Select Your Language

Notifications

webdunia
webdunia
webdunia
webdunia

ಸಾಮೂಹಿಕ ವಿವಾಹಗಳಿಂದ ಆಡಂಬರ ತಪ್ಪಿಸಬಹುದು: ಎಚ್‌ಡಿಕೆ

ಸಾಮೂಹಿಕ ವಿವಾಹಗಳಿಂದ ಆಡಂಬರ ತಪ್ಪಿಸಬಹುದು: ಎಚ್‌ಡಿಕೆ
ವಿಜಾಪುರ , ಭಾನುವಾರ, 19 ಸೆಪ್ಟಂಬರ್ 2010 (17:39 IST)
ಉತ್ತರ ಕರ್ನಾಟಕ ಜನತೆ ಬಗ್ಗೆ ಎಲ್ಲ ಪಕ್ಷಗಳ ರಾಜಕಾರಣಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಸಾಮೂಹಿಕ ವಿವಾಹಗಳಿಂದ ಆಡಂಬರ ತಪ್ಪಿಸಬಹುದು. ಅಲ್ಲದೆ, ಬಡವರಿಗೆ ಅನುಕೂಲವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಇಲ್ಲಿನ ಮುಗಳಖೋಡ ಮಠದ ಯಲ್ಲಾಲಿಂಗೇಶ್ವರ ಪುಣ್ಯಾಶ್ರಮದಲ್ಲಿ ಷಡಕ್ಷರಿ ಶಿವಯೋಗಿ ಸಿದ್ದರಾಮೇಶ್ವರ ಶ್ರೀಗಳ 83ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಮುರುಘರಾಜೇಂದ್ರ ಶ್ರೀಗಳು 101 ಜೋಡಿಗಳ ಸಾಮೂಹಿಕ ವಿವಾಹ ಏರ್ಪಡಿಸಿ ಬಡ ಜನತೆಗೆ ಅನುಕೂಲ ಒದಗಿಸಿದ್ದಾರೆ. ಅದೇ ರೀತಿ ಆಡಂಬರದ ಮದುವೆಗಳಿಗೆ ಕಡಿವಾಣ ಹಾಕಿ ಸಾಮೂಹಿಕ ವಿವಾಹಗಳನ್ನು ಪ್ರೌತ್ಸಾಹಿಸಬೇಕು. ಉತ್ತರ ಕರ್ನಾಟಕದ ಅಭಿವೃದ್ದಿಗೆ ಎಲ್ಲ ಪಕ್ಷಗಳ ನಾಯಕರು ಶ್ರಮಿಸಬೇಕೆಂದರು. ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀ ನವ ದಂಪತಿಗಳನ್ನು ಆಶೀರ್ವದಿಸಿದರು.

ಷಡಕ್ಷರಿ ಶಿವಯೋಗಿ ಮುರುಘರಾಜೇಂದ್ರ ಶ್ರೀಗಳು ಮಾತನಾಡಿ ಮುಗಳಖೋಡ ಮಠವು ಕರ್ನಾಟಕ, ಮಹಾರಾಷ್ಟ್ತ್ರ, ಆಂಧ್ರ ಪ್ರದೇಶ ಹಾಗೂ ಗೋವಾ ರಾಜ್ಯಗಳಲ್ಲಿ 360 ಶಾಖಾ ಮಠಗಳನ್ನು ಹೊಂದಿದೆ. ಅಪಾರ ಭಕ್ತರಿದ್ದಾರೆ. ಬೆಂಗಳೂರಿನಲ್ಲಿ ಮಠದ ಶಾಖೆ ಸ್ಥಾಪಿಸಬೇಕೆಂಬ ಭಕ್ತರ ಬೇಡಿಕೆಯಂತೆ ಶಿವಯೋಗಿಗಳ ಜಯಂತಿ ಸವಿನೆನಪಿಗಾಗಿ ಸಮರ್ಪಿಸಲಾಗುತ್ತಿದೆ. ಶ್ರೀ ಮಠವು ಶಿಕ್ಷಣಕ್ಕೆ ಪ್ರಾಶಸ್ತ್ಯ ಕೊಡಲಿದೆ ಎಂದರು.

Share this Story:

Follow Webdunia kannada