Select Your Language

Notifications

webdunia
webdunia
webdunia
webdunia

ಗಾರ್ಮೆಂಟ್ಸ್ ಕಟ್ಟಡದ ಮಾಲೀಕನಿಂದ ಅತ್ಯಾಚಾರ

ಗಾರ್ಮೆಂಟ್ಸ್ ಕಟ್ಟಡದ ಮಾಲೀಕನಿಂದ ಅತ್ಯಾಚಾರ
ಬೆಂಗಳೂರು , ಶನಿವಾರ, 30 ಜನವರಿ 2016 (08:25 IST)
ಬೆಂಗಳೂರು ಮಕ್ಕಳಿಗೆ, ಮಹಿಳೆಯರಿಗೆ ಸುರಕ್ಷಿತವಲ್ಲವೆಂದು ಪದೇ ಪದೇ ಸಾಬೀತಾಗಿದ್ದು, 18 ವರ್ಷದ ಯುವತಿಯ ಮೇಲೆ ಗಾರ್ಮೆಂಟ್ಸ್ ಕಟ್ಟಡದ ಮಾಲೀಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಬಹಳ ತಡವಾಗಿ ಬೆಳಕಿಗೆ ಬಂದಿದೆ.

ತಂದೆ-ತಾಯಿ ಇಲ್ಲದ ಯುವತಿ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದು  ಅದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದವಳಾಗಿದ್ದು ಸಮಯ ಸಾಧಿಸಿ ಕೀಚಕ ಮಾಲೀಕ ವಸಂತ ಕುಮಾರ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.
 
ನೊಂದ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
 
ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share this Story:

Follow Webdunia kannada