Webdunia - Bharat's app for daily news and videos

Install App

ಮೃತ ರೈತನಿಗೆ ಯಡ್ಯೂರಪ್ಪನಿಂದ 5 ಲಕ್ಷ ಪರಿಹಾರ.

Webdunia
ಬುಧವಾರ, 27 ನವೆಂಬರ್ 2013 (18:04 IST)
PR
PR
ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಸುವರ್ಣಸೌಧದ ಎದುರು ಹತ್ತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ 50 ವರ್ಷದ ರೈತ ವಿಠಲ್ ಅರಭಾವಿಯವರ ಕುಟುಂಬಕ್ಕೆ ಯಡ್ಯೂರಪ್ಪ 5 ಲಕ್ಷ ರೂಪಾಯಿಗಳನ್ನು ಘೋಷಿಸಿದ್ದಾರೆ.

ಯಡ್ಯೂರಪ್ಪ ತಮ್ಮ ಸ್ವಂತ ಆದಾಯದಲ್ಲಿನ 5 ಲಕ್ಷ ರೂಪಾಯಿಗಳನ್ನು ಮೃತ ರೈತನ ಕುಟುಂಬಕ್ಕೆ ನೀಡಿದ್ದಾರೆ. ಈ ಮೂಲಕ ಮೃ ತರ ಕುಟುಂಬಕ್ಕೆ ಆಸರೆಯಾಗಿದ್ದಾರೆ. "ರೈತರ ಬಗ್ಗೆ ಸಿದ್ರಾಮಯ್ಯನವರ ಸರ್ಕಾರ ನಿರ್ಲಕ್ಷ ತೋರುತ್ತಿದೆ. ಅವರ ಮೊಂಡುತನಕ್ಕೆ ಇಂದು ವಿಠಲ್‌ ಅರಭಾವಿಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರನ್ನು ಸಾವಿನ ಕೂಪಕ್ಕೆ ನೂಕುತ್ತಿದೆ ಈ ಸರ್ಕಾರ ಎಂದು ಕೆಂಡ ಕಾರಿದ್ರು.

ಕಬ್ಬಿಗೆ ಬೆಂಬಲ ಬೆಲೆ ಘೋಷಿಸದ ಕಾರಣ ಮನನೊಂದ ರೈತ ವಿಠಲ್ ಅರಭಾವಿಯವರು ಸುವರ್ಣ ಸೌಧದ ಎದುರಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣವೇ ಅವರನ್ನು ಹತ್ತಿರದ ಕೆಎಲ್‌ಇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ವಿಠಲ್ ಅರಭಾವಿಯವರು ನಿಧನರಾಗಿದ್ದಾರೆ. ವಿಠಲ್ ಅರಭಾವಿ ನಿಧನಕ್ಕೆ ರೈತ ಮುಖಂಡರು ಸರ್ಕಾರದ ವಿರುದ್ದ ತೀವ್ರ ಆಕ್ರೋಶಗೊಂಡಿದ್ದು, ಸರ್ಕಾರದ ಅಸಡ್ಡೆಗೆ ರೈತ ಬಲಿಯಾಗಿದ್ದಾನೆಂದು ಹೇಳಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments