Select Your Language

Notifications

webdunia
webdunia
webdunia
webdunia

ಸೆಕ್ಸ್ ರಾಕೆಟ್: ಯುವತಿಯರೊಂದಿಗೆ ಇಬ್ಬರು ಆರೋಪಿಗಳ ಬಂಧನ

ಸೆಕ್ಸ್ ರಾಕೆಟ್: ಯುವತಿಯರೊಂದಿಗೆ ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು , ಮಂಗಳವಾರ, 1 ಏಪ್ರಿಲ್ 2014 (14:03 IST)
ಕಾವಲ್‌ಪೈರ್‌ಸಂದ್ರದ ಹೊಸ ಬಡಾವಣೆ 8ನೇ ಮುಖ್ಯರಸ್ತೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಒಬ್ಬ ಯುವತಿಯನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿದ್ದಾರೆ.

ವೇಶ್ಯಾವಾಟಿಕೆ ನಡೆಸುತ್ತಿದ್ದ ಶ್ರೀನಿವಾಸ್ (22) ಹಾಗೂ ರಾಜ (24) ಬಂಧಿತರು. ಇವರಿಂದ 2 ಸಾವಿರ ನಗದು ಹಾಗೂ ಗ್ರಾಹಕರೊಂದಿಗೆ ವ್ಯವಹರಿಸಲು ಬಳಸುತ್ತಿದ್ದ 2 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ದೀಪಕ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ. ಮುಂಬೈ ಮೂಲದ ಯುವತಿಯನ್ನು ಬೆಂಗಳೂರಿನಲ್ಲಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಕೊಡಿಸುವುದಾಗಿ ಕರೆತರಲಾಗಿತ್ತು. ಬಳಿಕ ವೇಶ್ಯಾವಾಟಿಕೆಯಲ್ಲಿ ಒಳ್ಳೆಯ ಹಣ ಸಂಪಾದಿಸಬಹುದು ಎಂದು ಯುವತಿಯನ್ನು ಪುಸಲಾಯಿಸಿ ಕಾವಲ್‌ಪೈರ್‌ಸಂದ್ರದ ಬಾಡಿಗೆ ಮನೆಯೊಂದರಲ್ಲಿ ವೇಶ್ಯಾವಾಟಿಕೆಗೆ ನೂಕಲಾಗಿತ್ತು. ಡಿ.ಜೆ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada