ಜಿಲ್ಲಾಡಳಿತದ ಬಳಿ 1 ಲಕ್ಷ ರೂಪಾಯಿ ಇಲ್ಲವೇ? ಹೀಗಂತ ಜ್ಯೂ. ಖರ್ಗೆ ಖಡಕ್ ಪ್ರಶ್ನೆ ಮಾಡಿದ್ದಾರೆ.
ಬೇಸಿಗೆ ಕಳೆದು ಮಳೆಗಾಲ ಬಂದಂತೆ ತಡವಾಗಿ ಕಲಬುರಗಿಯಲ್ಲಿ ಕೋವಿಡ್ ಸಹಾಯವಾಣಿ ಸ್ಥಾಪಿಸಿರುವುದಕ್ಕೆ ಶಾಸಕ ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದ್ದಾರೆ.
ಸಹಾಯವಾಣಿಗಾಗಿ ಒಂದು ಲಕ್ಷ ರೂ.ಗಳನ್ನು ಕೆಕೆಆರ್ ಡಿಬಿ ಅನುದಾನದಿಂದ ಬಳಸಿಕೊಳ್ಳಲಾಗುತ್ತಿದೆ. ಇಷ್ಟು ಸಣ್ಣ ಮೊತ್ತದ ಹಣವೂ ಜಿಲ್ಲಾಡಳಿತದ ಹತ್ತಿರ ಇಲ್ಲವೇ? ಎಂದು ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಏಳೆಂಟು ಸಾವಿರ ಜನರಿಗೆ ಜಿಲ್ಲೆಯಲ್ಲಿ ಪಾಸಿಟಿವ್ ಬಂದು 148 ಜನರು ಸಾವನ್ನಪ್ಪಿದ ಬಳಿಕ ಈಗ ಸರಕಾರ ಸಹಾಯವಾಣಿ ಆರಂಭ ಮಾಡಿದೆ. ಸರಕಾರದವರ ದೂರದೃಷ್ಟಿಗೆ ನನ್ನ ಸಲಾಂ ಎಂದು ವ್ಯಂಗ್ಯವಾಡಿದ್ದಾರೆ.