Select Your Language

Notifications

webdunia
webdunia
webdunia
webdunia

ಹಿಂದೂ ದೇವತೆಗಳನ್ನು ನಿಂದಿಸಿದ ಡಿಸಿಗೆ ಜೆಡಿಎಸ್‌ ಬೆಂಬಲ.

ಹಿಂದೂ ದೇವತೆಗಳನ್ನು ನಿಂದಿಸಿದ ಡಿಸಿಗೆ ಜೆಡಿಎಸ್‌ ಬೆಂಬಲ.
ಬೀದರ್‌ , ಮಂಗಳವಾರ, 19 ನವೆಂಬರ್ 2013 (16:54 IST)
PR
PR
ಹಿಂದೂ ದೇವತೆಗಳನ್ನು ನಿಂದಿಸಿದ ಬೀದರ್‌ ಡಿಸಿ ಡಾ.ಪಿಸಿ ಜಾಫರ್‌ ಅವರನ್ನು ಜೆಡಿಸ್‌ ಪಕ್ಷ ಬೆಂಬಲಿಸುತ್ತಿದೆ. ’ಡಿಸಿ ಜಾಫರ್‌ ತಪ್ಪು ಮಾಡಿಲ್ಲ. ಫೇಸ್‌ಬುಕ್‌ನಲ್ಲಿ ಹಿಂದುಗಳನ್ನು ನಿಂದಿಸಿದವರು ಬೇರೆಯವರು. ಆ ಪೋಸ್ಟ್ ಅನ್ನು ಡಿಸಿ ಜಾಫರ್‌ ಅವರು ಶೇರ್‌ ಮಾಡಿದ್ದಾರೆ. ಅದನ್ನೇ ರಾಜಕೀಯ ಗಾಳ ಮಾಡಿಕೊಂಡ ಕೆಲವರು ಡಿಸಿ ಜಾಫರ್‌ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬೀದರ್‌ ಜಿಲ್ಲೆಯ ಜೆಡಿಎಸ್‌ ಮುಖಂಡ ಶ್ರೀಕಾಂತ್‌ ಸ್ವಾಮಿ ಹೇಳಿದ್ದಾರೆ. ಈ ಮೂಲಕ ಡಿಸಿ ಜಾಫರ್‌ ಅವರ ಬೆಂಬಲಕ್ಕೆ ನಿಂತಿದ್ದಾರೆ ಜೆಡಿಎಸ್‌ ಮುಖಂಡರು.

"ಡಿಸಿ ಜಾಫರ್‌ ಅವರು ಯಾವುದೇ ಪೋಸ್ಟನ್ನು ಪ್ರಕಟಿಸಿಲ್ಲ. ಯಾರೋ ಪ್ರಕಟಿಸಿದ ಪೋಸ್ಟನ್ನು ಡಿಸಿಯವರು ಶೇರ್‌ ಮಾಡಿದ್ದಾರೆ. ಈ ರೀತಿ ನಿಂದನೆ ಮಾಡಬೇಡಿ ಎಂದು ಅದರಲ್ಲಿ ಸೂಚಿದಿದ್ದಾರೆ. ಆದ್ರೆ ಅದನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲವರು ಡಿಸಿಯವರು ಹಿಂದೂ ದೇವರನ್ನು ನಿಂದಿಸಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದಾರೆ. ಈ ಮೂಲಕ ಡಿಸಿ ಜಾಫರ್‌ ಅವರ ಮುಖಕ್ಕೆ ಮಸಿ ಬಳಿಯುವ ಯತ್ನ ಮಾಡುತ್ತಿದ್ದಾರೆ ಎಂದು ಹೇಳುವುದರ ಮೂಲಕ ಡಿಸಿಯ ಫೇಸ್‌ಬುಕ್‌ ಪ್ರಕರಣವನ್ನು ಬೀದರ್‌ ಜಿಲ್ಲೆಯ ಜೆಡಿಎಸ್‌ ಮುಖಂಡ ಶ್ರೀಕಾಂತ್ ಸ್ವಾಮಿಯವರು ಸಮರ್ಥಿಸಿಕೊಂಡಿದ್ದಾರೆ.

ಡಿಸಿಯನ್ನು ಬೆಂಬಲಿಸುವುದರ ಹಿಂದೆ ರಾಜಕೀಯ ಲಾಭ? ಇನ್ನಷ್ಟು ಮಾಹಿತಿ ಮುಂದಿನ ಪುಟದಲ್ಲಿ.....

webdunia
PR
PR
ಡಿಸಿಯನ್ನು ಬೆಂಬಲಿಸುವುದರ ಹಿಂದೆ ರಾಜಕೀಯ ಲಾಭ?

ಹಿಂದೂ ದೇವತೆಗಳನ್ನು ನಿಂದಿಸಿದ ಡಿಸಿ ಜಾಫರ್‌ ಅವರನ್ನು ಬೆಂಬಲಿಸುತ್ತಿರುವ ಜೆಡಿಎಸ್‌ ಪಕ್ಷ ಇದರಿಂದ ರಾಜಕೀಯ ಲಾಭವನ್ನು ಪಡೆಯಲು ಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಡಿಸಿಯನ್ನು ತನ್ನತ್ತ ಸೆಳೆದುಕೊಂಡು ಆ ಮೂಲಕ ಜೆಡಿಎಸ್‌ ತನ್ನ ವೈಯಕ್ತಿಕ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.


ಜೆಡಿಎಸ್‌ ಮುಖಂಡನಿಗೆ ಫೇಸ್‌ಬುಕ್‌ ಗೆಳೆಯರಿಂದ ತರಾಟೆ.

ಡಿಸಿಯವರನ್ನು ಬೆಂಬಲಿಸುವ ಕುರಿತಾದ ತಮ್ಮ ಈ ಹೇಳಿಕೆಯನ್ನು ಶ್ರೀಕಾಂತ್ ಸ್ವಾಮಿ ತಮ್ಮ ಫೇಸ್‌ಬುಕ್ ಅಕೌಂಟಿನಲ್ಲಿ ಪ್ರಕಟಿಸಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಜೆಡಿಎಸ್‌ ಮುಖಂಡನ ವಿರುದ್ದ ಸಾರ್ವಜನಿಕರು ಆಕ್ರೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. "ಡಿಸಿ ತಪ್ಪು ಮಾಡಿಲ್ಲ ಎಂದಾದರೆ, ಆ ಪೋಸ್ಟನ್ನು ಏಕೆ ಡಿಲಿಟ್ ಮಾಡಿದ್ದಾರೆ?" ಎಂದು ಜನರು ಜೆಡಿಎಸ್‌ ಮುಖಂಡನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಏನಿದು ಬೀದರ್‌ ಡಿಸಿ ಜಾಫರ್‌ ಅವರ ಅವಾಂತರ? ಮುಂದಿನ ಪುಟದಲ್ಲಿ ಇನ್ನಷ್ಟು ಮಾಹಿತಿ...

webdunia
PR
PR
ಏನಿದು ಬೀದರ್‌ ಡಿಸಿ ಜಾಫರ್‌ ಅವರ ಅವಾಂತರ?

ಡಿಸಿ ಜಾಫರ್‌ ಅವರು ಶ್ರೀ ರಾಮನನ್ನು ಡ್ಯೂಡ್‌ ಎಂದೂ, ಸೀತೆಯನ್ನು ಬೇಬ್‌ ಎಂದೂ, ಮತ್ತು ಕೌಸಲ್ಯೆಯನ್ನು ಬಿಚ್‌ ಎಂದೂ ಸಂಬೋಧಿಸಿ, ಪೋಸ್ಟ್‌ ಒಂದನ್ನು ತಮ್ಮ ಫೇಸ್‌ಬುಕ್‌ ಅಕೌಂಟಿನಲ್ಲಿ ಪ್ರಕಟಿಸಿದ್ದರು. ಇದರಿಂದ ರೊಚ್ಚಿಗೆದ್ದ ಹಿಂದೂಪರ ಸಂಘಟನೆಗಳನ್ನು ಡಿಸಿ ವಿರುದ್ದ ಕ್ರಮ ಕೈಗೊಳ್ಳುವಂತೆ ದೊಡ್ಡ ಮಟ್ಟದ ಹೋರಾಟವನ್ನು ಮಾಡಿದವು.

Share this Story:

Follow Webdunia kannada