Select Your Language

Notifications

webdunia
webdunia
webdunia
webdunia

ವಸತಿ ಶಾಲೆಯಲ್ಲಿ ರೌಡಿಯ ಲೈಂಗಿಕ ದೌರ್ಜನ್ಯಕ್ಕೆ 40 ವಿದ್ಯಾರ್ಥಿನಿಯರು ಬಲಿ

ವಸತಿ ಶಾಲೆಯಲ್ಲಿ ರೌಡಿಯ ಲೈಂಗಿಕ ದೌರ್ಜನ್ಯಕ್ಕೆ  40 ವಿದ್ಯಾರ್ಥಿನಿಯರು ಬಲಿ
ಬಿಜಾಪುರ , ಬುಧವಾರ, 20 ಆಗಸ್ಟ್ 2014 (16:56 IST)
ಇದೊಂದು ಘನಘೋರ ಅತ್ಯಾಚಾರ ಪ್ರಕರಣ. ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ 40 ಅಮಾಯಕರ ಬಾಲಕಿಯರನ್ನು ರೇಪ್ ಮಾಡುತ್ತಿದ್ದ ಅಮಾನುಷ  ದೌರ್ಜನ್ಯ  ವರದಿಯಾಗಿದೆ. ಬಿಜಾಪುರ ಜಿಲ್ಲೆ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಲ್ಲಿ ಇಂತಹ ಘನಘೋರ ಅತ್ಯಾಚಾರದ ಪ್ರಕರಣ ನಡೆದಿದೆ.  ವಿದ್ಯಾರ್ಥಿನಿಯರ ಮೇಲೆ ರೌಡಿ ವಿಜಯಕುಮಾರ್ ಎಂಟಮಾನೆ  40 ವಿದ್ಯಾರ್ಥಿನಿಯರ ಮೇಲೆ  ನಡೆಸಿದ  ಪೈಶಾಶಿಕ ಕೃತ್ಯ  ತಡವಾಗಿ ಬೆಳಕಿಗೆ ಬಂದಿದ್ದು, ಊರಿಗೆ ಊರೇ ಬೆಚ್ಚಿಬೀಳುವಂತೆ ಮಾಡಿದೆ.

 
ಕಳೆದ ನಾಲ್ಕು ವರ್ಷಗಳಿಂದ ವಿಜಯಕುಮಾರ್ ಚೆಲ್ಲಾಟವಾಡಿದ ವಿದ್ಯಾರ್ಥಿನಿಯರ ಸಂಖ್ಯೆ ಸುಮಾರು 40 . ರೌಡಿ ವಿಜಯಕುಮಾರ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರೂ ಪ್ರಿನ್ಸಿಪಾಲರು, ಹಾಸ್ಟೆಲ್ ವಾರ್ಡನ್, ಸಿಬ್ಬಂದಿ ಹೇಗೆ ಸಹಕರಿಸಿದರು, ಇಂತಹ ಅಮಾನುಷ ದೌರ್ಜನ್ಯ ನಡೆಯುತ್ತಿರುವುದು ಗೊತ್ತಿದ್ದೂ ಗೊತ್ತಿಲ್ಲದಂತೆ ಸುಮ್ಮನಿರುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.

 ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಮಕ್ಕಳ ಸಹಾಯವಾಣಿಗೆ ಪತ್ರ ಬರೆದು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಎಳೆ, ಎಳೆಯಾಗಿ ಬಿಡಿಸಿಟ್ಟಿದ್ದರಿಂದ ಈ ವಿಷಯ ಬೆಳಕಿಗೆ ಬಂದಿದೆ. ರೌಡಿ ವಿಜಯಕುಮಾರ ವಿದ್ಯಾರ್ಥಿನಿಯರು ಮಲಗುವ ಕೊಠಡಿಗೆ ಬರುತ್ತಾನೆ. ನಿತ್ಯ ಹುಡುಗಿಯರಿಂದ ಕೈಕಾಲು ಒತ್ತಿಸಿಕೊಳ್ಳುತ್ತಾನೆ. ಒಪ್ಪದಿದ್ದರೆ ಬಾಯಿಮುಚ್ಚಿ ಅತ್ಯಾಚಾರ ಮಾಡುತ್ತಾನೆ.
 ಮುಂದಿನ ಪುಟ ನೋಡಿ

ಅದೆಷ್ಟೋ ಹುಡುಗಿಯರು ಅವನಿಂದ ಗರ್ಭಿಣಿಯಾಗಿದ್ದಾರೆ. ಹುಡುಗಿಯರನ್ನು ಹೆದರಿಸಿ , ಬೆದರಿಸಿ ಕರೆದೊಯ್ಯುತ್ತಿದ್ದ. ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸುತ್ತಿದ್ದ. ವಿದ್ಯಾರ್ಥಿನಿಯರಿಗೆ ಗರ್ಭನಿರೋಧಕ ಮಾತ್ರೆಗಳನ್ನು  ಕೂಡ ನೀಡುತ್ತಿದ್ದ. ಹೆಣ್ಣು ಮಕ್ಕಳ ಭವಿಷ್ಯಕ್ಕೆ ಕಪ್ಪು ಚುಕ್ಕೆ ಬಳಿದಿದ್ದಾನೆ. ಪ್ರಾಂಶುಪಾಲರ ಬೇಜಾವಾಬ್ದಾರಿಗೆ ಬಾಲೆಯರು ಕಮರಿಹೋಗಿದ್ದಾರೆ.  ಸಿಟ್ಟು ಬಂದಾಗ ವಿಜಯಕುಮಾರ ಹೊಡೆಯುವುದು, ಒದೆಯುವುದು ಮಾಡುತ್ತಿದ್ದನಂತೆ.

  ಹಾಸ್ಟೆಲ್‌ನಲ್ಲಿ ವಿಜಯಕುಮಾರ್ ಎಂಟಮಾನೆ ಕಾಮದಾಟಕ್ಕೆ ಬಲಿಯಾದವರು 5ರಿಂದ 10ನೇ ತರಗತಿ ಓದುವ ವಿದ್ಯಾರ್ಥಿನಿಯರು. . ರಾತ್ರಿಯಾಗುತ್ತಿದ್ದಂತೆ ಶಾಲಾ ಸಿಬ್ಬಂದಿ ಇರುತ್ತಿರಲಿಲ್ಲ. ಹಾಸ್ಟಲ್ ವಾರ್ಡನ್ ಶೋಭಾಗೆ ಈ  ವಿಷಯ ಗೊತ್ತಿದ್ದು, ರೌಡಿಯ ಲೈಂಗಿಕ ದೌರ್ಜನ್ಯಕ್ಕೆ  ಬೆಂಬಲಿಸಿದ್ದಾರೆಂದು ತಿಳಿದುಬಂದಿದೆ. 

ಮಕ್ಕಳ ಸಹಾಯವಾಣಿಗೆ ವಿದ್ಯಾರ್ಥಿನಿಯರು ಬರೆದ ಪತ್ರ ದಯನೀಯವಾಗಿದ್ದು, ವಿಜಯಕುಮಾರ್ ಕಾಮದಾಟವನ್ನು ಬಿಚ್ಚಿಟ್ಟಿದ್ದಾರೆ. ಇದು ಹೀಗೆ ಮುಂದುವರಿದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಮಕ್ಕಳ ಸಹಾಯವಾಣಿ ಸಂಯೋಜಕಿ ಸುನಂದ ಪೊಲೀಸರಿಗೆ ದೂರು ನೀಡಿದ ಮೇಲೆ ರೌಡಿ ವಿಜಯಕುಮಾರನನ್ನು ಬಂಧಿಸಿದ್ದಾರೆ. 

Share this Story:

Follow Webdunia kannada