ಈ ಮೂವರು ಸಹೋದರಿಯರು ಹುಟ್ಟಿದ್ದು ಜತೆಗೆನೇ. ನೋಡಲು ಸಹ ಒಂದೇ ರೀತಿ ಇರುವ ಇವರು ಗಳಿಸಿದ ಅಂಕಗಳು ಸಹ ಒಂದೇ ರೀತಿಯಾಗಿವೆ ಎಂದರೆ ನಂಬುತ್ತೀರಾ?.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಎಂಇಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಓದುತ್ತಿದ್ದ ತ್ರಿವಳಿ ಸಹೋದರಿಯರು ಪಿಯುಸಿ ಪರೀಕ್ಷೆ ವಿಜ್ಞಾನ ವಿಭಾಗದಲ್ಲಿ 90% ಕ್ಕಿಂತಲೂ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾಗಿದ್ದಾರೆ. ಅನನ್ಯ ಅವಳಿಗಳಾದ ಅವರು ಅಂಕಗಳ ಗಳಿಕೆಯಲ್ಲೂ ಸಾಮ್ಯತೆ ತೋರಿದ್ದಾರೆ.
ಶಿರಸಿ ನಗರದ ಕೋರ್ಟ್ ರಸ್ತೆ ನಿವಾಸಿಗಳಾದ ಮಚ್ಚಾರ್ಡೋ ಹಾಗೂ ಕ್ವೀನಿ ದಂಪತಿಯ ತ್ರಿವಳಿ ಮಕ್ಕಳಾದ ಸೋಫಿಯಾ, ಮರ್ಲಿನ್ ಹಾಗೂ ಶರೋನ್ ಎಂಬ ಹೆಸರಿನ ಈ ತ್ರಿವಳಿಗಳು ಈ ವಿಶಿಷ್ಟ ಸಾಧನೆಯ ಮೂಲಕ ಗಮನ ಸೆಳೆದವರು.
ಸೋಫಿಯಾ ಇ. ಮಚಾಡೋ 600ಕ್ಕೆ 550 (ಶೇ.91.66) , ಮರ್ಲಿನ್ 547 (ಶೇ. 91.16) ಮತ್ತು ಶರೋನ್ ಇ. ಮಚಾಡೋ 539 (ಶೇ.90) ಅಂಕಗಳಿಸಿದ್ದಾರೆ.
ಮೂವರನ್ನು ಮೆಡಿಕಲ್ ಓದಿಸುವ ಹಂಬಲ ಅವರ ಪೋಷಕರದು.