Webdunia - Bharat's app for daily news and videos

Install App

ಪ್ರತ್ಯೇಕ ಅವಘಡಗಳಲ್ಲಿ 14 ಸಾವು

Webdunia
ಶನಿವಾರ, 18 ಮಾರ್ಚ್ 2023 (11:25 IST)
ಹೈದರಾಬಾದ್​​​ನ ಸಿಕಂದರಾಬಾದ್‌ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ ಓರ್ವ ಮಹಿಳೆ ಸಹಿತ ಆರು ಮಂದಿ ಮೃತ‍‍ಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿಗೆ ನಿಖರ ಕಾರಣ ಏನೆಂಬುದು ತನಿಖೆಯ ಬಳಿಕವಷ್ಟೇ ತಿಳಿಯಬೇಕಿದ್ದು, ಹೊಗೆಯಿಂದ ಉಸಿರುಗಟ್ಟಿ ಸಾವಿಗೀಡಾಗಿರಬಹುದು ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. 12 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದ್ದು, ಈ ಪೈಕಿ 6 ಮಂದಿ ಸಾವಿಗೀಡಾಗಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತರೆಲ್ಲರೂ ತೆಲಂಗಾಣದ ವಾರಂಗಲ್‌ ಹಾಗೂ ಖಮ್ಮನ್‌ ಜಿಲ್ಲೆಯವರಾಗಿದ್ದು, ಕಟ್ಟಡದಲ್ಲಿದ್ದ ಮಾರ್ಕೆಂಟಿಂಗ್‌ ಕಂಪನಿಯಲ್ಲಿ ಇವರೆಲ್ಲರೂ ಕೆಲಸ ಮಾಡುತ್ತಿದ್ದರು. ಸಂಜೆ 7.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದೆ. ಶಾರ್ಟ್‌ ಸರ್ಕ್ಯೂಟ್‌ನಿಂದ ಈ ಅವಘಡ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ. ಮತ್ತೊಂದೆಡೆ ಉತ್ತರ ಪ್ರದೇಶಲ್ಲಿ ಕೋಲ್ಡ್​ ಸ್ಟೋರೆಜ್​​ ಗೋದಾಮು ಕುಸಿತ ಸಂಭವಿಸಿ 8 ಮಂದಿ ಸಾವನಪ್ಪಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ದೇಶ ಬದಲಾಯಿಸಿದ್ದರೆ, ಕಾಂಗ್ರೆಸ್ ಒಡೆದು ಆಳುತ್ತಿದೆ: ಜೆಪಿ ನಡ್ಡಾ

ಛೀ ಇದೆಂಥಾ ಅನಾಚಾರ.. ಚಿಕನ್ ಬಿರಿಯಾನಿ ಬೇಯಿಸುತ್ತಿರುವ ಗಣೇಶನ ಬ್ಯಾನರ್: Video

ಕರ್ನಾಟಕ ಹವಾಮಾನ ವರದಿ: ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ, IMD ನೀಡಿದ ಹೊಸ ಸಿಹಿ ಸುದ್ದಿ

ಉಮರ್ ಖಾಲಿದ್ ದೇಶಭಕ್ತ, ಗಾಡ್ಸೆ ದೇಶದ ಮೊದಲ ಭಯೋತ್ಪಾದಕ: ಬಿಕೆ ಹರಿಪ್ರಸಾದ್

ದೇಶಕ್ಕಿಂತ, ಪಕ್ಷವೇ ಮುಖ್ಯವಾಯ್ತಾ, ಬ್ರಿಕ್ಸ್ ಔತಣಕೂಟಕ್ಕೆ ಕರೆದರೂ ಹೋಗದ ಕಾಂಗ್ರೆಸ್ ಸಿಎಂಗಳ ವಿರುದ್ಧ ಆಕ್ರೋಶ

ಮುಂದಿನ ಸುದ್ದಿ
Show comments