Webdunia - Bharat's app for daily news and videos

Install App

24 ವರ್ಷದ ಯುವತಿ ಜೊತೆ 65 ವರ್ಷದ ವೃದ್ಧನ ವಿವಾಹ

Webdunia
ಶುಕ್ರವಾರ, 3 ಜೂನ್ 2016 (14:11 IST)
24 ವರ್ಷದ ಯುವತಿಯನ್ನು 64 ವರ್ಷದ ವೃದ್ಧ ಮದುವೆಯಾದ ಪ್ರಕರಣಕ್ಕೆ ಆಕ್ರೋಶಗೊಂಡಿರುವ ಪೋಷಕರು ವೃದ್ಧ ಡಾ.ಆಕಾಶ್ ಕುಮಾರನನ್ನು ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 
ಎನ್‌ಐಟಿಸಿ ಕಾಲೇಜು ಸಂಸ್ಥಾಪಕನಾಗಿರುವ ಡಾ.ಆಕಾಶ್ ಕುಮಾರ್ ತನ್ನದೆ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ 24 ವರ್ಷದ ಕೃಪಾ ಎಂಬ ಯುವತಿಯನ್ನು ಪ್ರೀತಿಸಿ ಎರಡು ತಿಂಗಳ ಹಿಂದೆ ಮದುವೆಯಾಗಿದ್ದಾರೆ. ಈ ಅಪರೂಪದ ದಂಪತಿಗಳು ಇಂದು ವಿವಾಹ ನೊಂದಣಿ ಕಛೇರಿಗೆ ತೆರಳಿ ತಮ್ಮ ಮದುವೆ ಪತ್ರ ತರಲು ಬಂದಿದ್ದರು. ಈ ಅಪರೂಪದ ಮದುವೆಗೆ ವಿರೋಧ ವ್ಯಕ್ತ ಪಡಿಸಿರುವ ಯುವತಿಯ ಪೋಷಕರು ಹಣದ ಆಮಿಷ ಒಡ್ಡಿ ವೃದ್ಧ ಡಾ.ಆಕಾಶ್ ಕುಮಾರ್ ತನ್ನ ಮಗಳನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಿ ನವ ದಂಪತಿಯನ್ನು ಹಿಗ್ಗಾ ಮುಗ್ಗಾ ತಳಿಸಿದ್ದಾರೆ.
 
ಪೋಷಕರ ಆರೋಪವನ್ನು ತಳ್ಳಿ ಹಾಕಿರುವ ಯುವತಿ, ನನ್ನ ಪಾಲಕರು ನನ್ನನ್ನು ನಾಯಿಯಂತೆ ಮನೆಯಲ್ಲಿ ಕೂಡಿಹಾಕಿದ್ದರು. ನನಗೆ ಯಾವುದೇ ರೀತಿಯ ಸ್ವಾತಂತ್ರ್ಯ ನೀಡಿರಲಿಲ್ಲ. ಪೋಷಕರು ನನಗೆ ಯಾವುದೇ ರೀತಿಯ ಪ್ರೀತಿ ಕಾಳಜಿಯನ್ನು ತೊರುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. 
 
ನನ್ನ ಜೀವನದಲ್ಲಿ ನನಗೆ ಯಾರು ಬೆಂಬಲ ನೀಡಿಲ್ಲ. ಇನ್ನುಮುಂದೆ ಯಾರ ಬೆಂಬಲವು ನನಗೆ ಬೇಕಾಗಿಲ್ಲ. ನಾನು ಕಾನೂನು ಬದ್ಧವಾಗಿ ಡಾ.ಆಕಾಶ್ ಕುಮಾರ್ ಅವರನ್ನು ಮದುವೆಯಾಗಿದ್ದೇನೆ. ಈ ಕುರಿತು ನನಗೆ ಮತ್ತು ನನ್ನ ಪೋಷಕರಿಗೆ ಯಾವುದೇ ರೀತಿಯ ಪಶ್ಚಾತಾಪ ಇಲ್ಲವೆಂದು ನವ ವಿವಾಹಿತೆ ಕೃಪಾ ಸ್ಪಷ್ಟಪಡಿಸಿದ್ದಾಳೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೈಸೂರಿಗೆ ಬೀಗರೂಟಕ್ಕೆ ಬರಕ್ಕಾಗುತ್ತೆ, ಸಿಗಂದೂರಿಗೆ ಬರಕ್ಕಾಗಲ್ವಾ: ಸಿಎಂಗೆ ಪ್ರತಾಪ್ ಸಿಂಹ ಗುದ್ದು

ನಿಮಿಷಾ ಪ್ರಿಯಾಗೆ ಕ್ಷಮೆಯೇ ಇಲ್ಲ, ಪರಿಹಾರ ಹಣವೂ ಬೇಡ ಎಂದ ಯೆಮನ್ ಕುಟುಂಬ

Arecanut price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

40 ವರ್ಷ ಮೇಲ್ಪಟ್ಟವರು ಹೃದಯಾಘಾತವಾಗದಂತೆ ಈ ಟಿಪ್ಸ್ ಪಾಲಿಸಿ: ಡಾ ದೇವಿಪ್ರಸಾದ್ ಶೆಟ್ಟಿ

ಮುಂದಿನ ಸುದ್ದಿ
Show comments