Select Your Language

Notifications

webdunia
webdunia
webdunia
webdunia

ಲೋಕಸಭಾ ಚುನಾವಣೆ ಕಣದಲ್ಲಿ 435 ಅಭ್ಯರ್ಥಿಗಳು

ಲೋಕಸಭಾ ಚುನಾವಣೆ ಕಣದಲ್ಲಿ 435 ಅಭ್ಯರ್ಥಿಗಳು
ಬೆಂಗಳೂರು , ಭಾನುವಾರ, 30 ಮಾರ್ಚ್ 2014 (11:08 IST)
PR
ಲೋಕಸಭಾ ಚುನಾವಣೆಗೆ ರಾಜ್ಯದ ಕಣ ಹದವಾಗಿದ್ದು, 435 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ದರಾಗಿದ್ದಾರೆ.

ನಾಮಪತ್ರ ವಾಪಾಸ್ ಪಡೆಯುವುದಕ್ಕೆ ಕೊನೆಯ ದಿನವಾದ ಶನಿವಾರ 109 ಮಂದಿ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ. ಒಟ್ಟು 544 ಅಭ್ಯರ್ಥಿಗಳು ಇದುವರೆಗೆ ನಾಮಪತ್ರ ಸಲ್ಲಿಸಿದ್ದರು. ಈಗ 435 ಮಂದಿ ಕಣದಲ್ಲಿದ್ದು ಇವರಲ್ಲಿ 23 ಮಂದಿ ಮಹಿಳೆಯರು, 412 ಮಂದಿ ಪುರುಷರು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ಕುಮಾರ್ ಝಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೆನರಾ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ನಾಯ್ಕ್, ಚಿತ್ರದುರ್ಗದ ಕೆಜೆಪಿ ಅಭ್ಯರ್ಥಿ ಪುರುಷೋತ್ತಮ ನಾಯಕ್, ತುಮಕೂರಿನ ಜೆಡಿಯು ಅಭ್ಯರ್ಥಿ ಇನ್ತಿಯಾಜ್ ಅಹ್ಮದ್ ನಾಮಪತ್ರ ವಾಪಾಸ್ಪಡೆದವರಲ್ಲಿ ಪ್ರಮುಖರು ಎಂದು ಹೇಳಿದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗುಲ್ಬರ್ಗದಲ್ಲಿ ಅತಿ ಕಡಿಮೆ (8) ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಳ್ಳಾರಿಯಲ್ಲಿ ನಾಮಪತ್ರ ಸಲ್ಲಿಸಿದ ಎಲ್ಲರೂ ಸ್ಪರ್ಧೆಯಲ್ಲಿದ್ದಾರೆ. ಉಳಿದಂತೆ ಬೀದರ್ 24, ಬೆಂಗಳೂರು ದಕ್ಷಿಣ 23, ಕೋಲಾರ್ 22, ಚಿಕ್ಕಬಳ್ಳಾಪುರ 19, ಬೆಂಗಳೂರು ಉತ್ತರ 14, ಬೆಂಗಳೂರು ಗ್ರಾಮಾಂತರ 15, ಚಾಮರಾಜನಗರ 14, ಮೈಸೂರು 15, ಮಂಡ್ಯ 16, ತುಮಕೂರು 16, ಚಿತ್ರದುರ್ಗ 14, ದಕ್ಷಿಣ ಕನ್ನಡ 14, ಹಾಸನ 14, ಉಡುಪಿ- ಚಿಕ್ಕಮಗಳೂರು 11, ಶಿವಮೊಗ್ಗ 13, ದಾವಣಗೆರೆ 13, ಕೆನರಾ 9, ಧಾರವಾಡ 17, ಹಾವೇರಿ 19, ಬಳ್ಳಾರಿ 12, ಕೊಪ್ಪಳ 16, ರಾಯಚೂರು 11, ಬಿಜಾಪುರ 14, ಬಾಗಲಕೋಟೆ 13, ಬೆಳಗಾವಿ 15, ಚಿಕ್ಕೋಡಿಯಲ್ಲಿ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

628 ಪ್ರಕರಣ: ರಾಜ್ಯದಲ್ಲಿ ಇದುವರೆಗೆ 628 ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಬೆಳಗಾವಿಯಲ್ಲಿ 124, ಮೈಸೂರಿನಲ್ಲಿ 119, ಚಿಕ್ಕಬಳ್ಳಾಪುರದಲ್ಲಿ 105, ಗುಲ್ಬರ್ಗ 52, ಬಾಗಲಕೋಟೆ 37, ಧಾರವಾಡ 29, ರಾಮನಗರದಲ್ಲಿ 52 ಇಂಥ ಪ್ರಕರಣಗಳು ದಾಖಲಾಗಿದೆ.

ವಶ: ಇದುವರೆಗೆ ರು. 2.85 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಶನಿವಾರ ಕೊಪ್ಪಳದಲ್ಲಿ ರು. 50 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಚಿಕ್ಕೋಡಿಯಲ್ಲಿ 1000 ಸೀರೆ ವಶಪಡಿಸಿಕೊಳ್ಳಲಾಗಿದೆ. ಒಟ್ಟು ರು. 1.40 ಕೋಟಿ ಮೊತ್ತದ 35175 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.

Share this Story:

Follow Webdunia kannada