Webdunia - Bharat's app for daily news and videos

Install App

ಎಮ್ ಜಿ ರಸ್ತೆ: ಕಾರಿನಲ್ಲಿದ್ದ ಯುವತಿಯರ ಜತೆ ಯುವಕರ ಪುಂಡಾಟ

Webdunia
ಭಾನುವಾರ, 23 ನವೆಂಬರ್ 2014 (17:25 IST)
ರಸ್ತೆ ಬದಿಯಲ್ಲಿ ಕಾರ್ ಪಾರ್ಕ್ ಮಾಡಿಕೊಂಡ ನಿಂತಿದ್ದ 5 ಜನ ಯುವತಿಯರಿಗೆ, 5 ಜನ ಯುವಕರು ಕಿರುಕುಳ ನೀಡಿದ ಘಟನೆ ನಗರದ ಎಮ್ ಜಿ ರೋಡ್‌ ಬಳಿ ನಡೆದಿದೆ. ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ರಾತ್ರಿ 11.30 ರ ಸುಮಾರಿಗೆ ಈ ಘಟನೆ ನಡೆದಿದೆ. ಇಂದಿರಾನಗರದ ನಿವಾಸಿಯಾದ ಯುವತಿಯೋರ್ವಳು ತನ್ನ 5 ಜನ ಸ್ನೇಹಿತೆಯರೊಂದಿಗೆ ಎಮ್ ಜಿ ರೋಡ್‌‌ನ ಜೊಯ್ ಅಲುಕಾಸ್ ಒಂದರ ಬಳಿ ನಿಂತಿದ್ದರು. ಅವರ ಕಾರ್ ಚಾಲಕ ಐಸ್ ಕ್ರೀಮ್ ತರಲು ಹೋದಾಗ ಅಲ್ಲಿಗೆ ಬಂದ ಮೂವರು ಯುವಕರು 15 ನಿಮಿಷಗಳ ಕಾಲ ಯುವತಿಯರ ಕಡೆ ದೃಷ್ಟಿ ನೆಟ್ಟು ನೋಡಿದ್ದಾರೆ ಮತ್ತು ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಇದರಿಂದ ಬೆದರಿದ ಯುವತಿಯರು ಕಾರ್ ಒಳಗೆ ಹೋಗಿ ಸೆಂಟ್ರಲ್ ಲಾಕ್ ಮಾಡಿಕೊಂಡು ಕುಳಿತಾಗ ಮತ್ತಿಬ್ಬರು ಯುವಕರೊಂದಿಗೆ ಅಲ್ಲಿಗೆ ಬಂದ ಯುವಕರು ಬ್ಲೇಡ್ ತೋರಿಸಿ ಕಾರ್ ಡೋರ್ ತೆಗೆಯುವಂತೆ ಬೆದರಿಕೆ ಹಾಕಿದ್ದಾರೆ.
 
ಬೆದರಿದ ಯುವತಿಯರು ರಕ್ಷಣೆಗಾಗಿ  ಕಿರುಚಿಕೊಂಡಿದ್ದಾರೆ. ಅವರ ಕಿರುಚಾಟವನ್ನು ಗಮನಿಸಿದ  ಸ್ಥಳೀಯರು ಕಾರ್ ಸಮೀಪ ಬಂದಾಗ  5 ಜನ ಹುಡುಗರು ತಮಗೆ ಏನು ಗೊತ್ತಿಲ್ಲ, ತಾವೇನು ಮಾಡೇ ಇಲ್ಲ ಎಂಬಂತೆ ಒಂದೊಂದು ಕಡೆ ಹೋಗಿದ್ದಾರೆ ಎಂದು ಮಾಹಿತಿ ಲಭಿಸಿದೆ. 
 
ಯುವತಿಯರ ಅಪಹರಣ ಮಾಡಲು ಅಥವಾ ದರೋಡೆ ನಡೆಸಲು ಪ್ರಯತ್ನ ನಡೆಸಲಾಗುತ್ತಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ಫೋಟೋವನ್ನು ತೆಗೆದುಕೊಂಡಿರುವ ಯುವತಿಯರು ಅದನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. 
 
ದೂರು ನೀಡಿದವರ ಅಕ್ಷರ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂಬು ಕುಂಟು ನೆಪ ಹೇಳಿ ನಿನ್ನೆ ಪ್ರಕರಣ ದಾಖಲಿಸಿಕೊಳ್ಳದಿದ್ದ ಪೊಲೀಸರು ಇಂದು ಆರೋಪಿಗಳ ಎಫ್ಐಆರ್ ದಾಖಲಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments