Webdunia - Bharat's app for daily news and videos

Install App

ನಾಳೆ 5 ಮತ್ತು 8 ನೇ ತರಗತಿ ಬೋರ್ಡ್ ಎಕ್ಸಾಂ ಭವಿಷ್ಯ ನಿರ್ಧಾರ..!

Webdunia
ಸೋಮವಾರ, 13 ಮಾರ್ಚ್ 2023 (18:29 IST)
ಕಳೆದೊಂದು ವರ್ಷದಿಂದ ಶಿಕ್ಷಣ ಇಲಾಖೆಯಲ್ಲಿ ಬರಿ ಗೊಂದಲ ಗಲಾಟೆ, ವಿವಾದಗಳ ಸುದ್ದಿಯೇ ಹೆಚ್ಚಾಗಿತ್ತು.. ಆದ್ರೀಗ ಶಿಕ್ಷಣ ಇಲಾಖೆ ಮಕ್ಕಳ ಭವಿಷ್ಯಕ್ಕಾಗಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಐದನೇ ತರಗತಿ ಹಾಗು ಎಂಟನೆ ತರಗತಿಗೆ ಪಬ್ಲಿಕ್ ಮಾದರಿಯ ಎಕ್ಸಾಂ ನಡೆಸಲು ಮುಂದಾಗಿದೆ ಆದ್ರೆ ಈ ಪರೀಕ್ಷೆ ಈಗ ಪ್ರತಿಷ್ಠೆಯ ಕಣವಾಗಿದ್ದು ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಹಠಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಪರದಾಡುವ ಸ್ಥಿತಿ ಎದುರಾಗಿದೆ. ಶಿಕ್ಷಣ ಇಲಾಖೆ ಪ್ರಸಕ್ತ ವರ್ಷದಲ್ಲಿಯೇ ಹಠಕ್ಕೆ ಬಿದ್ದಂತೆ 5 ಹಾಗೂ 8 ನೇ ತರಗತಿಗೆ ಬೋರ್ಡ್ ಮಾದರಿಯ ಎಕ್ಸಂ ನಡೆಸಲು ಮುಂದಾಗಿದೆ. ಆದ್ರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೆಲವು ಪೋಷಕರು ಹಾಗೂ ಖಾಸಗಿ ಶಾಲೆಗಳ ಒಕ್ಕೂಟ ಶಿಕ್ಷಣ ಇಲಾಖೆಯ ನಡೆ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ರೂ ಮೊನ್ನೆ ವಿಚಾರಣೆ ನಡೆಸಿರುವ ಹೈಕೋರ್ಟ್ ಪರೀಕ್ಷೆಗಳನ್ನ ರದ್ದು ಪಡಿಸಿತ್ತು ಆದ್ರೆ ಇದನ್ನ ಪ್ರಶ್ನಿಸಿ ಸರ್ಕಾರ ಪರೀಕ್ಷೆಗಳನ್ನ ಮೂಂದುಡಿ ಮೇಲ್ಮನವಿಗೆ ಹೊಗಿದೆ ಇದು ಪೋಷಕರು ಹಾಗು ಖಾಸಗಿ ಶಾಲೆಗಳ ಆಕ್ರೋಶಕ್ಕೆ ಕಾರಣವಾಗಿದೆ.

 ಹೈಕೋರ್ಟನಲ್ಲಿ ಮೆಲ್ಮನವಿ ಹೋದ ಹಿನ್ನಲೆ ಶಿಕ್ಷಣ ಇಲಾಖೆಯ ನಡೆ ವಿರುದ್ಧದ ಖಾಸಗಿ ಶಾಲೆಗಳು ಹಾಗು ಪೋಷಕರು ತಿರುಗಿ ಬೀದಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಮಟ್ಟದಲ್ಲಿಯೇ ಎಕ್ಸಂ ಮಾಡ್ತೀವಿ ಅಂತಾ ಪಟ್ಟು ಹಿಡದಿವೆ... ಕೋರ್ಟ್ ಆದೇಶದ ಬೆನ್ನಲೆ ನಮ್ಮ ನಮ್ಮ ಶಾಲಾ ಹಂತದಲ್ಲಿಯೇ ಎಕ್ಸಂ ಮಾಡ್ತೀವಿ ಈ ವರ್ಷ ಅಂತಿದ್ದು ಆದ್ರೆ ಹಠಕ್ಕೆ ಬೀದಿರುವ ಶಿಕ್ಷಣ  ಇಲಾಖೆ ಹೈಕೊರ್ಟ್ ನಡೆ ಪ್ರಶ್ನಿಸಿ ಸರ್ಕಾರ ಮೇಲ್ಮನವಿಗೆ ಹೋಗಿದ್ದು ಕೋರ್ಟ್ ತುರ್ತು ವಿಚಾರಣೆಯನ್ನ ಮಂಗಳವಾರಕ್ಕೆ ಅಂದ್ರೆ ನಾಳೆಗೆ ಕೈಗೆತ್ತುಕೊಂಡಿದೆ.. ಇದರಿಂದ ಶಿಕ್ಷಣ ಇಲಾಖೆ ಕೋರ್ಟ್ ತೀರ್ಪಿನವರೆಗೂ ಐದು ಹಾಗೂ ಎಂಟನೇ ತರಗತಿಯ ಪರೀಕ್ಷೆಗಳನ್ನ ಮೂಂದುಡಿದೆ.. ಪರೀಕ್ಷೆಗಳನ್ನ ಮೂಂದುಡಿರುವ ಇಲಾಖೆಯ ನಡೆಗೆ ಪೋಷಕರ ಸಂಘಟನೆ ಹಾಗೂ ರಾಜ್ಯ ಖಾಸಗಿ ಶಾಲೆಗಳ ಸಂಘ ಈ ವರ್ಷ ಶಾಲಾ ಹಂತದಲ್ಲಿಯೇ ಪರೀಕ್ಷೆ ನಡೆಸಲು ಬಿಡಿ ಮುಂದಿನ ವರ್ಷದಿಂದ ಪಬ್ಲಿಕ್ ಎಕ್ಸಂ ನಡೆಸುವ ಬಗ್ಗೆ ಚರ್ಚಿಸಿ ನಿರ್ಧಾರ ಮಾಡೋಣಾ ಅಂತಾ ಪಟ್ಟು ಹಿಡದಿದೆ. 

 ನಿಗಧಿಯಂತೆ ಇಂದಿನಿಂದಲೇ ಐದು ಹಾಗೂ ಎಂಟನೆ ತರಗತಿ ಪರೀಕ್ಷೆಗಳ ನಡೆಯಬೇಕಿತ್ತು ಆದ್ರೆ ಕೊರ್ಟ್ ಎಕ್ಸಂ ರದ್ದು ಬನ್ನಲೆ ಶಿಕ್ಷಣ ಇಲಖೆ ಕಳೆದ ವರ್ಷದ ಮಾದರಿಯಲ್ಲಿಯೇ ಐದು ಹಾಗೂ ಎಂಟನೆ ತರಗತಿಗೆ ಪರೀಕ್ಷೆಗಳನ್ನ ನಡೆಸದೆ ಎಕ್ಸಂ ಮುಂದುಡಿ ಮೇಲ್ಮನವಿಗೆ ಹೋಗಿದೆ.  ಸದ್ಯ ಪರೀಕ್ಷೆಗಳನ್ನ ಮೂಂದುಡಿರುವುದರಿಂದ ಇದೇ ತಿಂಗಳು ನಡೆಯಬೇಕಿದ್ದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಎಕ್ಸಂಗಳ ಮೇಲೂ ಎಫೆಕ್ಟ್ ಬೀರುವ ಸಾಧ್ಯತೆ ಎದುರಾಗಿದೆ. ಈಗಾಗಲೇ ಪೂರ್ವ ನಿಗಧಿಯಂತೆ ಪಿಯು ಎಕ್ಸಂ ಶುರುವಾಗಿದ್ದು ಇದೇ 29 ರವರೆಗೆ ನಡೆಯಲಿದೆ ಆದ್ರೆ ಈ ತಿಂಗಳ ಕೊನೆಯಲ್ಲಿ ಶುರುವಾಗುವ ಎಸ್ಎಸ್ಎಲ್ ಸಿ ಎಕ್ಸಂಗೆ ಐದು ಹಾಗೂ ಎಂಟನೆ ತರಗತಿಯ ಪರೀಕ್ಷೆಯ ಎಫೆಕ್ಟ್ ಎದುರಾಗುವ ಸಾಧ್ಯತೆ ಇದೆ ಎಸ್ಎಸ್ಎಲ್ ಸಿ ಹಾಗು ಮೂಂದುಡಿರುವ ಐದು ಹಾಗು ಎಂಟನೇ ತರಗತಿಯ ಪರೀಕ್ಷೆಗಳನ್ನ ಏಕ ಕಾಲಕ್ಕೆ ನಡೆಸಲು ಕೊಠಡಿಗಳು ಹಾಗು ಶಿಕ್ಷಕರ ಮೆಲ್ವಿಚಾರಕರ ಕೊರತೆ ಎದುರಾಗುವ ಸಾಧ್ಯತೆ ಇದೆ.. ಮತ್ತೊಂದಡೆ ಪದೇ ಪದೇ ಪರೀಕ್ಷೆಗಳ ಮೂಂದುಡುತ್ತಿರವುದು ಪೋಷಕರಿಗೂ ಬಿಗ್ ಟೆನ್ಷನ್ ಗೆ ಕಾರಣವಾಗಿದ್ದು ಖಾಸಗಿ ಶಾಲೆಗಳ ಸಂಘಟನೆ ವಿರೋಧ ಹೊರ ಹಾಕಿದೆ.

ಒಟ್ನಲ್ಲಿ  ಪಬ್ಲಿಕ್ ಮಾದರಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿರುವ ಶಿಕ್ಷಣ ಇಲಾಖೆಯ ನಡೆ ಮಕ್ಕಳ ಪಾಲಿಗ ಅದೇಷ್ಟು ಉಪಯುಕ್ತವೋ ಗೊತ್ತಿಲ್ಲ ಆದ್ರೆ ಪದೇ ಪದೇ ಎಕ್ಸಂ ಮೂಂದುಡುತ್ತಿರುವುದು ಮಾತ್ರ ಪೋಷಕರು ಹಾಗೂ ಮಕ್ಕಳ ಆತಂಕಕ್ಕೆ ಕಾರಣವಾಗಿದೆ. ಇನ್ನು ನಾಳೆ 5 ಮತ್ತು 8 ನೇ ತರಗತಿ ಬೋರ್ಡ್ ಎಕ್ಸಂ ಭವಿಷ್ಯ ನಿರ್ಧಾರವಗಾಲಿದೆ. ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯನ್ನ ಹೈಕೋರ್ಟ್ ವಿಭಾಗೀಯ ಪೀಠ ನಾಳೆ ತುರ್ತು ವಿಚಾರಣೆ ಕೈಗೆತ್ತುಕೊಂಡಿದ್ದು ನಾಳೆ 5 ಹಾಗೂ 8 ತರಗತಿಯ ಎಕ್ಸಂ ಭವಿಷ್ಯದ ಬಗ್ಗೆ ವಿಭಾಗೀಯ ಪೀಠ ತೀರ್ಮಾನ ಹೊರ ಬೀಳುವ ಸಾಧ್ಯತೆ ಇದ್ದು ಕೋರ್ಟ್ ತೀರ್ಪಿನವರೆಗೂ ಕಾದುನೋಡಬೇಕಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments