Select Your Language

Notifications

webdunia
webdunia
webdunia
webdunia

ಆರು ವರ್ಷದ ಬಾಲಕಿ ಮೇಲೆ 21 ವರ್ಷದ ಯುವಕನ ಅತ್ಯಾಚಾರ

ಆರು ವರ್ಷದ ಬಾಲಕಿ ಮೇಲೆ 21 ವರ್ಷದ ಯುವಕನ ಅತ್ಯಾಚಾರ
ಬೆಳಗಾವಿ , ಶನಿವಾರ, 26 ಜುಲೈ 2014 (10:47 IST)
ಬೆಂಗಳೂರಿನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರದ ಘಟನೆ ಕೋಲಾಹಲವನ್ನು ಎಬ್ಬಿಸಿರುವ ನಡುವೆ ಬೆಳಗಾವಿಯಲ್ಲಿ ಆರು ವರ್ಷದ  ಮತ್ತೊಬ್ಬ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ಬಾಲಕಿಗೆ ಬಿಸ್ಕತ್ ಕೊಡಿಸುವ ಆಮಿಷವೊಡ್ಡಿ ಸೂರಜ್ ಎಂಬ 21 ವರ್ಷದ ಯುವಕ ಅತ್ಯಾಚಾರ ಮಾಡಿದ್ದಾನೆ ಎಂದು ಬಾಲಕಿಯ ಪೋಷಕರು ದೂರು ನೀಡಿದ್ದಾರೆ.

ಮಾಳಮಾರುತಿ ಠಾಣೆ ಪೊಲೀಸರು ಸೂರಜ್‌ನನ್ನು ಬಂಧಿಸಿದ್ದಾರೆ. ಇಸ್ತ್ರಿ ಅಂಗಡಿ ಇಟ್ಟುಕೊಂಡಿದ್ದ ಸೂರಜ್ ಈ ಹೀನ ಕೃತ್ಯವನ್ನು ಎಸಗಿದ್ದಾನೆ. ಸುಮಾರು ವರ್ಷಗಳಿಂದ ಆ ಬಡಾವಣೆಯಲ್ಲಿ ಇದ್ದುದರಿಂದ ಬಾಲಕಿಗೆ ಪರಿಚಿತಳಾಗಿದ್ದ.

ಬಾಲಕಿ ಕಿರಾಣಿ ಅಂಗಡಿಗೆ ಬಂದಿದ್ದಾಗ ಬಿಸ್ಕತ್ ಕೊಡುತ್ತೇನೆಂದು ಬಾಲಕಿಯನ್ನು ತನ್ನ ಅಂಗಡಿಗೆ ಕರೆದು ಅತ್ಯಾಚಾರ ಮಾಡಿದ್ದಾನೆಂದು ಪೊಲೀಸ್ ಠಾಣೆಗೆ ಬಾಲಕಿಯ ಪೋಷಕರು ದೂರು ನೀಡಿದ್ದಾರೆ. 

Share this Story:

Follow Webdunia kannada