ಎಲ್ಲಿ ಮಾಡಿದ ಭಾಷಣದಲ್ಲಿ Kalladaka Prabhakar Bhat ಮೇಲೆ ದಾಖಲಾಯಿತು ಪ್ರಕರಣ

Sampriya
ಸೋಮವಾರ, 2 ಜೂನ್ 2025 (21:06 IST)
Photo Credit X
ಮಂಗಳೂರು: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹತ್ಯೆಗೆ ಸಂತಾಪ ಸೂಚಿಸುವ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ರಾಷ್ಟ್ರೀಯ ಸ್ವಾಮ್ಯಸೇವಕ ಸಂಘದ (ಆರ್‌ಎಸ್‌ಎಸ್) ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಲ್ಲಡ್ಕ ಪ್ರಭಾಕರ್‌ ಭಟ್ ಅವರು ಮೇ 12 ರಂದು ಕಾವಳಪಡೂರು ಗ್ರಾಮದ ಮದ್ವ ಅರಮನೆ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಭಾಷಣ ಮಾಡಿದ್ದರು.

ಪೊಲೀಸರ ಪ್ರಕಾರ, ಕಲ್ಲಡ್ಕ ಪ್ರಭಾಕರ ಭಟ್ ಅವರು ಸಮಾರಂಭದಲ್ಲಿ ಭಾಗವಹಿಸಿದ್ದ ಸುಮಾರು 500 ಜನರನ್ನುದ್ದೇಶಿಸಿ ಮಾತನಾಡಿದದರು.

ಈ ವೇಳೆ ಅವರು “ಸಾಮಾಜಿಕ ಸಾಮರಸ್ಯವನ್ನು ಕದಡುವ, ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉಂಟುಮಾಡುವ ಮತ್ತು ಕೋಮು ಸೌಹಾರ್ದತೆಯನ್ನು ಪ್ರಚೋದಿಸುವ ಹೇಳಿಕೆಗಳನ್ನು ನೀಡಿದ್ದಾರೆ” ಎಂದು ಆರೋಪಿಸಲಾಗಿದೆ. ಇದರ ಹಿನ್ನೆಲೆ ಅವರ ವಿರುದ್ಧ ವಿಭಾಗ 353(2) ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ದೃಢಪಡಿಸಿದರು.

ಪೊಲೀಸರ ಪ್ರಕಾರ, ಮೇ 1 ರಂದು ಅಪರಿಚಿತರಿಂದ ನಡೆದ ಯುವಕ ಸುಹಾಸ್ ಶೆಟ್ಟಿ ಹತ್ಯೆಗೆ ಸಂತಾಪ ಸೂಚಿಸುವ ಕಾರ್ಯಕ್ರಮವೊಂದರಲ್ಲಿ ಆರ್‌ಎಸ್‌ಎಸ್ ಮುಖಂಡ ಮಾತನಾಡುತ್ತಿದ್ದರು.


<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ವಿಧಾನಸಭೆ ಚುನಾವಣೆ, ನಾಳೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ

ಮಕ್ಕಳು ಸೇರಿದಂತೆ 17ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರ್ಯ ಗುಂಡೇಟಿಗೆ ಬಲಿ

ನಿಮ್ಮ ಮಗನೇ ಚಿನ್ನ ಕದ್ದಿದ್ದು ಎಂದಿದ್ದಕ್ಕೆ ಜೀವನೇ ತೆಗೆದ್ಬಿಟ್ಟ

ಇವರಿಗಿಂತ, ಇಂದಿರಾ ಗಾಂಧಿಗೆ ಧೈರ್ಯ ಜಾಸ್ತಿಯಾಗಿತ್ತು: ರಾಹುಲ್ ಗಾಂಧಿ ಕಿಡಿ

ಮಗಳ ಶವ ಮುಂದಿಟ್ಟು ಲಂಚಕ್ಕೆ ಬೇಡಿಕೆ: ತಂದೆಯ ಭಾವುಕ ಪೋಸ್ಟ್ ಬೆನ್ನಲ್ಲೇ ಪೊಲೀಸರಿಗೆ ಶಾಕ್‌

ಮುಂದಿನ ಸುದ್ದಿ
Show comments