Webdunia - Bharat's app for daily news and videos

Install App

ಶ್ರೀಕೃಷ್ಣ ಪೂಜೆಗೆ ಸಹಕಾರ: ಕರಗಿತು ವಿವಾದ

Webdunia
ಮಂಗಳವಾರ, 22 ಜನವರಿ 2008 (17:39 IST)
ಎರಡು ವರ್ಷಗಳ ಪರ್ಯಾಯದ ಅವಧಿಯಲ್ಲಿ ಪುತ್ತಿಗೆ ಶ್ರೀಗಳು ನಡೆಸುವ ಶ್ರೀಕೃಷ್ಣ ಪೂಜೆಗೆ ಇತರ ಮಠಾಧೀಶರಿಂದ ಬೆಂಬಲ ಸಿಗುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಇದಕ್ಕೆ ಉಳಿದ ಮಠಾಧೀಶರು ಒಪ್ಪಿದ್ದಾರೆ ಎಂದು ಪುತ್ತಿಗೆ ಶ್ರೀಗಳು ಹೇಳುವ ಮೂಲಕ ವಿವಾದ ಇತ್ಯರ್ಥವಾಗುವ ಘಟ್ಟಕ್ಕೆ ಬಂದಂತಾಗಿದೆ.

ಈಗಾಗಲೇ ಶಿರೂರು ಶ್ರೀಗಳು ಪುತ್ತಿಗೆ ಶ್ರೀಗಳ ಶ್ರೀಕೃಷ್ಣ ಪೂಜೆಯಲ್ಲಿ ಸಹಕರಿಸುತ್ತಿದ್ದು, ಕಾಣಿಯೂರು ಶ್ರೀಗಳು ಮತ್ತು ಪೇಜಾವರ ಶ್ರೀಗಳೂ ಪೂಜೆಯ ಅವಧಿಯಲ್ಲಿ ಸಹಕರಿಸುವುದರ ಕುರಿತು ಆಶ್ವಾಸನೆ ನೀಡಿರುವುದಾಗಿ ತಿಳಿದುಬಂದಿದೆ.

ಇದಿಷ್ಟೇ ಅಲ್ಲದೆ, ಅಷ್ಟಮಠಗಳ ಸಂವಿಧಾನ ರಚನೆಗೆ ಸಂಬಂಧಿಸಿ ಪುತ್ತಿಗೆ ಶ್ರೀಗಳು ಮಾಡಿರುವ ಪ್ರಸ್ತಾವನೆಗಳಿಗೂ ಉಳಿದೆಲ್ಲ ಮಠಾಧೀಶರ ಅನುಮೋದನೆ ಸಿಕ್ಕಿದ್ದು ವಿವಾದದ ಗೂಡಾಗಿದ್ದ ಉಡುಪಿ ಮತ್ತೆ ಎಂದಿನ ದಿನಗಳಿಗೆ ಮರಳುವ ದಿನಗಳು ದೂರವಿಲ್ಲ ಎಂದೇ ಅರ್ಥೈಸಲಾಗುತ್ತಿದೆ.

ಆದರೆ ಪರ್ಯಾಯ ಮಹೋತ್ಸವ ಮುಗಿದು ಇಷ್ಟು ದಿನಗಳಾದ ಬಳಿಕವೂ ಪುತ್ತಿಗೆ ಶ್ರೀಗಳು ಶ್ರೀಕೃಷ್ಣನ ವಿಗ್ರಹವನ್ನು ಮುಟ್ಟದೇ ಪೂಜಿಸುತ್ತಿದ್ದಾರೆ ಎಂದು ತಿಳಿದುಬಂದಿದ್ದು ಈ ಕುರಿತು ಅವರಿಂದ ಯಾವುದೇ ಸಮರ್ಥನೆ ಅಥವಾ ವಿವರಣೆಗಳು ಹೊರಬಿದ್ದಿಲ್ಲ. ಆದರೆ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ತಾವು ಹಾಕಿಕೊಂಡಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲು ಅನುವಾಗುವಂತೆ ಈಗಾಗಲೇ ವಿದೇಶದ ಎನ್‌ಜಿಒಗಳೊಂದಿಗೆ ಪುತ್ತಿಗೆ ಶ್ರೀಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.


ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments