Webdunia - Bharat's app for daily news and videos

Install App

ಶಂಕರ್ ಬಿದರಿ ಒಬ್ಬ ದೊಡ್ಡ ರೇಪಿಸ್ಟ್: ಮುತ್ತುಲಕ್ಷ್ಮಿ ಆಕ್ರೋಶ

Webdunia
ಶುಕ್ರವಾರ, 6 ಏಪ್ರಿಲ್ 2012 (14:48 IST)
PR
' ಪೊಲೀಸ್ ಅಧಿಕಾರಿ ಶಂಕರ ಬಿದರಿ ಒಬ್ಬ ದೊಡ್ಡ ರೇಪಿಸ್ಟ್. ಆ ಮನುಷ್ಯನಿಗೆ ಮನುಷ್ಯತ್ವವೇ ಇಲ್ಲ. ಕಾಡುಗಳ್ಳ ವೀರಪ್ಪ ವಿರುದ್ಧ ಕಾರ್ಯಾಚರಣೆ ಮಾಡುವ ಸಂದರ್ಭದಲ್ಲಿ ನನ್ನನ್ನು ಸೇರಿದಂತೆ ಸುಮಾರು 15 ಮಂದಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಕರೆಂಟ್ ಶಾಕ್ ಕೊಟ್ಟಿದ್ದರು' ...ಇದು ನರಹಂತಕ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಸಿಡಿಸಿದ ಬಾಂಬ್!

ಸಂದರ್ಭ: ನಿರ್ದೇಶಕ ಎಎಂಆರ್ ರಮೇಶ್ ನೈಜ ಘಟನೆಯನ್ನು ಆಧರಿಸಿ ನಿರ್ಮಿಸುತ್ತಿರುವ ವೀರಪ್ಪನ್ ಅಟ್ಟಹಾಸ ಎಂಬ ಸಿನಿಮಾ ನಿರ್ಮಿಸುತ್ತಿದ್ದು, ರಮೇಶ್ ತನ್ನ ಪೂರ್ವಾನುಮತಿ ಪಡೆಯದೆ ಸಿನಿಮಾ ತೆಗೆಯುತ್ತಿರುವ ಬಗ್ಗೆ ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿ ಬಿದರಿ ಕುರಿತು ಕೇಳಿದ ಪ್ರಶ್ನೆಗೆ ಹಲವು ಮಾಹಿತಿ ಬಯಲುಗೊಳಿಸಿದ್ದರು.

ವೀರಪ್ಪನ್ ಬಗ್ಗೆ ಸಿನಿಮಾ ತೆಗೆಯುವ ಬಗ್ಗೆ ನಿರ್ದೇಶಕ ರಮೇಶ್ ನನ್ನ ಅನುಮತಿ ಪಡೆದಿಲ್ಲ. ಅಲ್ಲದೇ ಅವರು ನೈಜ ಘಟನೆ ಅಂತ ಹೇಳಿ ವೀರಪ್ಪನ್ ಠಿಕಾಣಿ ಹೂಡಿದ್ದ ಕಾಡಿನಲ್ಲಾಗಲಿ, ಸ್ಥಳದಲ್ಲಿ ಚಿತ್ರೀಕರಣ ನಡೆಸಿಲ್ಲ. ಮಲೆಮಹದೇಶ್ವರ ಬೆಟ್ಟ, ಗೋಪಿನಾಥಪುರಂ ಸುತ್ತವೇ ಸಿನಿಮಾ ಚಿತ್ರೀಕರಣ ಮಾಡಿದ್ದಾರೆ. ಈ ಬಗ್ಗೆ ನಾನು ಕೋರ್ಟ್ ಮೆಟ್ಟಿಲೇರಿರುವುದಾಗಿ ಮುತ್ತುಲಕ್ಷ್ಮಿ ಈ ಸಂದರ್ಭದಲ್ಲಿ ವಿವರಿಸಿದ್ದಳು.

ಆಗ ಶಂಕರ್ ಬಿದರಿ ಕುರಿತು ಕೇಳಿದ ಪ್ರಶ್ನೆಗೆ, ನಿಮಗೆಲ್ಲ ಈಗ ಗೊತ್ತಾಗುತ್ತಿದೆ. ಆದರೆ ಬಿದರಿ ಯಾವ ರೀತಿ ಮನುಷ್ಯ ಎಂಬುದು ಅವರು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲೇ ತಿಳಿದು ಹೋಗಿತ್ತು. ವೀರಪ್ಪನ್‌ಗೆ ನೀವು ಊಟ ಕೊಡುತ್ತೀರಿ, ಸಹಾಯ ಮಾಡುತ್ತೀರಿ ಅಂತ ಆರೋಪಿಸಿ ಮುಗ್ದ ಜನರನ್ನು ಎನ್‌ಕೌಂಟರ್ ಮಾಡಿ ಸಾಯಿಸಿದ್ದರು.

ಅನಾವಶ್ಯಕವಾಗಿ ಸ್ಥಳೀಯರನ್ನು ಕರೆದುಕೊಂಡು ಬಂದು ಕರೆಂಟ್ ಶಾಕ್ ನೀಡಿ ಚಿತ್ರಹಿಂಸೆ ನೀಡಿದ್ದರು. ಹಲವರ ಮೇಲೆ ಅತ್ಯಾಚಾರ ನಡೆಸಿ ಬಿದರಿ ಕೊಂದು ಹಾಕಿರುವುದಾಗಿ ಮುತ್ತುಲಕ್ಷ್ಮಿ ಗಂಭೀರವಾಗಿ ಆರೋಪಿಸಿದ್ದು, ಈ ಬಗ್ಗೆ ಹೆಚ್ಚಿನ ಸತ್ಯ ಹೊರಬೀಳಬಹುದು ಎಂದರು.

ವೀರಪ್ಪನ್ ಹತ್ಯೆಯಾಗುವ ಮೂರು ತಿಂಗಳು ಮೊದಲು ಪೊಲೀಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ ಕೂಡ ನನ್ನ ಬಳಿ ಮಾತನಾಡಿದ್ದರು. ನಿಮ್ಮ ಗಂಡನಿಗೆ ಶರಣಾಗಲು ಹೇಳಿ, ನೀವು ಹೇಳಿದ್ರೆ ವೀರಪ್ಪನ್ ನಿಮ್ಮ ಮಾತನ್ನು ಕೇಳುತ್ತಾರೆ ಅಂತ ವಿನಂತಿ ಮಾಡಿಕೊಂಡಿದ್ದರು. ಆದ್ರೆ ವೀರಪ್ಪನ್ ನನ್ನ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ ಎಂದಿದ್ದೆ. ಹಾಗಂತ ಮಿರ್ಜಿಯವರು ನನಗೆ ಯಾವುದೇ ತೊಂದರೆ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.

ಕರ್ನಾಟಕ-ತಮಿಳುನಾಡು ಸರ್ಕಾರಕ್ಕೆ ಕಂಟಕವಾಗಿದ್ದ ಕಾಡುಗಳ್ಳ, ನರಹಂತಕ ವೀರಪ್ಪನ್ ಸಿನಿಮಾವನ್ನು ರಮೇಶ್ ಅವರು ವೀರಪ್ಪನ್ ಅಟ್ಟಹಾಸ ಎಂಬ ಹೆಸರಿನಲ್ಲಿ ತೆರೆ ಮೇಲೆ ತರಲು ಮುಂದಾಗಿದ್ದಾರೆ. ಚಿತ್ರದಲ್ಲಿ ನಟ ಕಿಶೋರ್ ಅವರು ವೀರಪ್ಪನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಸ್‌ಟಿಎಫ್ ಅಧಿಕಾರಿ ಪಾತ್ರವನ್ನು ಅರ್ಜುನ್ ಸರ್ಜಾ ಸೇರಿದಂತೆ ಹೀಗೆ ಭರ್ಜರಿ ತಾರಾಗಣದಲ್ಲಿ ಸಿದ್ದವಾಗುತ್ತಿರುವ ಸಿನಿಮಾಕ್ಕೆ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಇದೀಗ ಕ್ಯಾತೆ ತೆಗೆದಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments