Select Your Language

Notifications

webdunia
webdunia
webdunia
webdunia

ಅತ್ಯಾಚಾರ ಆರೋಪಿಗೆ 5 ವರ್ಷ ಜೈಲು

ಅತ್ಯಾಚಾರ ಆರೋಪಿಗೆ 5 ವರ್ಷ ಜೈಲು
ಬೆಂಗಳೂರು , ಸೋಮವಾರ, 1 ಫೆಬ್ರವರಿ 2016 (08:48 IST)
ಎಂಟು ವರ್ಷದ ಪುಟ್ಟ ಬಾಲಕಿಯನ್ನು ಲೈಂಗಿಕವಾಗಿ ಶೋಷಿಸಿದ್ದ ಅಪರಾಧಿಗೆ 5 ವರ್ಷ ಶಿಕ್ಷೆಯಾಗಿದೆ. ನಗರದ 55ನೇ ಸಿಸಿಹೆಚ್ ನ್ಯಾಯಾಲಯ ಈ ಶಿಕ್ಷೆಯನ್ನು ವಿಧಿಸಿದೆ. ಜತೆಗೆ 50,000 ರೂಪಾಯಿ ದಂಡವನ್ನು ಸಹ ವಿಧಿಸಿದೆ.

ಕಳೆದ ವರ್ಷ ಅಕ್ಟೋಬರ್ 1 ರಂದು ನಾಗಶೆಟ್ಟಿಹಳ್ಳಿಯ ಮುನೀಂದ್ರ ಎಂಬ ಯುವಕ ಸಂಜಯನಗರದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆಕೆಯ ಪೋಷಕರು ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
 
ಆರೋಪಿಯ ಮೇಲೆ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು.  

Share this Story:

Follow Webdunia kannada