Webdunia - Bharat's app for daily news and videos

Install App

5.75 ಕೋಟಿ ಹಳೆಯ ನೋಟು ವಶ: ಬೆಂಗಳೂರಿನಲ್ಲಿ 15 ಆರೋಪಿಗಳ ಬಂಧನ

Webdunia
ಮಂಗಳವಾರ, 6 ಜೂನ್ 2017 (19:11 IST)
5.75 ಕೋಟಿ ಹಳೆಯ ನೋಟುಗಳನ್ನು ಬದಲಾಯಿಸಲು ಯತ್ನಿಸುತ್ತಿರುವ ಸಂದರ್ಭದಲ್ಲಿ 15 ಆರೋಪಿಗಳನ್ನು  ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಇದು ಒಂದು ತುದಿಯಲ್ಲಿ ಬಸವನಗುಡಿಯಲ್ಲಿರುವ ಹೋಟೆಲ್ನ ಮುಂದೆ ನಿಲುಗಡೆಯಾದ ಕಾರಿನ ಹುಡುಕಾಟವನ್ನು ಅನುಸರಿಸಿತು, ಉಪ ಪೊಲೀಸ್ ಆಯುಕ್ತ ಎಸ್.ಡಿ. ಶರಣಪ್ಪ ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
 
ಹಳೆಯ ನೋಟುಗಳನ್ನು ಬದಲಾಯಿಸಲಾಗುತ್ತಿದೆ ಎನ್ನುವ ಮಾಹಿತಿ ಪಡೆದ ಪೊಲೀಸ್ ಉಪ ಆಯುಕ್ತ ಎಸ್.ಡಿ.ಶರಣಪ್ಪ ಬಸವನಗುಡಿ ಪ್ರದೇಶದಲ್ಲಿರುವ ಹೋಟೆಲ್‌ನ ಪಾರ್ಕಿಂಗ್‌ನಲ್ಲಿ ನಿಂತಿದ್ದ ಕಾರನ್ನು ತಪಾಸಣೆ ನಡೆಸಿದಾಗಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. 
 
2.15 ಕೋಟಿ ರೂ. ಮೌಲ್ಯದ ಕರೆನ್ಸಿ ವಿನಿಮಯ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ
 
ಬೆಂಗಳೂರು ಮೂಲದ ಆರೋಪಿಗಳಾದ 40 ವರ್ಷ ವಯಸ್ಸಿನ ಇಕ್ಬಾಲ್ ಮೊಹಮ್ಮದ್, 30 ವರ್ಷ ವಯಸ್ಸಿನ ಎಸ್. ರಾಜೇಶ್,  ಮತ್ತು ರವೀಂದ್ರನಾಥ್‌ನನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಒಂದು ಕಾರು, ದ್ವಿಚಕ್ರವಾಹನ ಮತ್ತು ಎರಡು ಮೊಬೈಲ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ನಂತರ ಪಿಇಎಸ್‌ ಕಾಲೇಜು ಬಳಿ 1.12 ಕೋಟಿ ರೂಪಾಯಿಗಳ ಮೊತ್ತದ ಹಳೆಯ ನೋಟುಗಳನ್ನು ಬದಲಾಯಿಸಲು ಯತ್ನಿಸುತ್ತಿರುವಾಗ ಆರೋಪಿಗಳಾದ ಪಿ.ಸದಾಶಿವ, ಇ.ಹರ್ಷಾ ಅವರನ್ನು ಬಂಧಿಸಲಾಗಿದ್ದು ಎರಡು ಮೊಬೈಲ್ ಫೋನ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
 
ಗಾಂಧಿ ಬಜಾರ್‌ ಮುಖ್ಯ ರಸ್ತೆಯಲ್ಲಿ 50 ಲಕ್ಷ ರೂಪಾಯಿಗಳ ಹಳೆಯ ನೋಟುಗಳನ್ನು ಬದಲಿಸುತ್ತಿರುವಾಗ ಇಬ್ಬರು ಆರೋಪಿಗಳನ್ನು ಬಂಧಿಸಿ ದ್ವಿಚಕ್ರ ವಾಹನ ಮತ್ತು ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
 
ಸುಬ್ರಮಣ್ಯಪುರ ಪ್ರದೇಶದಲ್ಲಿ ಚಿಕ್ಕಬಳ್ಳಾಪುರ ಮೂಲದ ನಾಲ್ವರು ವ್ಯಕ್ತಿಗಳು 98 ಲಕ್ಷ ರೂ. ಹಳೆಯ ನೋಟು ಬದಲಿಸುತ್ತಿರುವಾಗ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ 1 ಕೋಟಿ ರೂ ಹಳೆಯ ನೋಟು ಬದಲಿಸುತ್ತಿರುವಾಗ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ನಾವು ಅಪಾಯದಲ್ಲಿಲ್ಲ, ನಾವೇ ಅಪಾಯಕಾರಿಗಳು: ಟ್ರೆಂಡ್ ಆಗ್ತಿದೆ ಸ್ಲೋಗನ್

Operation Sindoor: ಇಡೀ ದೇಶ ಹೆಮ್ಮೆಪಡುವಾಗ ರಾಹುಲ್ ಗಾಂಧಿ, ಖರ್ಗೆ ಭಾರತೀಯ ಸೇನೆ ಬಗ್ಗೆ ಹೇಳಿದ್ದೇನು

Operation Sindoor: ಭಾರತ ದುಃಖಿಸುವಂತೆ ಮಾಡುತ್ತೇವೆ, ಶತ್ರುಗಳನ್ನು ಸದೆಬಡಿಯುವುದು ನಮಗೆ ಗೊತ್ತು: ಪಾಕಿಸ್ತಾನ ಪ್ರಧಾನಿ

Mock Drill: ಮಾಕ್ ಡ್ರಿಲ್ ಸೈರನ್ ಬರುತ್ತಿದ್ದಂತೇ ಏನು ಮಾಡಬೇಕು, ಏನೆಲ್ಲಾ ಚಟುವಟಿಕೆ ಮಾಡಲಾಗುತ್ತದೆ ಇಲ್ಲಿದೆ ವಿವರ

Karnataka Weather: ಸತತ ಸೆಖೆ, ಬಿಸಿಲಿನಿಂದ ತತ್ತರಿಸಿದ್ದ ರಾಜ್ಯದ ಜನರಿಗೆ ಗುಡ್ ನ್ಯೂಸ್

ಮುಂದಿನ ಸುದ್ದಿ
Show comments