Select Your Language

Notifications

webdunia
webdunia
webdunia
webdunia

ವಿವಿಧ ಮುಖಂಡರ ಖಂಡನೆ ಬಳಿಕ ಸಿಎಂ ಉಲ್ಟಾ ಹೊಡೆದರು

ವಿವಿಧ ಮುಖಂಡರ ಖಂಡನೆ ಬಳಿಕ ಸಿಎಂ ಉಲ್ಟಾ ಹೊಡೆದರು
, ಗುರುವಾರ, 3 ಏಪ್ರಿಲ್ 2014 (11:09 IST)
ಬೆಂಗಳೂರು: ಸಿಎಂರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು. ಜತೆಗೆ ಪರಮೇಶ್ವರ್ ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಲಿ. ಇವರಿಬ್ಬರ ಹೇಳಿಕೆಗಳನ್ನು ಗಮನಿಸಿದರೆ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕೆನ್ನಿಸುತ್ತದೆ. ಒಬ್ಬರು ಮಾಜಿ ಪ್ರಧಾನಿಗಳ ಬಗ್ಗೆ ಇಬ್ಬರೂ ಮಾತನಾಡುತ್ತಾರೆ. ಇಬ್ಬರಿಗೂ ತಲೆ ಕೆಟ್ಟಿದೆ ಎಂದು ಮೈಸೂರಿನಲ್ಲಿ ಈಶ್ವರಪ್ಪ ವಾಗ್ದಾಳಿ ಮಾಡಿದ್ದಾರೆ. ಈ ನಡುವೆ ರೈತ ವಿಠ್ಠಲ್ ಆತ್ಮಹತ್ಯೆ ಬಗ್ಗೆ ಸಿಎಂ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ರೈತ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ ಖಂಡಿಸಿದ್ದಾರೆ. ಸಿಎಂ ಹತಾಶೆಯಿಂದ ಹೇಳಿಕೆ ನೀಡುತ್ತಿದ್ದಾರೆ.

PR
PR
ಇದು ರಾಜ್ಯದ ರೈತರಿಗೆ ಮಾಡಿದ ಅಪಮಾನ.ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಏ.10ರೊಳಗೆ ಸಿಎಂ ಸಿದ್ದರಾಮಯ್ಯ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಏಪ್ರಿಲ್ 10ರಂದು ರೈತರ ಸಭೆ ನಡೆಸುತ್ತೇವೆ ಎಂದು ಪುಟ್ಟಣ್ಣಯ್ಯ ಹೇಳಿದರು. ರೈತನ ಬಗ್ಗೆ ಕೀಳಾಗಿ ಭಾಷಣ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುರುಬ ಸಮಾಜದವರು. ತಮ್ಮ ಸಮಾಜದ ಬಗ್ಗೆ ಸಿಎಂ ಕೀಳಾಗಿ ಮಾತನಾಡಿದ್ದಾರೆ. ಈ ಹೇಳಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಎಲ್ಲೆ ಮೀರುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

webdunia
PR
PR
ರೈತ ವಿಠ್ಠಲ್ ಅರಭಾವಿ ಮದ್ಯ ಸೇವಿಸಿ ಸಾವನ್ನಪ್ಪಿಲ್ಲ. ರೈತ ವಿಠ್ಠಲ್ ಆತ್ಮಹತ್ಯೆಗೆ ಸಿಎಂ ನೇರ ಕಾರಣ. ಸಿಎಂ ಸಿದ್ದರಾಮಯ್ಯ ರೈತಹಂತಕ. ಕಬ್ಬು ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದು ಜಗದೀಶ್ ಶೆಟ್ಟರ್ ಟೀಕಿಸಿದರು. ಯಾದಗಿರಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡುತ್ತಾ ಜವಾಬ್ಬಾರಿಯುತ ಮುಖಂಡರಾಗಿ ಸಿಎಂ ಹಾಗೆ ಹೇಳಬಾರದಿತ್ತು.ಇದು ರೈತರಿಗೆ ಮಾಡಿದ ಅವಮಾನ ಎಂದು ವಾಗ್ದಾಳಿ ಮಾಡಿದರು.

ಕಳೆದ ನವೆಂಬರ್‌ನಲ್ಲಿ ನಡೆದ ಬೆಳಗಾವಿ ಅಧಿವೇಶನದ ವೇಳೆ ಆತ್ಮಹತ್ಯೆ ಮಾಡಿಕೊಂಡ ರೈತ ವಿಠಲ ಅರಭಾವಿ ಸಾವಿನ ನಿರ್ಧಾರಕ್ಕೆ ಮತ್ತು ಸರಕಾರಕ್ಕೆ ಸಂಬಂಧ ಇಲ್ಲ.ಅದಕ್ಕೆ ನಾವು ಕಾರಣರಲ್ಲ ಅವರು ಚೆನ್ನಾಗಿ ಕುಡಿದಿದ್ದರು. ಕುಡಿದ ಮತ್ತಿನಲ್ಲಿ ಈ ಕೃತ್ಯವೆಸಗಿದ್ದಾರೆ. ಅದಕ್ಕೆ ಸರಕಾರ ಹೊಣೆ ಅಲ್ಲ ಎಂದು ಕೊಡಗು- ಮೈಸೂರು ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ವಿಶ್ವನಾಥ್ ಪರವಾಗಿ ನಿನ್ನೆ ರಾತ್ರಿ ನಾಪೋಕ್ಲುವಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಮುಖ್ಯಮಂತ್ರಿ ಹೇಳಿಕೆ ನೀಡಿರುವುದು ವಿವಾದದ ಕಿಡಿ ಸ್ಫೋಟಿಸುವಂತೆ ಮಾಡಿದೆ.

ಈ ನಡುವೆ ರೈತ ಮದ್ಯ ಸೇವಿಸಿ ಸಾವನ್ನಪ್ಪಿದ್ದರು ಎಂದು ನಾನು ಎಂದೂ ಹೇಳಿಲ್ಲ. ಸರ್ಕಾರಕ್ಕೂ ಆತ್ಮಹತ್ಯೆಗೂ ಸಂಬಂಧವಿಲ್ಲ ಎಂದು ಮಾತ್ರ ಹೇಳಿದ್ದೆ. ನನ್ನ ಹೇಳಿಕೆಯನ್ನು ಮಾಧ್ಯಮದಲ್ಲಿ ತಿರುಚಲಾಗಿದೆ. ರೈತ ವಿಠ್ಠಲ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲು ಸಮಿತಿ ನಡೆಸಲಾಗಿದೆ. ವರದಿ ಬಂದ ಬಳಿಕ ಸತ್ಯಾಂಶ ಹೊರಬೀಳಲಿದೆ ಎಂದು ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada