Select Your Language

Notifications

webdunia
webdunia
webdunia
webdunia

ಶಾಲಾ ವಾಹನಗಳ ಮೇಲೆ ಉಡುಪಿ ಪೋಲೀಸ್‌ ಕಣ್ಗಾವಲು.

ಶಾಲಾ ವಾಹನಗಳ ಮೇಲೆ ಉಡುಪಿ ಪೋಲೀಸ್‌ ಕಣ್ಗಾವಲು.
ಉಡುಪಿ , ಸೋಮವಾರ, 23 ಸೆಪ್ಟಂಬರ್ 2013 (15:08 IST)
PR
PR
ಇದೀಗ ಉಡುಪಿ ಜಿಲ್ಲಾ ಪೋಲೀಸರ ತಂಡ ಶಾಲಾ ವಾಹನಗಳ ಮೇಲೆ ಕಣ್ಣಿಟ್ಟಿದೆ. ಇತ್ತೀಚೆಗಷ್ಟೇ ಮೂರು ವರ್ಷದ ಶಾಲಾ ಬಾಲಕಿಯನ್ನು ಶಾಲಾ ವಾಹನದಲ್ಲಿಯೇ ಇಬ್ಬರು ಕಾಮುಕ ಕಂಡಕ್ಟರ್‌ಗಳು ಗಂಭೀರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಉಡುಪಿ ಜಿಲ್ಲಾ ಪೋಲೀಸರು ಇದೀಗ ಶಾಲಾ ವಾಹನಗಳ ಮೇಲೆ ಕಣ್ಣಿಟ್ಟಿದೆ.

ಶಾಲಾ ವಾಹನಗಳಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕುರಿತು ಎಲ್ಲಾ ಶಾಲೆಗಳಿಗೆ ಸಲಹೆಗಳನ್ನು ನೀಡಲು ಪೋಲೀಸ್‌ ಅಧಿಕಾರಿಗಳು ಮುಂದಾಗಿದ್ದಾರೆ. ಆದಷ್ಟು ಬೇಗ ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆ ಕರೆದು, ಅವರೊಂದಿಗೆ ಈ ವಿಷಯವನ್ನು ಚರ್ಚಿಸಿ, ಎಲ್ಲಾ ಶಾಲೆಗಳೂ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಂತೆ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದು ಉನ್ನತ ಪೋಲೀಸ್‌ ಮೂಲಗಳು ತಿಳಿಸಿವೆ.

"ಎಷ್ಟು ವಿದ್ಯಾರ್ಥಿಗಳು ಶಾಲಾ ವಾಹನದಲ್ಲಿ ಸಂಚರಿಸಬೇಕು, ಮಕ್ಕಳನ್ನು ಎಲ್ಲಿಂದ ಪಿಕಪ್‌ ಮಾಡಲಾಗುತ್ತದೆ ಮತ್ತು ಎಲ್ಲಿಯವರೆಗೆ ಡ್ರಾಪ್ ಮಾಡಲಾಗುತ್ತದೆ ಎಂಬುದನ್ನು ಆಧರಿಸಿ ಯಾವ ವಾಹನವನ್ನು ಮಕ್ಕಳ ಶಾಲಾ ವಾಹನವಾಗಿ ಬಳಸಬೇಕು ಎಂಬ ಇತ್ಯಾದಿ ವಿಷಯಗಳ ಬಗ್ಗೆ ಎಲ್ಲಾ ಶಾಲೆಗಳಿಗೆ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಸಲಹೆಗಳನ್ನು ನೀಡಲು ಪೋಲೀಸ್‌ ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನು ಎರಡು ಅಥವ ಮೂರು ದಿನಗಳ ಒಳಗಾಗಿ ಈ ಸಂಬಂಧ ಸೂಕ್ತ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಪೋಲೀಸ್‌ ಮೂಲಗಳು ಹೇಳಿವೆ.

Share this Story:

Follow Webdunia kannada