Select Your Language

Notifications

webdunia
webdunia
webdunia
webdunia

49 ಕೋಟಿ ಕಡತ ನಾಪತ್ತೆ ಪ್ರಕರಣ: ನಕಲಿ ಸಹಿ ಬಳಸಿ ಲಪಟಾಯಿಸಿದ್ದ ಅಧಿಕಾರಿಗಳು...?!

49 ಕೋಟಿ ಕಡತ ನಾಪತ್ತೆ ಪ್ರಕರಣ: ನಕಲಿ ಸಹಿ ಬಳಸಿ ಲಪಟಾಯಿಸಿದ್ದ ಅಧಿಕಾರಿಗಳು...?!
ಬೆಂಗಳೂರು , ಶುಕ್ರವಾರ, 19 ಡಿಸೆಂಬರ್ 2014 (15:46 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸುಮಾರು 49ಕೋಟಿ ಮೊತ್ತದ ದಾಖಲೆಗಳಿದ್ದ ಕಡತವೊಂದು ಮಾಯವಾಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಸ್ತುತ ಈ ಪ್ರಕರಣ ಮತ್ತೊಂದು ತಿರುವನ್ನು ಪಡೆದಿದ್ದು, ಕಡತಕ್ಕೆ ಕೆಳ ಹಂತದ ಅಧಿಕಾರಿಗಳೇ ಉನ್ನತಾಧಿಕಾರಿಗಳ ನಕಲಿ ಸಹಿ ಬಳಸಿ ಪಾಲಿಕೆಗೆ ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ. 
 
ಈ ಬಗ್ಗೆ ಪಾಲಿಕೆಯ ಆಯುಕ್ತರು ಈಗಾಗಲೇ ಕ್ರಮ ಕೈಗೊಳ್ಳಲು ಮುಂದಾಗಿದ್ದು, ತನಿಖೆಗಾಗಿ ಜಾಗೃತ ದಳಕ್ಕೆ ವಹಿಸಲು ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಜಾಗೃತ ದಳದ ಮುಖ್ಯಸ್ಥ ಎಸ್.ಪ್ರಭಾಕರ್ ಮಾತನಾಡಿದ್ದು, ತನಿಖೆ ನಡೆಸಲು ನಾವು ಸಿದ್ಧರಿದ್ದೇವೆ. ಆದರೆ ಇಲಾಖೆಯಲ್ಲಿ ತನಿಖೆಗೆ ಅಗತ್ಯವಾದಷ್ಟು ಸಿಬ್ಬಂದಿ ಇಲ್ಲದ ಕಾರಣ ತನಿಖೆ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ. 
 
ಇನ್ನು ಪ್ರಕರಣ ಸಂಬಂಧ ಪಾಲಿಕೆ ಪೌರಾಯುಕ್ತೆ ಶಾಂತಕುಮಾರಿ ಪ್ರತಿಕ್ರಿಯಿಸಿದ್ದು, ನಗರ ಪೊಲೀಸರು ಈ ಸಂಬಂಧ ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸಲು ಹಿಂಜರಿಯುತ್ತಿದ್ದಾರೆ. ಅಲ್ಲದೆ ಜಾಗೃತ ದಳಕ್ಕೆ ವಹಿಸೋಣ ಎಂದರೆ ಅಲ್ಲಿ ಸಿಬ್ಬಂದಿಯ ಕೊರತೆ ಇದೆಯಂತೆ. ಹಾಗಾಗಿ ಈ ಪ್ರಕರಣದ ತನಿಖೆ ವಿಷಯ ಹಳ್ಳ ಹಿಡಿಯುತ್ತಿದ್ದು, ನೇರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಮುಂದಾಗಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ. 
 
ಕಡತ ನಾಪತ್ತೆ ಬಗ್ಗೆ ಎನ್.ಆರ್.ರಮೇಶ್ ಎಂಬುವವರು ಆರೋಪಿಸಿದ್ದರು. ಇತ್ತೀಚೆಗೆ ಮಾಧ್ಯಮಗಳಲ್ಲಿಯೂ ಕೂಡ ಬಹಳ ಸುದ್ದಿ ಮಾಡಿತ್ತು. 

Share this Story:

Follow Webdunia kannada