Select Your Language

Notifications

webdunia
webdunia
webdunia
webdunia

ಮೃತ ರೈತನಿಗೆ ಯಡ್ಯೂರಪ್ಪನಿಂದ 5 ಲಕ್ಷ ಪರಿಹಾರ.

ಮೃತ ರೈತನಿಗೆ ಯಡ್ಯೂರಪ್ಪನಿಂದ 5 ಲಕ್ಷ ಪರಿಹಾರ.
ಬೆಳಗಾವಿ , ಬುಧವಾರ, 27 ನವೆಂಬರ್ 2013 (18:04 IST)
PR
PR
ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಸುವರ್ಣಸೌಧದ ಎದುರು ಹತ್ತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ 50 ವರ್ಷದ ರೈತ ವಿಠಲ್ ಅರಭಾವಿಯವರ ಕುಟುಂಬಕ್ಕೆ ಯಡ್ಯೂರಪ್ಪ 5 ಲಕ್ಷ ರೂಪಾಯಿಗಳನ್ನು ಘೋಷಿಸಿದ್ದಾರೆ.

ಯಡ್ಯೂರಪ್ಪ ತಮ್ಮ ಸ್ವಂತ ಆದಾಯದಲ್ಲಿನ 5 ಲಕ್ಷ ರೂಪಾಯಿಗಳನ್ನು ಮೃತ ರೈತನ ಕುಟುಂಬಕ್ಕೆ ನೀಡಿದ್ದಾರೆ. ಈ ಮೂಲಕ ಮೃತರ ಕುಟುಂಬಕ್ಕೆ ಆಸರೆಯಾಗಿದ್ದಾರೆ. "ರೈತರ ಬಗ್ಗೆ ಸಿದ್ರಾಮಯ್ಯನವರ ಸರ್ಕಾರ ನಿರ್ಲಕ್ಷ ತೋರುತ್ತಿದೆ. ಅವರ ಮೊಂಡುತನಕ್ಕೆ ಇಂದು ವಿಠಲ್‌ ಅರಭಾವಿಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರನ್ನು ಸಾವಿನ ಕೂಪಕ್ಕೆ ನೂಕುತ್ತಿದೆ ಈ ಸರ್ಕಾರ ಎಂದು ಕೆಂಡ ಕಾರಿದ್ರು.

ಕಬ್ಬಿಗೆ ಬೆಂಬಲ ಬೆಲೆ ಘೋಷಿಸದ ಕಾರಣ ಮನನೊಂದ ರೈತ ವಿಠಲ್ ಅರಭಾವಿಯವರು ಸುವರ್ಣ ಸೌಧದ ಎದುರಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣವೇ ಅವರನ್ನು ಹತ್ತಿರದ ಕೆಎಲ್‌ಇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ವಿಠಲ್ ಅರಭಾವಿಯವರು ನಿಧನರಾಗಿದ್ದಾರೆ. ವಿಠಲ್ ಅರಭಾವಿ ನಿಧನಕ್ಕೆ ರೈತ ಮುಖಂಡರು ಸರ್ಕಾರದ ವಿರುದ್ದ ತೀವ್ರ ಆಕ್ರೋಶಗೊಂಡಿದ್ದು, ಸರ್ಕಾರದ ಅಸಡ್ಡೆಗೆ ರೈತ ಬಲಿಯಾಗಿದ್ದಾನೆಂದು ಹೇಳಿದ್ದಾರೆ.

Share this Story:

Follow Webdunia kannada