Webdunia - Bharat's app for daily news and videos

Install App

ನೆರೆಯಲ್ಲಿ ಮನೆ ಕಳಕೊಂಡವರಿಗೆ 5 ಲಕ್ಷ ರು

Webdunia
ಶನಿವಾರ, 14 ಆಗಸ್ಟ್ 2021 (08:03 IST)
ಬೆಂಗಳೂರು (ಆ.14):  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜುಲೈನಲ್ಲಿ ಉಂಟಾದ ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ, ದುರಸ್ತಿ ಕಾರ್ಯ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ನೀಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಭಾಗಶಃ ಅಥವಾ ಸಂಪೂರ್ಣ ಹಾನಿಗೊಂಡ ಮನೆಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿ ಅನ್ವಯ ನೀಡಬೇಕಿದ್ದ 95,100 ರು. ಬದಲಿಗೆ ರಾಜ್ಯದಿಂದ ಹೆಚ್ಚುವರಿಯಾಗಿ 4,04,900 ರು. ಸೇರಿಸಿ 5 ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ಹೇಳಲಾಗಿದೆ.
ಜುಲೈನಲ್ಲಿ ರಾಜ್ಯದ 13 ಜಿಲ್ಲೆಗಳ 61 ತಾಲೂಕುಗಳನ್ನು ಪ್ರವಾಹಪೀಡಿತ ತಾಲೂಕು ಎಂದು ಘೋಷಿಸಲಾಗಿತ್ತು. ಈ ವ್ಯಾಪ್ತಿಯಲ್ಲಿ ಮನೆ ಹಾನಿ, ಮನೆಗಳಲ್ಲಿನ ಗೃಹೋಪಯೋಗಿ ವಸ್ತುಗಳು ಹಾನಿಯಾಗಿರುವ ನೆರೆ ಸಂತ್ರಸ್ತರಿಗೆ ಪರಿಹಾರವನ್ನು ಕೇಂದ್ರ ಸರ್ಕಾರದ ಎಸ್ಡಿಆರ್ಎಫ್, ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ನೀಡಲಾಗುತ್ತಿತ್ತು. ಆಗಸ್ಟ್ 12ರಂದು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರವು ಪರಿಷ್ಕೃತ ಪರಿಹಾರ ದರ ಪಟ್ಟಪ್ರಕಟಿಸಿದೆ.
ಪರಿಷ್ಕೃತ ಪರಿಹಾರ ದರ:  ಪ್ರವಾಹ ನೀರು ನುಗ್ಗಿರುವ ಮನೆಗಳ ಗೃಹೋಪಯೋಗಿ ವಸ್ತು, ಬಟ್ಟೆ-ಬರೆ ಹಾನಿಗೆ 3,800 ರು. ಇರುವ ಮಾರ್ಗಸೂಚಿ ದರದ ಬದಲಿಗೆ 10 ಸಾವಿರು ರು. ನೀಡಲಾಗುವುದು. ಶೇ.75ಕ್ಕಿಂತ ಹೆಚ್ಚು (ಸಂಪೂರ್ಣ) ಹಾನಿಯಾಗಿರುವ ಮನೆಗಳಿಗೆ 95,100 ರು. ಪರಿಹಾರ ನೀಡಲಾಗುತ್ತಿತ್ತು. ಈ ಮೊತ್ತವನ್ನು 5 ಲಕ್ಷ ರು.ಗಳಿಗೆ ಪರಿಷ್ಕರಣೆ ಮಾಡಲಾಗಿದೆ. ಶೇ.25ರಿಂದ ಶೇ.75ರಷ್ಟುತೀವ್ರ ಹಾನಿಯಾಗಿರುವ (ಕೆಡವಿ ಪುನರ್ನಿರ್ಮಾಣ ಮಾಡಬೇಕಿರುವ) ಮನೆಗಳಿಗೆ 95,100 ರು. ಬದಲಿಗೆ 5 ಲಕ್ಷ ರು., ಶೇ.25ರಿಂದ ಶೇ.75ರಷ್ಟುತೀವ್ರ ಹಾನಿಯಾಗಿದ್ದರೂ ದುರಸ್ತಿ ಮಾಡಬಹುದಾದ ಮನೆಗೆ 95,100 ರು.ಗಳಿದ್ದ ಪರಿಹಾರವನ್ನು 3 ಲಕ್ಷ ರು.ಗಳಿಗೆ ಪರಿಷ್ಕರಣೆ ಮಾಡಲಾಗಿದೆ.
ಇನ್ನು ಶೇ.15ರಿಂದ 25ರಷ್ಟುಭಾಗಶಃ ಮನೆ ಹಾನಿಗೆ 5,200 ರು.ಗಳಿದ್ದ ಪರಿಹಾರವನ್ನು 50 ಸಾವಿರ ರು.ಗಳಿಗೆ ಹೆಚ್ಚಿಸಲಾಗಿದೆ. ಪರಿಷ್ಕೃತ ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರ ಪಾವತಿಸಲಿದ್ದು, ಜಿಲ್ಲಾ ವಿಪತ್ತು ಪರಿಹಾರ ನಿಧಿಯಡಿ ಪರಿಹಾರವನ್ನು ಒದಗಿಸಲಾಗುವುದು ಎಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಮತ್ತು ಸೇವೆಗಳ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪೊಲೀಸರಿಬ್ಬರ ನಕಲಿ ಎನ್‌ಕೌಂಟರ್‌: ಪಂಜಾಬ್‌ನ ನಿವೃತ್ತ ಪೊಲೀಸ್ ಅಧಿಕಾರಿಗೆ 10ವರ್ಷ ಕಠಿಣ ಜೈಲು ವಾಸ

ಕರಾವಳಿ ಭಾಗದಲ್ಲಿ ಭಾರೀ ಮಳೆಯ ಮುನ್ಸೂಚನೆ: ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

130 ಗಂಟೆ ನಿರಂತರ ಭರತನಾಟ್ಯ, 3ಗಂಟೆಗೊಮ್ಮೆ 15 ನಿಮಿಷ ಬ್ರೇಕ್‌, ವಿಶ್ವದಾಖಲೆಯತ್ತ ಮಂಗಳೂರಿನ ಯುವತಿ

ಗೋವಾ ಸಿಎಂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಡಿಸಿಎಂ ಡಿಕೆ ಶಿವಕುಮಾರ್‌

ಯಾವಾ ಸಾಧನೆಗೆ ಸಾಧನಾ ಸಮಾವೇಶ ಎಂದು ಕಾಂಗ್ರೆಸ್ಸಿಗರೇ ಉತ್ತರಿಸಬೇಕು: ನಿಖಿಲ್ ಕುಮಾರಸ್ವಾಮಿ

ಮುಂದಿನ ಸುದ್ದಿ
Show comments