Select Your Language

Notifications

webdunia
webdunia
webdunia
webdunia

ಮೈಸೂರು ದಸರಾ ಮಹೋತ್ಸವಕ್ಕೆ ಪೇಜಾವರ ಶ್ರೀ ಚಾಲನೆ

ಮೈಸೂರು ದಸರಾ ಮಹೋತ್ಸವಕ್ಕೆ ಪೇಜಾವರ ಶ್ರೀ ಚಾಲನೆ
ಮೈಸೂರು , ಬುಧವಾರ, 28 ಸೆಪ್ಟಂಬರ್ 2011 (12:26 IST)
WD
ದುಷ್ಟ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ಜಯದ ಸಂಕೇತವೇ ದಸರಾ ಎಂದು ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹೇಳಿದರು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬುಧವಾರ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ನಂತರ ಆಶೀರ್ವಚನ ನೀಡಿದ ಪೇಜಾವರ ಸ್ವಾಮೀಜಿ, ಲಕ್ಷ್ಮಿ ಜ್ಞಾನ ಮತ್ತು ಸಂಪತ್ತಿನ ಸಂಕೇತವಾದರೆ ದುರ್ಗಾ ದೇವಿ ದುಷ್ಟ ಶಕ್ತಿಗಳ ಸಂರಕ್ಷಣೆಯ ಸಂಕೇತ. ನಾಡಿನ ಸಂರಕ್ಷಣೆಗಾಗಿ ದಸರಾ ಮಹೋತ್ಸವದಲ್ಲಿ ದುರ್ಗಾ ಪೂಜೆ ಮಾಡಲಾಗುತ್ತದೆ ಎಂದು ಸ್ವಾಮೀಜಿ ತಿಳಿಸಿದರು.

ದಸರಾ ಬರೀ ಮೈಸೂರಿನ ಅಥವಾ ರಾಜ್ಯದ ಹಬ್ಬವಲ್ಲ, ಇದೂ ಇಡೀ ದೇಶದ ಹಬ್ಬ ಎಂದು ಹೇಳಿದ ಶ್ರೀಗಳು, ವಿಶಿಷ್ಟ ದಸರಾ ಆಚರಣೆಗಳಿಂದಾಗಿಯೇ ಮೈಸೂರು ದಸರಾ ವಿಶ್ವ ವಿಖ್ಯಾತಿ ಪಡೆದಿದೆ ಎಂದು ತಿಳಿಸಿದರು.

ಕರ್ನಾಟಕ ಸಾಮರಸ್ಯತೆಯ ಪ್ರತೀಕ
ಕರ್ನಾಟಕದಲ್ಲಿ ಎಲ್ಲ ಸಮುದಾಯದವರೂ ಶಾಂತಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ದಾಸರು, ಶರಣರು ತಮ್ಮ ಸಾಹಿತ್ಯದ ಮೂಲಕ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಶ್ರೀಗಳು ಹೇಳಿದರು.

ಶ್ರೀ ಬಸವೇಶ್ವರರು ಸರ್ವ ಸಮುದಾಯದ ಸಮನ್ವಯತೆ ಸಾರಿದರು. ಶ್ರೀ ಮಧ್ವಾಚಾರ್ಯರೂ ಸಹಾ ಜನಸೇವೆಯೇ ಜನಾರ್ದನ ಸೇವೆ ಎಂದು ಪ್ರತಿಪಾದಿಸಿದರು ಎಂದು ಅವರು ತಿಳಿಸಿದರು.

ನಾಡು, ನುಡಿಯ ಬಗ್ಗೆ ಅಭಿಮಾನವಿರಲಿ
ಪ್ರತಿಯೊಬ್ಬರಿಗೂ ತಾವಿರುವ ನಾಡು, ನುಡಿಯ ಬಗ್ಗೆ ಅಭಿಮಾನವಿರಬೇಕು. ಜ್ಞಾನಕ್ಕಾಗಿ ಎಲ್ಲ ಭಾಷೆಯನ್ನೂ ಕಲಿಯುವುದು ಅಗತ್ಯ ಆದರೆ ಮಾತೃ ಭಾಷೆಯನ್ನು ಎಂದಿಗೂ ಮೆರೆಯಬಾರದು ಎಂದು ಹೇಳಿದರು.

ಎಲ್ಲ ಜಿಲ್ಲೆಗಳಲ್ಲೂ ದಸರಾ ಆಚರಣ
ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ದಸರಾ ಹಬ್ಬವನ್ನು ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ .ಸದಾನಂದ ಗೌಡ ಹೇಳಿದರು. ದಸರಾ ಮಹೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ದಸರಾ ಮಹೋತ್ಸವ ಯಶಸ್ವಿಯಾಗಿ ನಡೆಯಲು ಸರಕಾರ ಅಗತ್ಯ ಕ್ರಮ ಕೈಗೊಂಡಿದ್ದು, ಅಗತ್ಯವಾಗಿರುವ ಹಣ ಕಾಸಿನ ನೆರವನ್ನೂ ನೀಡಲಾಗಿದೆ ಎಂದು ತಿಳಿಸಿದರು.

ರಾಜ ಮನೆತನದ ಆಡಳಿತ ಕೊನೆಗೊಂಡ ನಂತರ ನಾಡ ಹಬ್ಬ ದಸರಾ ಆಚರಣೆಯ ವೈಭವಕ್ಕೆ ಕುಂದು ಉಂಟಾಗುತ್ತದೆ ಎಂಬ ಆತಂಕ ಜನರಲ್ಲಿತ್ತು. ಆದರೆ ರಾಜ್ಯಸರಕಾರವು ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಹೇಳಿದರು.

ನಾಡ ಹಬ್ಬ ದಸರಾ ಮೂಲಕ ವಿಶ್ವ ವಿಖ್ಯಾತಿ ಗಳಿಸಿದ ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಮೈಸೂರು ವಿಜೃಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸದಾನಂದ ಗೌಡ ಹೇಳಿದರು.

Share this Story:

Follow Webdunia kannada