ಬಾಗಪ್ಪ ಹರಿಜನ ಮೇಲಿನ ಶೂಟೌಟ್: 6 ಆರೋಪಿಗಳ ಬಂಧನ

Webdunia
ಮಂಗಳವಾರ, 15 ಆಗಸ್ಟ್ 2017 (16:29 IST)
ಭೀಮಾತೀರದ ಕುಖ್ಯಾತಿಯ ಬಾಗಪ್ಪ ಹರಿಜನ ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು 6 ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ.

ಹೆಚ್ಚುವರಿ ಎಸ್ಪಿ ನೇತೃತ್ವದ ತಂಡ 6 ಆರೋಪಿಗಳನ್ನ ಬಂಧಿಸಿದ್ದು, ಬಂಧಿತರಿಂದ 1 ಬೊಲೆರೋ ವಾಹನ ಮತ್ತು 6 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನ ರಮೇಶ್ ಹಡಪದ, ಭೀಮಶ್ಯಾ ಹರಿಜನ, ನಾಮದೇವ ಹೊಡ್ಡಮನಿ, ರಜಾಕ್ ಕಾಂಬ್ಳೆ, ಪ್ರಭು ಜಮಾದಾರ, ಮಲ್ಲೇಶ ಬಿಂಜಗೇರಿ ಎಂದು ಗುರ್ತಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಎಸ್ಪಿ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.

ಆಗಸ್ಟ್ 8ರಂದು ಕೊಲೆ ಪ್ರಕರಣವೊಂದರ ವಿಚಾರಣೆಗಾಗಿ ಬಾಗಪ್ಪ ಹರಿಜನ ವಿಜಯಪುರ ಕೋರ್ಟ್`ಗೆ ಹಾಜರಾಗಲು ಬಂದಿದ್ದಾಗ ಗುಂಡಿನ ದಾಳಿ ನಡೆದಿತ್ತು. 5 ಸುತ್ತು ಗುಂಡು ಬಾಗಪ್ಪ ಹರಿಜನ ಮೇಲೆ ಪ್ರಯೋಗಿಸಲಾಗಿತ್ತು. ತೀವ್ರ ಗಾಯಗೊಂಡಿರುವ ಬಾಗಪ್ಪ ಹರಿಜನ ಹೈದ್ರಾಬಾದ್`ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹೆಚ್ಚು ಸಮಯ ವಾಹನ ನಿಲ್ಲಿಸುವವರಿಗೆ ಬೀಳುತ್ತೆ ಜೇಬಿಗೆ ಕತ್ತರಿ

ಪಾಕಿಸ್ತಾನದ ಅವಸ್ಥೆಯೇ... ಶ್ರೀಲಂಕಾಗೆ ಅವಧಿ ಮೀರಿದ ಆಹಾರ ಸಾಮಗ್ರಿ ಕಳುಹಿಸಿದ ಪಾಕ್

ಹಿಟ್ಟು ಬೀಸಲೆಂದು ಗಿರಣಿಗೆ ತೆರಳಿದ್ದ ಬಾಲಕಿ ಮೇಲೆ ಗ್ಯಾಂಗ್ ರೇಪ್

ಸಿದ್ದರಾಮಯ್ಯ, ಶಿವಕುಮಾರ್ ಬ್ರೇಕ್‌ಫಾಸ್ಟ್‌ ಮೀಟಿಂಗ್ ಕಥೆ ಬಿಚ್ಚಿಟ್ಟ ಜೆಡಿಎಸ್

ಪೋಕ್ಸೋ ಪ್ರಕರಣದಲ್ಲಿ ಬಿಎಸ್ ಯಡಿಯೂರಪ್ಪ ಬಿಗ್ ರಿಲೀಫ್‌

ಮುಂದಿನ ಸುದ್ದಿ
Show comments