Webdunia - Bharat's app for daily news and videos

Install App

ಮೂರು ಜೀವಗಳನ್ನು ಕಾಪಾಡಿದ ರೈಲ್ವೆ ಪೊಲೀಸರು ...!!!!

Webdunia
ಬುಧವಾರ, 17 ಆಗಸ್ಟ್ 2022 (17:53 IST)
ರೈಲು ಹಳಿ ಮೇಲೆ ತನ್ನಿಬ್ಬರು ಮಕ್ಕಳೊಂದಿಗೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ 24 ವರ್ಷದ ಮಹಿಳೆಯನ್ನು ರೈಲ್ವೆ ರಕ್ಷಣಾ ಪಡೆ (RPF) ಪೊಲೀಸರು ಕಾಪಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 
ಬೆಂಗಳೂರಿನ ಬಳಿ ಚನ್ನಸಂದ್ರ ರೈಲು ನಿಲ್ದಾಣ ಬಳಿ ಈ ಘಟನೆ ನಡೆದಿದ್ದು ರೈಲು ಹಳಿ ಮೇಲೆ ಮಲಗಿದ್ದ ಮಹಿಳೆಯನ್ನು ರೈಲ್ವೆ ಪೊಲೀಸರು ತಕ್ಷಣವೇ ಹೋಗಿ ಮೇಲಕ್ಕೆತ್ತಿ ತಂದಿದ್ದರಿಂದ ಮೂರು ಜೀವಗಳು ಉಳಿದಿವೆ.
 
ಪತಿಯಿಂದ ಮಾನಸಿಕ ಹಿಂಸೆ, ಕಿರುಕುಳ ತಾಳಲಾರದೆ ಮಹಿಳೆ ತನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ಈ ಕೃತ್ಯಕ್ಕೆ ಇಳಿದಿದ್ದಳು ಎನ್ನಲಾಗಿದೆ.
 
ಈ ಘಟನೆ ನಡೆದಿದ್ದು ಮೊನ್ನೆ ಸ್ವಾತಂತ್ರ್ಯ ದಿನಾಚರಣೆಯಂದು ಸಾಯಂಕಾಲ 4.45ರ ಸುಮಾರಿಗೆ, ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಲ್ ನಿಂದ ತಿರುವನಂತಪುರ ಕೇಂದ್ರ ನಿಲ್ದಾಣಕ್ಕೆ ರೈಲು ಪ್ರಯಾಣಿಸುತ್ತಿತ್ತು. ಬೆಂಗಳೂರು ರೈಲ್ವೆ ವಲಯದ ಚನ್ನಸಂದ್ರ ನಿಲ್ದಾಣ ಬಳಿ ರೈಲು ಆಗಮಿಸುತ್ತಿತ್ತು.
 
ಚನ್ನಸಂದ್ರ ಕ್ರಾಸ್ ದಾಟುವ ಸ್ವಲ್ಪ ಹೊತ್ತಿನ ಮೊದಲು ಮಹಿಳೆ ತನ್ನಿಬ್ಬರು ಪುಟ್ಟ ಮಕ್ಕಳನ್ನು ಕರೆದುಕೊಂಡು ಹೋಗಿ ರೈಲು ಹಳಿಯ ಮೇಲೆ ಮಲಗಿದ್ದಾಳೆ. ಆ ವೇಳೆ ಅಲ್ಲಿ ಗಸ್ತು ತಿರುಗುತ್ತಿದ್ದ ಆರ್ ಪಿಎಫ್ ಇನ್ಸ್ ಪೆಕ್ಟರ್ ವಿ ಎನ್ ಚಂಬಣ್ಣ ಮಹಿಳೆಯನ್ನು ಕಂಡು ಅಲ್ಲಿದ್ದ ಕೆಲವು ಮಹಿಳೆಯರನ್ನು ಬರಲು ಹೇಳಿ ಸಾಯಲು ಹೊರಟ ಮಹಿಳೆಯನ್ನು ಪಕ್ಕಕ್ಕೆ ಎಳೆಯುವಂತೆ ಸೂಚಿಸಿದರು.
 
ಅಷ್ಟು ಹೊತ್ತಿಗೆ ಎದುರಿನಿಂದ ರೈಲು ಬರುತ್ತಿರುವುದನ್ನು ಗಮನಿಸಿದ ಚಂಬಣ್ಣ ಕೂಡಲೇ ಮಹಿಳೆಯನ್ನು ಎಳೆದು ಪ್ರಾಣ ಕಾಪಾಡಿದರು. ಕಾನ್ಸ್ಟೇಬಲ್ ಡಿಯೊ ಪ್ರಕಾಶ್ ಅವರಿಗೆ ನೆರವಾದರು. ಕೂದಲೆಳೆ ಅಂತರದಲ್ಲಿ ಮಹಿಳೆಯನ್ನು ಸಾವಿನಿಂದ ಕಾಪಾಡಿದ್ದರು.
 
ಸಂಪೂರ್ಣ ಖಿನ್ನತೆ ಸ್ಥಿತಿಯಲ್ಲಿದ್ದ ಮಹಿಳೆಗೆ ಎನ್ ಜಿಒ ನೆರವಿನಿಂದ ಆಪ್ತ ಸಮಾಲೋಚನೆ ನೀಡಲಾಗಿದೆ. ಮಹಿಳೆಯನ್ನು ಮಾತನಾಡಿಸಲು ಎನ್ ಜಿಒ ಕಾರ್ಯಕರ್ತರಿಗೆ ಮೂರು ಗಂಟೆ ಹಿಡಿಯಿತು. ಪದವೀಧರೆಯಾಗಿರುವ ಮಹಿಳೆ ದೂರವಾಣಿ ನಗರದ ದರ್ಗಾ ಮೊಹಲ್ಲಾ ಪ್ರದೇಶದ ನಿವಾಸಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Prajwal Revanna: ವಕೀಲರನ್ನೂ ನೇಮಿಸಿಕೊಂಡಿಲ್ಲ: ಪ್ರಜ್ವಲ್ ರೇವಣ್ಣ ಪರಿಸ್ಥಿತಿ ಏನಾಗಿದೆ ನೋಡಿ

PM Modi: ಉಗ್ರರ ದಮನಕ್ಕೆ ಸೇನೆಗೆ ಸಂಪೂರ್ಣ ಪವರ್ ಕೊಟ್ಟ ಪ್ರಧಾನಿ ಮೋದಿ

K Annamalai: ಮೋದಿ, ಅಮಿತ್ ಶಾ ಹೆಸರಲ್ಲಿ ಅಮೆರಿಕದಲ್ಲಿ ಅಣ್ಣಾಮಲೈ ವಿಶೇಷ ಪೂಜೆ

ಉಗ್ರರ ಹಿಮ್ಮೆಟ್ಟಿಸಲು ಐಕ್ಯತೆ ಅವಶ್ಯಕ: ಮಾಜಿ ಪ್ರಧಾನಿ ದೇವೇಗೌಡ

RBI:ಎಟಿಎಂಗಳಲ್ಲಿ ₹100, ₹200 ಸಿಗಲ್ಲ ಎಂದು ಗೋಳಾಡುತ್ತಿದ್ದ ಮಂದಿಗೆ ಇಲ್ಲಿದೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments