Select Your Language

Notifications

webdunia
webdunia
webdunia
webdunia

ಛೀ.. ಛೀ.. ಸಮಾಜ ಇಷ್ಟು ಕೆಟ್ಟಿದೆಯಾ?

ಛೀ.. ಛೀ.. ಸಮಾಜ ಇಷ್ಟು ಕೆಟ್ಟಿದೆಯಾ?
ಬೆಂಗಳೂರು , ಮಂಗಳವಾರ, 21 ಜೂನ್ 2016 (08:57 IST)
ಅತ್ಯಾಚಾರದಂತ ಪೈಶಾಚಿಕ ಕೃತ್ಯಗಳು ದೇಶಾದ್ಯಂತ ತಾಂಡವವಾಡುತ್ತಿದ್ದು ಮೂರು ತಿಂಗಳ ಹಸುಗೂಸಿನಿಂದ ಹಿಡಿದು 90ರ ವೃದ್ಧೆಯವರೆಗೂ ಈ ದುಷ್ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ. ಅಷ್ಟೇ ಅಲ್ಲ 12 ವರ್ಷದ ಬಾಲಕರಿಂದ ಹಿಡಿದು 80- 90ರ ವಯೋವೃದ್ಧರು ಕೂಡ ಈ ಕೀಚಕ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ. ಅಂದರೆ ನಮ್ಮಸಮಾಜ ಎಷ್ಟು ಕೆಟ್ಟು ಹೋಗಿದೆ ನೋಡಿ. ಇನ್ನು ಪ್ರಾಥಮಿಕ ಶಾಲೆ ಓದುವ ಮಕ್ಕಳು ಅತ್ಯಾಚಾರಕ್ಕೆ ಕೈ ಹಾಕುತ್ತಾರೆ ಎಂದರೆ ನಾವು ನಮ್ಮ ಮಕ್ಕಳನ್ನು ಅದರಲ್ಲೂ ಗಂಡು ಮಕ್ಕಳನ್ನು ಎಷ್ಟು ಸಂಸ್ಕಾರಯುತವಾಗಿ ಬೆಳೆಸುತ್ತಿದ್ದೇವೆ ಎಂಬುದನ್ನು ಅವಲೋಕಿಸಬೇಕಾದ ಸಮಯವಿದು. 
 
12 ವರ್ಷದ ಬಾಲಕಿಯ ಕೈ ಕಾಲು ಕಟ್ಟಿಹಾಕಿ 14 ವರ್ಷದ ಬಾಲಕ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಜೂನ್ 12ರಂದು ಉತ್ತರಹಳ್ಳಿಯಲ್ಲಿ ನಡೆದಿದೆ. ಘಟನೆ ಬಹಳ ತಡವಾಗಿ ಬೆಳಕಿಗೆ ಬಂದಿದೆ.
 
ಪೀಡಿತೆ ಮತ್ತು ಆರೋಪಿ ನೆರೆಹೊರೆಯವರಾಗಿದ್ದು ಬಾಲಕಿ ಖಾಸಗಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಜೂನ್ 12ರ ಮುಂಜಾನೆ ಯಾರೂ ಇಲ್ಲದ ಸಮಯದಲ್ಲಿ ಬಾಲಕಿಯ ಮನೆಗೆ ನುಗ್ಗಿದ ಬಾಲಕ, ಆಕೆಯ ಕೈ ಕಾಲನ್ನು ದುಪ್ಪಟ್ಟಾದಿಂದ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸಹಾಯಕ್ಕಾಗಿ ಬಾಲಕಿ ಕೂಗಿಕೊಂಡಾಗ ನೆರೆಹೊರೆಯವರು ಬಂದು ಆಕೆಯನ್ನು ರಕ್ಷಿಸಿದ್ದಾರೆ ಮತ್ತು ಪರಾರಿಯಾಗಲು ಯತ್ನಿಸಿದ ಬಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜನ್‌ ನಂತ್ರ ನನ್ನ ನೆಕ್ಟ್ ಟಾರ್ಗೆಟ್ ನಜೀಬ್ ಜಂಗ್, ಕೇಜ್ರಿವಾಲ್: ಸುಬ್ರಹ್ಮಣ್ಯಂ ಸ್ವಾಮಿ