Select Your Language

Notifications

webdunia
webdunia
webdunia
webdunia

ಶವವಾಗಿ ಪತ್ತೆಯಾದ ಪುಟ್ಟ ಮಗು: ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಶಂಕೆ

ಶವವಾಗಿ ಪತ್ತೆಯಾದ ಪುಟ್ಟ ಮಗು: ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಶಂಕೆ
ಬೆಂಗಳೂರು , ಶುಕ್ರವಾರ, 12 ಫೆಬ್ರವರಿ 2016 (17:28 IST)
ನಾಪತ್ತೆಯಾಗಿದ್ದ ಎರಡು ಮುಕ್ಕಾಲು ವರ್ಷದ ಪುಟ್ಟ ಮಗುವೊಂದು ಶವವಾಗಿ ಪತ್ತೆಯಾದ ದಾರುಣ ಘಟನೆ ಸುಲ್ತಾನಪಾಳ್ಯ ಸಮೀಪದ ಮನೋರಾಯನ ಪಾಳ್ಯದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ಬಿಜಯ್-ತ್ರಿಷಾ ದಂಪತಿಯ ಪುಟ್ಟ ಮಗು ನಿನ್ನೆ ಸಂಜೆ ನಾಪತ್ತೆಯಾಗಿತ್ತು. ಮನೆ ಮುಂದೆ ಆಟವಾಡುತ್ತಿದ್ದ ಮಗು ಕಾಣುತ್ತಿಲ್ಲ ಎಂದು ಅಕ್ಕಪಕ್ಕದಲ್ಲೆಲ್ಲ ಹುಡುಕಾಡಿದ ತಾಯಿ ಕೊನೆಗೆ ಹಲಸೂರಿನ ಹೊಟೆಲ್ ಒಂದರಲ್ಲಿ ಕೆಲಸಕ್ಕೆ ಹೋಗಿದ್ದ ಪತಿ ಬಿಜಯ್‌ಗೆ ಫೋನ್ ಮಾಡಿ ಕರೆಸಿದ್ದಳು. 
 
ಕೆಲ ಹೊತ್ತಿನ ಬಳಿಕ ಸ್ಥಳೀಯರು ಕಸದ ತೊಟ್ಟಿಯಲ್ಲಿ ಗೋಣಿ ಚೀಲದಲ್ಲಿ ಕಟ್ಟಿ ಬೀಸಾಡಿದ್ದ ಮಗುವನ್ನು ಕಂಡಿದ್ದಾರೆ.
 
ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ 
 
ಮಗುವನ್ನು ಲೈಂಗಿಕವಾಗಿ ಬಳಸಿಕೊಂಡು ಕೊಲೆ ಮಾಡಿರಬೇಕು ಎಂಬ ಸಂದೇಹ ವ್ಯಕ್ತವಾಗಿದ್ದು, ಮಗುವಿನ ತಂದೆ-ತಾಯಿಗಳ ಜತೆ ಯಾರಿಗಾದರೂ ವೈಷಮ್ಯವಿತ್ತೆ ಎಂಬ ಬಗ್ಗೆ ಸಹ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. 
 
ಮಗುವಿನ ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ನಿಜವಾದ ಕಾರಣ ತಿಳಿದು ಬರಲಿದೆ. 

Share this Story:

Follow Webdunia kannada