ಬೆಂಗಳೂರು : ರಸ್ತೆ ಬದಿಯ ಪುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಲಾರಿ ಹರಿದು ಬಾಲಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ನಾಗಮಂಗಲದಲ್ಲಿ ನಡೆದಿದೆ.
ಜೋತು ಚೌಹಾನ್(14) ಮೃತ ಬಾಲಕ. ಮಹಾರಾಷ್ಟ್ರ ಮೂಲದ ಒಂದೇ ಕುಟುಂಬದ 15 ಮಂದಿ ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು ಬೆಂಗಳೂರು ರಸ್ತೆಯ ಜಾಸ್ ಟೋಲ್ ಬಳಿ ರಸ್ತೆ ಬದಿಯ ಫುಟ್ ಫಾತ್ ಬಳಿ ರಾತ್ರಿ ಮಲಗಿದ್ದರು. ಈ ವೇಳೆ ಕಂಟೇನರ್ ಲಾರಿ ವೇಗವಾಗಿ ಬಂದು ಮಲಗಿದ್ದವರ ಮೇಲೆ ಹರಿದಿದೆ. ಘಟನೆಯಲ್ಲಿ ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಇನ್ನುಳಿದ 13 ಮಂದಿ ಪವಾಡ ರೀತಿಯಲ್ಲಿ ಪಾರಾಗಿದ್ದಾರೆ.
ಅಪಘಾತವಾದ ತಕ್ಷಣ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸದ್ಯಕ್ಕೆ ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.