Select Your Language

Notifications

webdunia
webdunia
webdunia
webdunia

ಲೋಕಸಭೆ ಚುನಾವಣೆಗೆ ಕ್ರಿಮಿನಲ್ ಹಿನ್ನೆಲೆಯ 55 ಅಭ್ಯರ್ಥಿಗಳು

ಲೋಕಸಭೆ ಚುನಾವಣೆಗೆ ಕ್ರಿಮಿನಲ್ ಹಿನ್ನೆಲೆಯ 55 ಅಭ್ಯರ್ಥಿಗಳು
, ಬುಧವಾರ, 9 ಏಪ್ರಿಲ್ 2014 (16:18 IST)
PR
PR
ನವದೆಹಲಿ: ಯುಐಡಿಎಐನ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ 7,710 ಕೋಟಿ ರೂ. ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ನಿಲೇಕಣಿ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ ಎಂದು ಡೆಮಾಕ್ರಟಿಕ್ ರಿಫಾರ್ಮ್ಸ್ ಅಸೋಸಿಯೇಷನ್(ಎಡಿಆರ್) ರಾಜ್ಯ ಸಮನ್ವಯಾಧಿಕಾರಿ ತ್ರಿಲೋಚನ್ ಶಾಸ್ತ್ರಿ ತಿಳಿಸಿದರು. ಎಡಿಆರ್ ಮಂಗಳವಾರ ಅಭ್ಯರ್ಥಿಗಳ ಕ್ರಿಮಿನಲ್, ಹಣಕಾಸು ಮತ್ತು ಇತರೆ ಹಿನ್ನೆಲೆ ವಿವರಗಳ ವಿಶ್ಲೇಷಣೆಯನ್ನು ಬಿಡುಗಡೆ ಮಾಡಿದೆ. ಬೆಂಗಳೂರು ಗ್ರಾಮಾಂತರ ಜೆಡಿಎಸ್ ಅಭ್ಯರ್ಥಿ ಆರ್. ಪ್ರಭಾಕರ ರೆಡ್ಡಿ ಅವರು ನಿಲೇಕಣಿ ನಂತರ ಅತೀ ಹೆಚ್ಚು ಆಸ್ತಿ ಹೊಂದಿರುವ ಕರ್ನಾಟಕದ ಅಭ್ಯರ್ಥಿಯಾಗಿದ್ದಾರೆ.

ಪ್ರಭಾಕರ್ ರೆಡ್ಡಿ ಒಟ್ಟು ಆಸ್ತಿ 224 ಕೋಟಿ ರೂ. ಎಂದು ಘೋಷಿಸಿದ್ದಾರೆ. ಇನ್ಫೋಸಿಸ್ ಮಾಜಿ ನಿರ್ದೇಶಕ ಮತ್ತು ಆಮ್ ಆದ್ಮಿ ಪಕ್ಷದ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ವಿ.ಬಾಲಕೃಷ್ಣನ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದು, 189 ಕೋಟಿ ಆಸ್ತಿ ಹೊಂದಿದ್ದಾರೆ.ಕಣದಲ್ಲಿರುವ 432 ಅಭ್ಯರ್ಥಿಗಳ ಪೈಕಿ ಶೇ. 27ರಷ್ಟು ಅಂದರೆ 118 ಅಭ್ಯರ್ಥಿಗಳು ಕೋಟ್ಯಧಿಪತಿಗಳು. ಅವರ ಪೈಕಿ ಕಾಂಗ್ರೆಸ್‌ನಲ್ಲಿ 27, ಬಿಜೆಪಿಯ 26 ಮತ್ತು ಜೆಡಿಎಸ್ 21 ಅಭ್ಯರ್ಥಿಯಿದ್ದು, ಎಎಪಿ 12 ಅಭ್ಯರ್ಥಿಗಳಿದ್ದಾರೆ.

webdunia
PR
PR
ಪ್ರಮುಖ ಪಕ್ಷಗಳಲ್ಲಿ 28 ಕಾಂಗ್ರೆಸ್ ಅಭ್ಯರ್ಥಿಗಳ ಸರಾಸರಿ ಆಸ್ತಿ 293.75 ಕೋಟಿಗಳಾಗಿದೆ. 25 ಜೆಡಿಎಸ್ ಅಭ್ಯರ್ಥಿಗಳ ಸರಾಸರಿ ಆಸ್ತಿ 30.40 ಕೋಟಿ, 28 ಬಿಜೆಪಿ ಅಭ್ಯರ್ಥಿಗಳ ಸರಾಸರಿ ಆಸ್ತಿ 14.65 ಕೋಟಿ ಮತ್ತು 28 ಎಎಪಿ ಅಭ್ಯರ್ಥಿಗಳ ಸರಾಸರಿ ಆಸ್ತಿ 8.49 ಕೋಟಿಗಳಾಗಿವೆ. 432 ಅಭ್ಯರ್ಥಿಗಳ ಪೈಕಿ 177 ಅಭ್ಯರ್ಥಿಗಳು ತಮ್ಮ ಆದಾಯ ತೆರಿಗೆ ವಿವರಗಳನ್ನು ಘೋಷಿಸಿದ್ದಾರೆ. ಇವರ ಪೈಕಿ 22 ಅಭ್ಯರ್ಥಿಗಳು 50ಲಕ್ಷಕ್ಕಿಂತ ಹೆಚ್ಚು ಒಟ್ಟು ಆದಾಯವನ್ನು ಘೋಷಿಸಿದ್ದಾರೆ. ನಿಲೇಕಣಿ ತಮ್ಮ ವಾರ್ಷಿಕ ಆದಾಯವನ್ನು 168.41 ಕೋಟಿ ಎಂದು ಘೋಷಿಸಿದ್ದು, ಹಾಸನ ಕ್ಷೇತ್ರದ ಮಂಜು ಎ 14.04 ಕೋಟಿ ಆದಾಯ ಘೋಷಿಸಿದ್ದಾರೆ.

ಜೆಡಿಎಸ್ ಪ್ರಭಾಕರ್ ರೆಡ್ಡಿ 3.91 ಕೋಟಿ ಒಟ್ಟು ಆದಾಯ ಘೋಷಿಸಿದ್ದಾರೆ.ತಮ್ಮ ಪ್ರಮಾಣಪತ್ರದಲ್ಲಿ ಝೀರೋ ಆಸ್ತಿಯನ್ನು ನಾಲ್ವರು ಅಭ್ಯರ್ಥಿಗಳು ಘೋಷಿಸಿದ್ದಾರೆ. ಬೀದರ್ ಪಕ್ಷೇತರ ಅಭ್ಯರ್ಥಿ ಮಿರ್ಜಾ ಶಫೀ ಬೇಗ್, ಬಳ್ಳಾರಿಯ ಬಹುಜನ ಸಮಾಜ ಪಕ್ಷದ ರಾಮುಡು, ಹಾವೇರಿಯ ಸರ್ವ ಜನತಾ ಪಕ್ಷದ ಬಸವಂತಪ್ಪ ಹೊನ್ನಪ್ಪ ಹುಳ್ಳಟ್ಟಿ, ಉಡುಪಿ-ಚಿಕ್ಕಮಗಳೂರಿನ ಪಕ್ಷೇತರ ಅಭ್ಯರ್ಥಿ ಮಂಜುನಾಥಾ ಜಿ ತಮಗೆ ಯಾವುದೇ ಆಸ್ತಿಯಿಲ್ಲವೆಂದು ಘೋಷಿಸಿದ್ದು ಸೊನ್ನೆ ಆಸ್ತಿ ಎಂದು ನಮೂದಿಸಿದ್ದಾರೆ.

webdunia
PR
PR
ಎಡಿಆರ್ ವಿಶ್ಲೇಷಣೆಯಲ್ಲಿ 55 ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ಬಹಿರಂಗಪಡಿಸಿದ್ದಾರೆ. ಸುಮಾರು 30 ಅಭ್ಯರ್ಥಿಗಳು ಕೊಲೆ ಯತ್ನ, ಮಹಿಳೆಯರ ವಿರುದ್ಧ ಕ್ರಿಮಿನಲ್ ಆರೋಪಗಳು ಮುಂತಾದ ಗಂಭೀರ ಆರೋಪಗಳನ್ನು ಎದುರಿಸಿದ್ದಾರೆ.ಕಾಂಗ್ರೆಸ್‌ನಲ್ಲಿ ಕ್ರಿಮಿನಲ್ ಆರೋಪ ಹೊಂದಿರುವ 6 ಅಭ್ಯರ್ಥಿಗಳಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಕ್ರಮವಾಗಿ 9 ಮತ್ತು ಎಂಟು ಇದ್ದಾರೆ. ಕ್ರಿಮಿನಲ್ ಕೇಸ್‌ಗಳಿರುವ ಪ್ರಮುಖ ಅಭ್ಯರ್ಥಿಗಳು ಯಡಿಯೂರಪ್ಪ, ಪ್ರಮೋದ್ ಮುತಾಲಿಕ್, ಬಾಳಾಸಾಹೇಬ್ ಪಾಟೀಲ್, ಬಳ್ಳಾರಿಯ ಶ್ರೀರಾಮುಲು, ಧರಂ ಸಿಂಗ್, ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಸೇರಿದ್ದಾರೆ.

Share this Story:

Follow Webdunia kannada