Select Your Language

Notifications

webdunia
webdunia
webdunia
webdunia

ಲಾಟರಿ ನಿಷೇಧ: ಹೈಕೋರ್ಟ್ ಆದೇಶ

ಲಾಟರಿ ನಿಷೇಧ: ಹೈಕೋರ್ಟ್ ಆದೇಶ

ಇಳಯರಾಜ

ರಾಜ್ಯವನ್ನು ಲಾಟರಿ ಮುಕ್ತ ಪ್ರದೇಶವನ್ನಾಗಿ ಘೋಷಿಸಿದ ಸರಕಾರದ ನಿರ್ಧಾರವನ್ನು ಉಚ್ಛನ್ಯಾಯಾಲಯ ಇಂದು ಎತ್ತಿ ಹಿಡಿದಿದೆ.

ಇಂದು ನ್ಯಾ.ಮೂರ್ತಿ ಜಗನ್ನಾಥ್ ಅವರಿದ್ದ ನ್ಯಾಯಪೀಠ ಸರಕಾರದ ತೀರ್ಮಾನವನ್ನು ಸಮರ್ಥಿಸಿದೆ. ಲಾಟರಿ ನಿಷೇಧದ ಹಿನ್ನೆಲೆಯಲ್ಲಿದ್ದ ಅರ್ಜಿಗಳನ್ನು ಇಂದು ಮುಂಜಾನೆಯಿಂದಲೇ ವಿಚಾರಣೆ ನಡೆಸಿ ಹೈಕೋರ್ಟ್ ತೀರ್ಪು ನೀಡಿತು.

ಏ 1ರಿಂದ ರಾಜ್ಯವನ್ನು ಲಾಟರಿ ಮುಕ್ತ ವಲಯವನ್ನಾಗಿ ಪ್ರಕಟಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಅರುಣಾಚಲ ಪ್ರದೇಶ, ಸಿಕ್ಕಿಂ ರಾಜ್ಯ ಲಾಟರಿಗಳು ಇದಕ್ಕೆ ತಡೆಯಾಜ್ಞೆ ತಂದಿದ್ದವು.

ಸರ್ಕಾರದ ಏಕಾಏಕಿ ನಿರ್ಣಯದಿಂದ ಲಾಟರಿ ಮಾರಾಟವನ್ನೇ ನಂಬಿದ್ದ 1.5 ಲಕ್ಷ ಮಂದಿ ಬೀದಿಗೆ ಬಿದ್ದಿದ್ದಾರೆ. ಅವರನ್ನು ಅವಲಂಬಿಸಿರುವ 7 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಪರ್ಯಾಯ ಉದ್ಯೋಗಾವಕಾಶಗಳನ್ನೂ ಒದಗಿಸಿಲ್ಲ ಎಂದು ತಮ್ಮ ವಾದ ಮಂಡಿಸಿದ್ದವು.

ರಾಜ್ಯವನ್ನು ಲಾಟರಿ ಮುಕ್ತ ಪ್ರದೇಶವನ್ನಾಗಿ ಘೋಷಿಸಿದ ಸರ್ಕಾರದ ನಿರ್ಣಯವನ್ನು ಉಚ್ಛನ್ಯಾಯಾಲಯ ಇಂದು ಎತ್ತಿ ಹಿಡಿದಿರುವುದಕ್ಕೆ ಸಚಿವ ರಾಮಚಂದ್ರೇಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

ಯಾವುದೇ ಕಾರಣಕ್ಕೂ ಇದನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ನಮ್ಮ ಪ್ರತಿನಿಧಿಗೆ ತಿಳಿಸಿದರು. ಇದಕ್ಕಾಗಿ ತಾವು ಅಧಿಕಾರ ತ್ಯಾಗಕ್ಕೂ ಸಿದ್ಧ ಎಂದು ಸಚಿವ ರಾಮಚಂದ್ರೇಗೌಡ ಈ ಹಿಂದೆ ಹೇಳಿದ್ದರು.

ಇಂದು ಉಚ್ಛನ್ಯಾಯಾಲಯದ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಲಾಟರಿ ಮಾರಾಟಗಾರರು ಜಮಾಯಿಸಿದ್ದರು. ತಮ್ಮ ಪರವಾಗಿ ನ್ಯಾಯಾಲಯ ತೀರ್ಪು ನೀಡಬಹುದು ಎಂಬುದು ಅವರ ಆಶಾವಾದವಾಗಿತ್ತು. ಆದರೆ, ಒಟ್ಟಾರೆ ಲಾಟರಿ ಫಲಿತಾಂಶ ಮಾರಾಟಗಾರ ಪಾಲಿಗೆ ಅದೃಷ್ಟ ರಹಿತವಾಗಿತ್ತು.

Share this Story:

Follow Webdunia kannada