Select Your Language

Notifications

webdunia
webdunia
webdunia
webdunia

ಸೆಕ್ಸ್ ಫಿಲ್ಮ್ ವೀಕ್ಷಣೆ ಪ್ರಕರಣ-ಮಾರ್ಚ್ 13ಕ್ಕೆ ಸದನ ಸಮಿತಿ ವರದಿ

ಸೆಕ್ಸ್ ಫಿಲ್ಮ್ ವೀಕ್ಷಣೆ ಪ್ರಕರಣ-ಮಾರ್ಚ್ 13ಕ್ಕೆ ಸದನ ಸಮಿತಿ ವರದಿ
ಬೆಂಗಳೂರು , ಬುಧವಾರ, 29 ಫೆಬ್ರವರಿ 2012 (18:06 IST)
PR
ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಪ್ರಕರಣದ ತನಿಖೆಗಾಗಿ ರಚಿಸಲಾಗಿರುವ ಸದನ ಸಮಿತಿ ಮಾರ್ಚ್ 13ರೊಳಗೆ ವರದಿಯನ್ನು ಸಲ್ಲಿಸಲಿದ್ದು, ಅಗತ್ಯವೆನಿಸಿದರೆ ಅಶ್ಲೀಲ ಚಿತ್ರ ವೀಕ್ಷಿಸಿದ ಮೂವರು ಮಾಜಿ ಸಚಿವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ತೀರ್ಮಾನಿಸಿದೆ.

ಬುಧವಾರ ನಡೆದ ಸದನ ಸಮಿತಿಯ ಎರಡನೇ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಸದನ ಸಮಿತಿ ಅಧ್ಯಕ್ಷ ಶ್ರೀಶೈಲಪ್ಪ ಬಿದರೂರು, ಮಾರ್ಚ್13ರಂದು ಸದನ ಸಮಿತಿ ತನ್ನ ವರದಿಯನ್ನು ಸಭಾಧ್ಯಕ್ಷರಿಗೆ ಸಲ್ಲಿಸಲಿದೆ. ಮುಂದಿನ ಅಧಿವೇಶನದಲ್ಲಿ ಈ ವರದಿ ಮಂಡನೆಯಾಗಲಿದೆ ಎಂದರು.

ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಾಸಕರಿಗೂ ನೋಟಿಸ್ ಜಾರಿ ಮಾಡಲಾಗುವುದು. ಯಾರಿಗೆ ನೋಟಿಸ್ ಜಾರಿ ಮಾಡಬೇಕು, ಯಾರನ್ನು ವಿಚಾರಣೆಗೆ ಕರೆಸಬೇಕು ಎಂಬ ಬಗ್ಗೆ ಗುರುವಾರ ನಡೆಯಲಿರುವ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

Share this Story:

Follow Webdunia kannada