿ ಅಳುತ್ತಿರುವ ಮಗು, ನಾಡಿನದ್ಯಂತ ಜನರಿಂದ ಪ್ರಾರ್ಥನೆ

Sampriya
ಗುರುವಾರ, 4 ಏಪ್ರಿಲ್ 2024 (12:03 IST)
Photo Courtesy X
ವಿಜಯಪುರ:  ಕೊಳವೆ ಬಾವಿಯಲ್ಲಿ ಸಿಲುಕಿರುವ 14 ತಿಂಗಳ ಮಗು ಸಾತ್ವಿಕನ ಹೊರ ತೆಗೆಯುವ ರಕ್ಷಣಾ ಕಾರ್ಯಾಚರಣೆ ಸಾಗುತ್ತಿದ್ದು, ಮಗು ಆಳುವ ಧ್ವನಿ ಕೇಳುತ್ತಿದ್ದು, ಸುರಕ್ಷಿತವಾಗಿ ಹೊರಬರಲಿ ಎಂದು ನಾಡಿನಾದ್ಯಂತ ಜನರು ಪ್ರಾರ್ಥಿಸುತ್ತಿದ್ದಾರೆ.

ಸದ್ಯ ಮಗು ಇರುವ ಸ್ಥಳಕ್ಕೆ ತಲುಪಿದ ರಕ್ಷಣಾ ತಂಡ ಇನ್ನೇನು ಮಗುವನ್ನು ಕೆಲವೇ ನಿಮಿಷಗಳಲ್ಲಿ ಹೊರತೆಗೆಯಲಿದೆ.

ಹೊರತೆಗೆದ ಕೂಡಲೇ ಮಗುವಿನ  ಆರೈಕೆಗೆ ಆ್ಯಂಬುಲೆನ್ಸ್ ಹಾಗೂ ವೈದ್ಯರ ತಂಡ ಸಿದ್ಧವಾಗಿದೆ. ಸತತ 16 ಗಂಟೆಗಳ ನಂತರ ಬಳಿಕ ಮಗು ಇರುವ ಸ್ಥಳಕ್ಕೆ ಕಾರ್ಯಚರಣೆ ತಂಡ ತಲುಪಿದೆ.

ಇನ್ನೂ ಮಗುವಿನ ರಕ್ಷಣಾ ಕಾರ್ಯಚರಣೆ ನೋಡಲು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ತಂಡೋಪತಂಡವಾಗಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಜನರ ನೂಕು ನುಗ್ಗಲಿಂದ ಕಾರ್ಯಾಚರಣೆಗೆ ತೊಂದರೆಯಾಗುತ್ತಿರುವುದಂದ ಪೊಲೀಸರು ಆಗಾಗ ಲಾಟಿ ಬೀಸಿ, ಜನರನ್ನು ಚದುರಿಸುತ್ತಿದ್ದಾರೆ. ಇಷ್ಟಾದರೂ ಜನರ ಕುತೂಹಲ ತಣಿದಿಲ್ಲ. ಇದರಿಂದ ಪೊಲೀಸರಿಗೆ ತಲೆ ಬಿಸಿಯಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಪ ಖರ್ಗೆ ಕುಟುಂಬಕ್ಕೆ ಸರ್ಕಾರ ಮೊದಲು ಪರಿಹಾರ ಕೊಡಲಿ: ಬಿವೈ ವಿಜಯೇಂದ್ರ

ಉಪವಾಸ ಮುಗಿದ ತಕ್ಷಣ ಏನನ್ನು ಸೇವಿಸಬೇಕು ಮತ್ತು ಸೇವಿಸಬಾರದು

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಪ್ರವಾಹ ವೀಕ್ಷಣೆಗೆ ಹೊರಟ ಸಿಎಂ ಸಿದ್ದರಾಮಯ್ಯ: ಈವಾಗ್ಲಾದ್ರೂ ನೆನಪಾಯ್ತಲ್ವಾ ಆರ್ ಅಶೋಕ್ ವ್ಯಂಗ್ಯ

ಮುಂದಿನ ಸುದ್ದಿ
Show comments