Select Your Language

Notifications

webdunia
webdunia
webdunia
webdunia

ಹೊಸವರ್ಷ ಆಚರಣೆ: ಬೆಂಗಳೂರಲ್ಲಿ ಪೋಲಿಸರ ಭದ್ರತೆ

ಹೊಸವರ್ಷ ಆಚರಣೆ: ಬೆಂಗಳೂರಲ್ಲಿ ಪೋಲಿಸರ ಭದ್ರತೆ
ಬೆಂಗಳೂರು , ಮಂಗಳವಾರ, 31 ಡಿಸೆಂಬರ್ 2013 (09:30 IST)
PR
ಅಂತು ಇಂತು 2013ಕ್ಕೆ ಟಾಟಾ ಹೇಳುವ ಕಾಲ ಬಂತು. ನಾಳೆ ಹೊಸವರ್ಷಕ್ಕೆ ಕಾಲಿಡುತ್ತಿದ್ದೆವೆ. ಹೊಸವರ್ಷದ ಆಚರಣೆ ಶಾಂತಿಯುತವಾಗಿ ನಡೆಯಲು ಬೆಂಗಳೂರಿನ ಪೋಲಿಸರು ಸುಕ್ತವಾದ ಭದ್ರತೆ ಒದಗಿಸಲು ಸಜ್ಜಾಗಿದೆ .

ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸುತ್ತಮುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ತಿಳಿಸಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು 7 ಡಿಸಿಪಿ, 5 ಎಸಿಪಿ, ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಮತ್ತು ಪೇದೆಗಳು ಸೇರಿದಂತೆ ಒಟ್ಟು 700 ಪೊಲೀಸರನ್ನು ನಿಯೋಜಿಸಲಾಗಿದೆ. ಜತೆಗೆ, 26 ಕೆಎಸ್‌ಆರ್‌ಪಿ, 12 ಸಿಎಆರ್ ತುಕಡಿಗಳಿಗೂ ವ್ಯವಸ್ಥೆ ಮಾಡಲಾಗಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ 50 ಅಧಿಕ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲಾಗಿದೆ.

Share this Story:

Follow Webdunia kannada