Select Your Language

Notifications

webdunia
webdunia
webdunia
webdunia

ಪಕ್ಕದ ಕಟ್ಟಡದ ಮೇಲೆ ಕುಸಿದು ಬಿದ್ದ 3 ಅಂತಸ್ತಿನ ಕಟ್ಟಡ

ಪಕ್ಕದ ಕಟ್ಟಡದ ಮೇಲೆ  ಕುಸಿದು ಬಿದ್ದ 3 ಅಂತಸ್ತಿನ ಕಟ್ಟಡ
ಬೆಂಗಳೂರು , ಗುರುವಾರ, 30 ಅಕ್ಟೋಬರ್ 2014 (12:55 IST)
ಶಿಥಿಲಾವಸ್ಥೆಯಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಬಿರುಕು ಬಿಟ್ಟಿದ್ದು,  ಪಕ್ಕದಲ್ಲಿದ್ದ 2 ಅಂತಸ್ತಿನ ಕಟ್ಟಡದ ಮೇಲೆ ಮೂರು ಅಂತಸ್ತಿನ ಕಟ್ಟಡ ಕುಸಿದು ವಾಲಿಕೊಂಡಿರುವ ಘಟನೆ ಬಸವೇಶ್ವರನಗರದ ಶಂಕರಮಠದ ಬಳಿ ಸಂಭವಿಸಿದೆ. ಈ ಕಟ್ಟಡ ಮನೋರಮಾ ಎಂಬವರಿಗೆ ಸೇರಿದ್ದು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ. 

ಮನೆ ಕುಸಿದುಬೀಳುವ ಸಂದರ್ಭದಲ್ಲಿ ಕಲ್ಲೊಂದು ಬಿದ್ದು ಒಳಗಿದ್ದ ಮಗುವೊಂದಕ್ಕೆ ಗಾಯವಾಗಿದೆ. ಸುಮಾರು 35 ವರ್ಷದ ಕಟ್ಟಡದಲ್ಲಿ ಪಿಲ್ಲರ್‌ಗಳು ಅಷ್ಟೊಂದು ಭದ್ರವಾಗಿಲ್ಲದೇ ಸುಂದರ್ ಎಂಬವರ ಮನೆಯ ಮೇಲೆ ಕುಸಿದುಬಿದ್ದಿದೆ. ಈ ಕಟ್ಟಡದ ಕೆಳಗೆ ಒಂದು ಬಾವಿಯಿತ್ತು.

ಆ ಬಾವಿಯನ್ನು ಮುಚ್ಚಿ ಮೂರು ಅಂತಸ್ತಿನ ಮನೆಗಳನ್ನು ನಿರ್ಮಿಸಿದ್ದು, ಭಾರ ತಡೆಯಲಾರದೇ 35 ವರ್ಷದಷ್ಟು ಹಳೆಯದಾದ ಕಟ್ಟಡ ಕುಸಿದುಬಿದ್ದಿದೆ. ಈಗ ಜೆಸಿಬಿಯಲ್ಲಿ ಮನೆಯನ್ನು ಕೆಡುವವ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕಟ್ಟಡ ಕುಸಿತದ ಬಳಿಕ ಅವಶೇಷಗಳ ತೆರವು ಕಾರ್ಯಾಚರಣೆಗೆ ಪಾಲಿಕೆ ವಿಳಂಬ ಮಾಡಿತೆಂದು ದೂರಲಾಗಿದೆ. ಸುಮಾರು 5 ಗಂಟೆಗಳ ಕಾಲ ಪಾಲಿಕೆ ತೆರವು ಕಾರ್ಯಾಚರಣೆಗೆ ಧಾವಿಸಿರಲಿಲ್ಲವೆಂದು ಹೇಳಲಾಗಿದೆ. ಒಂದು ವೇಳೆ ಕಟ್ಟಡ ಸಂಪೂರ್ಣ ಕುಸಿದಿದ್ದರೆ ಪಕ್ಕದ ಕಟ್ಟಡ ಮತ್ತು ಅಕ್ಕಪಕ್ಕದಲ್ಲಿರುವ ಕಟ್ಟಡಗಳಿಗೆ ಹಾನಿಯಾಗುವ ಸಂಭವವಿತ್ತು.

Share this Story:

Follow Webdunia kannada