Select Your Language

Notifications

webdunia
webdunia
webdunia
webdunia

ಆತ್ಮಹತ್ಯೆಗೆ ಶರಣಾದ 7 ನೇ ತರಗತಿ ವಿದ್ಯಾರ್ಥಿನಿ

ಆತ್ಮಹತ್ಯೆಗೆ ಶರಣಾದ 7 ನೇ ತರಗತಿ ವಿದ್ಯಾರ್ಥಿನಿ
ಬೆಂಗಳೂರು , ಗುರುವಾರ, 2 ಜುಲೈ 2015 (09:00 IST)
ಸಿಲಿಕಾನ್ ಸಿಟಿಯ ವಿಜಯನಗರದಲ್ಲಿ 7 ನೇ ತರಗತಿಯ ಪುಟ್ಟ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ವರದಿಯಾಗಿದೆ. 
 
ವಿಜಯನಗರದ ಸಮೀಪದ ಸುಬ್ಬಣ್ಣ ಗಾರ್ಡನ್‌ನಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು ಬಾಲಕಿಯನ್ನು ಸಿದ್ದರಾಜು ಮತ್ತು ಸುನೀತಾ ದಂಪತಿಯ ಮಗಳಾದ ಪೂಜಾ ಎಂದು ಗುರುತಿಸಲಾಗಿದೆ. ಆಕೆ  ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. 
 
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಪೂಜಾ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾಳೆ. 
 
ಸಾವಿನ ನಿರ್ಧಾರಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಮಗಳು ಬಹಳ ದಿನಗಳಿಂದ ತೀವೃತರನಾದ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಇದೇ ಕಾರಣಕ್ಕೆ ಆಕೆ ಸಾವಿಗೆ ಶರಣಾಗಿರಬಹುದು ಎಂದು ಪೋಷಕರು ತಿಳಿಸಿದ್ದಾರೆ.
 
ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share this Story:

Follow Webdunia kannada