Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ 1,98. ಕೋಟಿ ರೂ. ಹಳೇ ನೋಟು ವಶ: ಮೂವರ ಬಂಧನ

ಬೆಂಗಳೂರಲ್ಲಿ 1,98. ಕೋಟಿ ರೂ. ಹಳೇ ನೋಟು ವಶ: ಮೂವರ ಬಂಧನ
ಬೆಂಗಳೂರು , ಮಂಗಳವಾರ, 28 ಮಾರ್ಚ್ 2017 (13:55 IST)
ಬೆಂಗಳೂರಿನ ಸಿಸಿಬಿ ಪೊಲೀಸರು 1.98 ಕೋಟಿ ರೂ. ಹಳೇ ನೋಟುಗಳನ್ನ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಮೂವರನ್ನ ಬಂಧಿಸಲಾಗಿದೆ. ಬಂಧಿತರನ್ನ ಆಫ್ರೋಜ್, ಆರಿಫ್ ಪಾಷಾ ಮತ್ತು ಫೆಲಿಪ್ಸ್ ಎಂದು ಗುರ್ತಿಸಲಾಗಿದೆ.

ವೆಸ್ಟ್ ಆಫ್ ಕಾರ್ಡ್ ರಸ್ತೆಯ ಶಿವಾಲಿ ಲಾಡ್ಜ್ ಬಳಿ ಹಣ ಬದಲಾವಣೆಗೆ ಯತ್ನಿಸುತ್ತಿದ್ದಾಗ ಪೊಲೀಸರ ಬಲೆ ಬಿದ್ದಿದ್ದಾರೆ. ಬಂಧಿತರಿಂದ 3 ಮೊಬೈಲ್, 1 ಆಡಿ ಕಾರನ್ನ ವಶಪಡಿಸಿಕೊಳ್ಳಲಾಗಿದೆ.

ನೋಟ್ ಬ್ಯಾನ್ ಬಳಿಕ ಕೇಂದ್ರ ಸರ್ಕಾರ ನಿಗಪಡಿಸಿದ್ದ ಹಣ ಬದಲಾವಣೆಯ ಸಮಯ ಮುಗಿದಿದ್ದು, 10 ಸಾವಿರಕ್ಕೂ ಅಧಿಕ ಹಳೆಯ ನೋಟು ಇಟ್ಟುಕೊಳ್ಳುವಂತಿಲ್ಲ. ಆದರೆ, ಈ ಖದೀಮರು ಇಷ್ಟು ಪ್ರಮಾಣದ ಹಣ ಎಲ್ಲಿಂದ ತಂದರು ಎಂಬುದು ತನಿಖೆಯಿಂದ ಹೊರಬರಬೇಕಿದೆ. ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸಾಲ ಮನ್ನಾ ಮಾಡಿದ್ರೆ ನಾನೂ ಮಾಡ್ತೀನಿ: ಸಿಎಂ ಸಿದ್ದರಾಮಯ್ಯ