Webdunia - Bharat's app for daily news and videos

Install App

ಶ್ರೀರಾಮುಲು ಮತ್ತು ಯಡ್ಯೂರಪ್ಪ ಬಿಜೆಪಿಗೆ ಬರೋದು ಪಕ್ಕಾ : ಕೆಎಸ್‌ ಈಶ್ವರಪ್ಪ

Webdunia
ಶನಿವಾರ, 30 ನವೆಂಬರ್ 2013 (13:29 IST)
PR
PR
ವರದಿ : ಶೇಖರ್‌ ಪೂಜಾರಿ

ಮಾನ್ಯ ಯಡ್ಯೂರಪ್ಪನವರು ಬಿಜೆಪಿಗೆ ಬರ‍್ತಾರೆ. ಅಷ್ಟೆ ಅಲ್ಲ, ಅವರ ಜೊತೆಗೆ ಬಿಎಸ್‌ಆರ್‌ ಪಕ್ಷದ ಶ್ರೀರಾಮುಲು ಕೂಡ ಮರಳಿ ಬಿಜೆಪಿ ಸೇರಲಿದ್ದಾರೆ. ಕೇಂದ್ರದ ನಾಯಕರು ಯಡ್ಯೂರಪ್ಪನವರ ಪರವಾಗಿ ಒಲವು ತೋರಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಯಡ್ಯೂರಪ್ಪ ಮತ್ತು ಶ್ರೀರಾಮುಲು ಬಿಜೆಪಿ ಪಕ್ಷದಲ್ಲಿ ಇರೋದನ್ನು ನೀವೇ ನೋಡ್ತೀರ" ಎಂದು ಬಿಜೆಪಿ ಮುಖಂಡ ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ.


ಯಡ್ಯೂರಪ್ಪನವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ಹಲವರು ತಿಂಗಳುಗಳಿಂದ ನಡೆಯುತ್ತಲೇ ಇದೆ. ಅದ್ರೆ ಈ ಬಗ್ಗೆ ಕೇಂದ್ರದ ನಾಯಕರು ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಿದ್ದಾಗ್ಯೂ, ರಾಜ್ಯ ಬಿಜೆಪಿ ನಾಯಕರ ಕನಸುಗಳು ಮಾತ್ರ ಭಗ್ನವಾಗಿಯೇ ಇಲ್ಲ. ಯಡ್ಯೂರಪ್ಪ ಬಿಜೆಪಿಗೆ ಬಂದೇ ಬರ‍್ತಾರೆ. ಅಷ್ಟೆ ಅಲ್ಲ ಶ್ರೀರಮುಲು ಕೂಡ ಬಿಜೆಪಿ ಸೇರುವುದು ಪಕ್ಕಾ ಆಗಿದೆ. ಇವರಿಬ್ಬರೂ ಪಕ್ಷದತ್ತ ಮರಳಿ ಬರುವುದರ ಬಗ್ಗೆ ಕೇಂದ್ರ ನಾಯಕರು ಒಲವು ತೋರಿದ್ದಾರೆ ಎಂದು ಈಸ್ವರಪ್ಪ ಸಂತಸ ವ್ಯಕ್ತಪಡಿಸಿದ್ರು.


ಈಶ್ವರಪ್ಪನವರೇನೋ ಈ ಹಿಂದಿನಿಂದಲೂ ಅದೇ ರಾಗ ಅದೇ ಹಾಡು ಹಾಡುತ್ತಲೇ ಇದ್ದಾರೆ. ಆದ್ರೆ ಕೇಂದ್ರದ ನಾಯಕರಲ್ಲಿ ಮಾತ್ರ ಅಂತಹ ಯಾವುದೇ ಬದಲಾವಣೆಗಳಾಗಲೀ, ಅಥವ ಯಾವುದೇ ಪ್ರತಿಕ್ರಿಯೆಗಳಾಗಲಿ ಬಂದಿಲ್ಲ. ಯಡ್ಯೂರಪ್ಪ ನೋಡಿದ್ರೆ, ಬಿಜೆಪಿಗೆ ಹೋಗೋದೇ ಇಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಹೀಗಿರುವಾಗ ಈಶ್ವರಪ್ಪನವರ ಕನಸು ನನಸಾಗುತ್ತಾ ಅನ್ನೋದೇ ಯಕ್ಷ ಪ್ರೆಶ್ನೆ. ಆದ್ರೆ ಕುರ್ಚಿಗಾಗಿ ಎಂತಹ ರಾಜಕೀಯ ಬದಲಾವಣೆಗಳು ಬೇಕಾದ್ರೂ ಆಗಬಹುದು ಅನನ್ಗೋ ಮಾತನ್ನೂ ಕೂಡ ನಾವು ತಳ್ಳಿಹಾಕುವಂತಿಲ್ಲ.. ಅಲ್ಲವೇ..?

ವರದಿ : ಶೇಖರ್‌ ಪೂಜಾರಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments