Select Your Language

Notifications

webdunia
webdunia
webdunia
webdunia

2 ಅಂತಸ್ತಿನ ಕಟ್ಟಡ ಕುಸಿದು ವೃದ್ಧ ಮಹಿಳೆ ಸಾವು, ನಾಲ್ವರಿಗೆ ಗಾಯ

2 ಅಂತಸ್ತಿನ ಕಟ್ಟಡ ಕುಸಿದು ವೃದ್ಧ ಮಹಿಳೆ ಸಾವು, ನಾಲ್ವರಿಗೆ ಗಾಯ
ಬೆಂಗಳೂರು , ಮಂಗಳವಾರ, 28 ಅಕ್ಟೋಬರ್ 2014 (19:05 IST)
ಬೆಂಗಳೂರಿನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಎರಡು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಘೋರ ದುರಂತ ಸಂಭವಿಸಿದೆ. ಲಿಂಗರಾಜಪುರ ಫ್ಲೈಓವರ್ ಬಳಿ ಎಲ್ಒಸಿ ಸರ್ಕಲ್‌ನಲ್ಲಿರುವ ಎರಡು ಅಂತಸ್ತಿನ ಕಟ್ಟಡ ಕುಸಿದಿದ್ದರಿಂದ  ಜೋಯ್ ಮೇರಿ ಎಂಬ ವೃದ್ಧ ಮಹಿಳೆ ಮೃತಪಟ್ಟಿದ್ದು, ನಾಲ್ವರಿಗೆ ಗಾಯಗಳಾಗಿವೆ.

 ಇನ್ನೂ ಇಬ್ಬರು ಅವಶೇಷಗಳಡಿ ಸಿಕ್ಕಿಬಿದ್ದಿರಬಹುದೆಂದು ಶಂಕಿಸಲಾಗಿದೆ. ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಬಿದ್ದ ಮಳೆಯಿಂದ ಶಿಥಿಲಾವಸ್ಥೆಯ ಕಟ್ಟಡ ಕುಸಿಯಲು ಕಾರಣವೆಂದು ಹೇಳಲಾಗಿದೆ.

 ಅಗ್ನಿಶಾಮಕ ದಳ ರಕ್ಷಣಾಕಾರ್ಯಾಚರಣೆಯಲ್ಲಿ ತೊಡಗಿದೆ. ಸ್ಥಳಕ್ಕೆ ಬಾಣಸವಾಡಿ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Share this Story:

Follow Webdunia kannada