ಬೆಂಗಳೂರು(ಆ.10): ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ ಮುಗಿಯುತು ಎನ್ನುವಷ್ಟರಲ್ಲಿ ಈಗ ಮೂರನೇ ಅಲೆ ಶುರುವಾಗಿದೆ. ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ 3ನೇ ಅಲೆ ತನ್ನ ಆರ್ಭಟ ತೋರಲು ಶುರು ಮಾಡಿದೆ.
ಕೇಸ್ಗಳು ಹೆಚ್ಚುತ್ತಿರುವ ಹಿನ್ನೆಲೆ, ನಗರದಲ್ಲಿ ಮೈಕ್ರೋ ಕಂಟೈನ್ಮೆಂಟ್ ಪ್ರದೇಶಗಳು ಹೆಚ್ಚಾಗುತ್ತಿವೆ. ಸೋಂಕು ತ್ವರಿತ ಗತಿಯಲ್ಲಿ ಹರಡುತ್ತಿದ್ದು, ಜನರು ಭಯಭೀತರಾಗಿದ್ದಾರೆ. ಸರ್ಕಾರ ಈ ಬಾರಿ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಜೊತೆಗೆ 8 ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ಆದೇಶಿಸಿದೆ.
ಬೆಂಗಳೂರಿನಲ್ಲಿ ಕೊರೋನಾ 2ನೇ ಅಲೆ ಭಯಾನಕ ಸನ್ನಿವೇಶವನ್ನು ಸೃಷ್ಟಿಸಿತ್ತು. ಆಕ್ಸಿಜನ್, ಬೆಡ್, ವೆಂಟಿಲೇಟರ್ ಸಿಗದೆ ಕೊರೋನಾ ರೋಗಿಗಳು ಅಕ್ಷರಶಃ ತತ್ತರಿಸಿ ಹೋಗಿದ್ದರು. ಕೊನೆಗೆ ಸ್ಮಶಾನದಲ್ಲಿ ಕ್ಯೂ ನಿಲ್ಲುವ ಪರಿಸ್ಥಿತಿಯೂ ಎದುರಾಗಿತ್ತು. ಈ ಕೊರೋನಾ 3ನೇ ಅಲೆ ಎರಡನೇ ಅಲೆಯಷ್ಟು ಭೀಕರವಾಗಿರುವುದಿಲ್ಲ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅಲೆಯ ಭೀಕರತೆ ಹೇಗಿರಲಿದೆ ಎಂದು ಇನ್ನು ಕೆಲವೇ ದಿನಗಳಲ್ಲಿ ತಿಳಿಯಲಿದೆ.
ಆಗಸ್ಟ್ ಕೊನೆಯ ವಾರ ಮತ್ತು ಸೆಪ್ಟೆಂಬರ್ ಮೊದಲ ವಾರದಲ್ಲಿ ಕೊರೋನಾ ಸೋಂಕಿನ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸೋಂಕು ಹೆಚ್ಚಾದರೆ ಇನ್ನೂ ಕಠಿಣ ನಿಯಮಗಳನ್ನು ಜಾರಿಗೊಳಿಸುವುದು ನಿಶ್ಚಿತ.
ಬೆಂಗಳೂರಿನಲ್ಲಿ 160 ಕೊರೋನಾ ಮೈಕ್ರೋ ಕಂಟೈನ್ಮೆಂಟ್ ಪ್ರದೇಶಗಳು ಇವೆ ಎಂದು ವರದಿಯಾಗಿದೆ.
79 - ಅಪಾರ್ಟ್ಮೆಂಟ್ಗಳು
70 - ಮನೆಗಳು01 - ಶಾಲೆ (ಪೊಲೀಸ್ ಶಸ್ತ್ರಾಸ್ತ್ರ ತರಬೇತಿ ಶಾಲೆ)
08 - ಹಾಸ್ಟೆಲ್, ಪಿಜಿ, ಕ್ವಾಟರ್ಸ್
02 – ಇತರೆ
ಒಟ್ಟು 160 ಕಂಟೈನ್ಮೆಟ್ ಝೋನ್ಗಳಿದ್ದು, ಈ ಪ್ರದೇಶಗಳಲ್ಲಿ 648 ಜನರಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ 5,860 ಜನರನ್ನು ಬಿಬಿಎಂಪಿ ಕ್ವಾರಂಟೈನ್ ಮಾಡಿದೆ. ವಲಯವಾರು ಕಂಟೈನ್ಮೆಂಟ್ ಪ್ರದೇಶಗಳು:
ಮಹಾದೇವಪುರ : 42 - 186 ಕೇಸ್ - 157 ಮಂದಿ ಕ್ವಾರಂಟೈನ್
ಪೂರ್ವ ವಲಯ : 35 - 121 ಕೇಸ್ - 403 ಮಂದಿ ಕ್ವಾರಂಟೈನ್
ಬೊಮ್ಮನಹಳ್ಳಿ : 24 - 113 ಕೇಸ್ - 2,235 ಮಂದಿ ಕ್ವಾರಂಟೈನ್
ದಕ್ಷಿಣ ವಲಯ : 20 - 74 ಕೇಸ್ - 604 ಮಂದಿ ಕ್ವಾರಂಟೈನ್
ಯಲಹಂಕ : 20 - 77 ಕೇಸ್ - 2,247 ಮಂದಿ ಕ್ವಾರಂಟೈನ್
ಆರ್ ಆರ್ ನಗರ : 10 - 39 ಕೇಸ್ - 67 ಮಂದಿ ಕ್ವಾರಂಟೈನ್
ಪಶ್ಚಿಮ ವಲಯ : 06 - 25 ಕೇಸ್ - 132 ಮಂದಿ ಕ್ವಾರಂಟೈನ್
ದಾಸರಹಳ್ಳಿ : 03 - 13 ಕೇಸ್ - 15 ಮಂದಿ ಕ್ವಾರಂಟೈನ್