Select Your Language

Notifications

webdunia
webdunia
webdunia
webdunia

ರಾಸಲೀಲೆ ಸಿಡಿ-ಸಿಬಿಐ ತನಿಖೆ ನಡೆಸ್ಲಿ: ನಿತ್ಯಾನಂದ ಘೋಷಣೆ

ರಾಸಲೀಲೆ ಸಿಡಿ-ಸಿಬಿಐ ತನಿಖೆ ನಡೆಸ್ಲಿ: ನಿತ್ಯಾನಂದ ಘೋಷಣೆ
ಬೆಂಗಳೂರು , ಬುಧವಾರ, 4 ಏಪ್ರಿಲ್ 2012 (17:06 IST)
PR
ರಾಸಲೀಲೆ ಖ್ಯಾತಿಯ ನಿತ್ಯಾನಂದ ಸ್ವಾಮಿ ಬುಧವಾರ ಮತ್ತೆ ಸುದ್ದಿಗೋಷ್ಠಿ ನಡೆಸುವ ಮೂಲಕ, ತನ್ನ ವಿರುದ್ಧದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಪುನರುಚ್ಚರಿಸಿದ್ದಲ್ಲದೇ, ವಿಶ್ವದ 100 ಪ್ರಭಾವಿಗಳ ಪಟ್ಟಿಯಲ್ಲಿ ನನ್ನ ಹೆಸರಿದೆ. ನನ್ನ ವ್ಯಕ್ತಿತ್ವಕ್ಕೆ ಮಸಿಬಳಿಯಲು ಹೂಡಿದ ಸಂಚು ಇದಾಗಿದೆ. ಹಾಗಾಗಿ ರಾಸಲೀಲೆ ವೀಡಿಯೋ ಸಾಚಾತನದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ!

ರಾಜ್ಯ ಸಿಐಡಿ ಪೊಲೀಸರು ಕೋರ್ಟ್‌ನಲ್ಲಿ ತಮ್ಮ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿರುವ ಹಿನ್ನೆಲೆಯಲ್ಲಿ ನಿತ್ಯಾನಂದ ಸ್ವಾಮಿ ಇಂದು ಬಿಡದಿ ಸಮೀಪದ ಧ್ಯಾನಪೀಠ ಆಶ್ರಮದಲ್ಲಿ ಸುದ್ದಿಗೋಷ್ಠಿ ನಡೆಸಿ, ನನ್ನ ವಿರುದ್ಧದ ಆರೋಪದ ಬಗ್ಗೆ ಈ ಕ್ಷಣವೇ ನಿರಪರಾಧಿ ಎಂದು ಸಾಬೀತುಪಡಿಸಲು ಸಿದ್ಧ ಎಂದರು.

ಅಷ್ಟೇ ಅಲ್ಲ ಪ್ರಕರಣ ಬೆಳಕಿಗೆ ಬಂದಾಗ ನಾನು ಪಲಾಯನ ಮಾಡಿರಲಿಲ್ಲ. ನನ್ನ ಜೀವಕ್ಕೆ ಬೆದರಿಕೆ ಇತ್ತು. ಹಾಗಾಗಿ ನಾನು ಆಶ್ರಮದಲ್ಲೇ ಇದ್ದೆ. ನನ್ನ ತೇಜೋವಧೆ ಮಾಡಲಿಕ್ಕಾಗಿಯೇ ವ್ಯವಸ್ಥಿತವಾಗಿ ಈ ಸಂಚು ರೂಪಿಸಲಾಗಿತ್ತು. ಅಲ್ಲದೇ ನನ್ನ ವಿರುದ್ಧ ಆರೋಪ ಮಾಡಿದವರೆಲ್ಲ ಕ್ರಿಮಿನಲ್ಸ್‌ಗಳು. ಆರೋಪ ಮಾಡಿದ್ದ ಲೆನಿನ್ ಕೂಡ ಈಗ ಜೈಲಿನಲ್ಲಿದ್ದಾನೆ. ನಾನು ನಿರಪರಾಧಿ ಎಂದು ಸಾಬೀತುಪಡಿಸಲು ನನ್ನಲ್ಲಿ ಹಲವು ಸಾಕ್ಷ್ಯಗಳಿವೆ ಎಂದು ತಿಳಿಸಿದರು.

ನನ್ನ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ. ನಟಿ ರಂಜಿತಾ ಕೂಡ ನನ್ನ ವಿರುದ್ಧ ಯಾವುದೇ ಆರೋಪ ಮಾಡಿಲ್ಲವಾಗಿತ್ತು. ಅನಾವಶ್ಯಕವಾಗಿ ನನ್ನ ಅವಹೇಳನ ಮಾಡಲಾಯಿತು. ಸುಮಾರು ಎರಡು ವರ್ಷಗಳ ಕಾಲ ಇದನ್ನೆಲ್ಲಾ ಸಹಿಸಿಕೊಂಡಿದ್ದೇನೆ. ಆ ನಿಟ್ಟಿನಲ್ಲಿ ನನ್ನ ರಕ್ಷಿಸಿಕೊಳ್ಳಲು ನಾನು ಕೋರ್ಟ್ ಮೊರೆ ಹೋಗುವುದಾಗಿ ನಿತ್ಯಾನಂದ ಹೇಳಿದರು.

Share this Story:

Follow Webdunia kannada