Select Your Language

Notifications

webdunia
webdunia
webdunia
webdunia

ರಾಜ್ಯ ಬಜೆಟ್ ಬಗ್ಗೆ ವಿವಿಧ ಮುಖಂಡರ ಪ್ರತಿಕ್ರಿಯೆ ಹೇಗಿದೆ, ಓದಿನೋಡಿ

ರಾಜ್ಯ ಬಜೆಟ್ ಬಗ್ಗೆ ವಿವಿಧ ಮುಖಂಡರ ಪ್ರತಿಕ್ರಿಯೆ ಹೇಗಿದೆ, ಓದಿನೋಡಿ
, ಶುಕ್ರವಾರ, 14 ಫೆಬ್ರವರಿ 2014 (16:30 IST)
PR
PR
ಚುನಾವಣೆ ಪೂರ್ವದಲ್ಲೇ ರಾಜ್ಯಸರ್ಕಾರದ ಬಜೆಟ್ ಸಿಎಂ ಮಂಡಿಸಿರುವುದು ರಾಜ್ಯದ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿ ಕಂಡುಬಂದಿಲ್ಲ ಎಂದು ಜೆಡಿಎಸ್ ಮುಖಂಡ ಕುಮಾರಸ್ವಾಮಿ ಹೇಳಿದ್ದಾರೆ. ಸಿಎಂ ಸಾಧನೆ ಏನೆಂದರೆ 9ನೇ ಬಾರಿಗೆ ಬಜೆಟ್ ಮಂಡಿಸಿರುವುದು ಮಾತ್ರ. ಈ ಬಜೆಟ್‌ ಬಹುಶಃ ಅವರು ಸಿದ್ದಮಾಡಿರತಕ್ಕಂತ ಬಜೆಟ್ ಅಲ್ಲ. ರಾಜ್ಯದ ಅಭಿವೃದ್ಧಿಯ ಮುನ್ನೋಟ ಅವರಲ್ಲಿ ಇಲ್ಲ ಎನ್ನುವುದನ್ನು ಬಜೆಟ್ ತೋರಿಸಿದೆ. ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡುವ ಯಾವುದೇ ಯೋಜನೆ ಕಂಡುಬಂದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

webdunia
PR
PR
ಯಡಿಯೂರಪ್ಪ ಹೇಳಿದ್ದೇನು?
ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ ಬಜೆಟ್ ಮಂಡನೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎನ್ನುವುದನ್ನು ತೋರಿಸಿದೆ. ತೆರಿಗೆ ಸೋರಿಕೆ ತಡೆಯುವುದಕ್ಕೆ ಯಾವುದೇ ರೀತಿಯ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಬರಪೀಡಿತ ರೈತರ ಸಂಕಷ್ಟ ಪರಿಹಾರಕ್ಕೆ ಸಂಪೂರ್ಣ ವಿಫಲವಾಗಿದೆ. ಶಾದಿ ಭಾಗ್ಯ ಯೋಜನೆಯ ಪ್ರಸ್ತಾಪವೇ ಇಲ್ಲ. ಒಟ್ಟಿನಲ್ಲಿ ಕಳೆದ ಬಾರಿ ಆಯವ್ಯಯ ಪ್ರಾಮಾಣಿಕ ಅನುಷ್ಠಾನವಾಗಿಲ್ಲ ಎಂದು ಯಡಿಯೂರಪ್ಪ ಹೇಳಿದರು.

webdunia
PR
PR
ಜಗದೀಶ್ ಶೆಟ್ಟರ್ ಪ್ರತಿಕ್ರಿಯೆಯೇನು?
ಈ ರಾಜ್ಯದ ಜನತೆಗೆ ನಿರಾಶಾದಾಯಕ ಬಜೆಟ್ ಎಂದು ಜಗದೀಶ್ ಶೆಟ್ಟರ್ ಹೇಳಿದರು. ಇಡೀ ರಾಜ್ಯದ ಸರ್ವಾಂಗೀಣ ಪ್ರಗತಿಯ ಬಜೆಟ್ ಮಂಡನೆ ಮಾಡಿಲ್ಲ. ಮೂಲಭೂತ ಸೌಲಭ್ಯ ಅಭಿವೃದ್ಧಿ, ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿರಾಶಾದಾಯಕ ಬಜೆಟ್. ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕಿತ್ತು ಎಂದು ಶೆಟ್ಟರ್ ಹೇಳಿದರು.

Share this Story:

Follow Webdunia kannada