Webdunia - Bharat's app for daily news and videos

Install App

ರೇಣುಕಾಚಾರ್ಯ ಇನ್ನೂ ಕೆಟ್ಟ ಚಾಳಿ ಬಿಟ್ಟಿಲ್ಲ: ಈಶ್ವರಪ್ಪ ಗರಂ

Webdunia
ಶುಕ್ರವಾರ, 30 ಸೆಪ್ಟಂಬರ್ 2011 (15:16 IST)
' ಅಬಕಾರಿ ಸಚಿವ ರೇಣುಕಾಚಾರ್ಯ ಇನ್ನೂ ಕೆಟ್ಟ ಚಾಳಿ ಬಿಟ್ಟಿಲ್ಲ. ಯಾವ ರೀತಿ ಹೇಳ್ಬೇಕೋ ಆ ರೀತಿ ಇನ್ನೂ ಹೇಳಿಲ್ಲ. ಇದೀಗ ರೇಣುಕಾಚಾರ್ಯಗೆ ಅದೇ ಭಾಷೆಯಲ್ಲಿ ಬುದ್ಧಿ ಹೇಳುವೆ'...ಇದು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿ ಹೇಳಿಕೆ ನೀಡುತ್ತಿರುವ ವಿರುದ್ಧ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಗುಡುಗಿರುವ ಪರಿ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕೊಪ್ಪಳ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣನವರು ಗೆಲುವಿಗೆ ಸಾಮೂಹಿಕ ನಾಯಕತ್ವವೇ ಕಾರಣ ಎಂದು ಈಶ್ವರಪ್ಪ, ಗೃಹ ಸಚಿವ ಆರ್.ಅಶೋಕ್ ಅಭಿಪ್ರಾಯವ್ಯಕ್ತಪಡಿಸಿದ್ದರು.

ಆದರೆ ಅಬಕಾರಿ ಸಚಿವ ರೇಣುಕಾಚಾರ್ಯ ಮಾತ್ರ, ಇದು ಸಾಮೂಹಿಕ ನಾಯಕತ್ವಕ್ಕೆ ಸಿಕ್ಕ ಜಯವಲ್ಲ, ನೋಡ್ರಿ ಇದು ಯಡಿಯೂರಪ್ಪನವರ ನಾಯಕತ್ವಕ್ಕೆ ದೊರೆತ ಜಯ. ಯಡಿಯೂರಪ್ಪನವರ ಅಭಿವೃದ್ಧಿ ಕಾರ್ಯ ಗುರುತಿಸಿ ಕೊಪ್ಪಳ ಮತದಾರರು ಕರಡಿಯನ್ನು ಗೆಲ್ಲಿಸಿದ್ದಾರೆಂಬ ಹೇಳಿಕೆ ನೀಡಿರುವುದು ಈಶ್ವರಪ್ಪ ಆಕ್ರೋಶಕ್ಕೆ ಕಾರಣವಾಗಿದೆ.

ಈ ಮೊದಲು ಕೂಡ ಬಿಜೆಪಿಯಲ್ಲಿ ಭಿನ್ನಮತ ಕಾಣಿಸಿಕೊಂಡಾಗ, ಯಡಿಯೂರಪ್ಪ ಮುಖ್ಯಮಂತ್ರಿಗಾದಿಯಿಂದ ಕೆಳಗಿಳಿಯಬೇಕು ಎಂಬ ಸಂದರ್ಭದಲ್ಲೆಲ್ಲಾ ರೇಣುಕಾಚಾರ್ಯ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿ ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದರು.

ಇದೀಗ ರೇಣುಕಾಚಾರ್ಯ ತಮ್ಮ ವರಸೆಯನ್ನೇ ಮುಂದುವರಿಸಿರುವುದು ಬಿಜೆಪಿ ನಾಯಕರನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಹಾಗಾಗಿ ರೇಣುಕಾಚಾರ್ಯಗೆ ಬುದ್ಧ ಇಲ್ಲ ಎಂದಿರುವ ಅವರು, ಕರೆದು ಬುದ್ಧಿ ಹೇಳುವುದಾಗಿ ತಿಳಿಸಿದ್ದಾರೆ.

ನನ್ನ ಹೇಳಿಕೆಗೆ ಬದ್ಧ-ರೇಣುಕಾಚಾರ್ ಯ
ತನ್ನ ಹೇಳಿಕೆ ವಿರುದ್ಧ ಈಶ್ವರಪ್ಪನವರು ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ, ನಾನೇನು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿಲ್ಲ. ನನಗೆ ಸದಾನಂದ ಗೌಡರು, ಈಶ್ವರಪ್ಪ ಮೇಲೆ ಅಪಾರ ಗೌರವವಿದೆ. ಆದರೆ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಸಮಜಾಯಿಷಿ ನೀಡಿದರು.

ಯಡಿಯೂರಪ್ಪನವರ ವರ್ಚಸ್ಸಿಗೆ ಯಾವುದೇ ಧಕ್ಕೆಯಾಗಿಲ್ಲ ಎಂಬುದನ್ನ ಒಪ್ಪಿಕೊಳ್ಳಬೇಕು. ಅವರ ನಾಯಕತ್ವದಲ್ಲೇ ಕೊಪ್ಪಳ ಚುನಾವಣೆ ಗೆದ್ದಿರುವುದು. ಮುಂದಿನ ಚುನಾವಣೆ ಕೂಡ ಅವರ ನಾಯಕತ್ವದಲ್ಲೇ ನಡೆಯಬೇಕು ಎಂದು ಪುನರುಚ್ಚರಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments