Select Your Language

Notifications

webdunia
webdunia
webdunia
webdunia

ಮಾನಸಿಕ ಅಸ್ವಸ್ಥರಿಗಾಗಿ ಕಾನೂನು ಸೇವಾ ಘಟಕ

ಮಾನಸಿಕ ಅಸ್ವಸ್ಥರಿಗಾಗಿ ಕಾನೂನು ಸೇವಾ ಘಟಕ
ಬೆಂಗಳೂರು , ಶನಿವಾರ, 10 ನವೆಂಬರ್ 2007 (15:20 IST)
ಮಾನಸಿಕ ಅಸ್ವಸ್ಥರ ನೆರವಿಗಾಗಿ ರಾಜ್ಯದಲ್ಲಿ ಮಾನಸಿಕ ಆರೋಗ್ಯ ಕಾನೂನು ಸೇವಾ ಘಟಕಗಳನ್ನು ಕಾನೂನು ಸೇವಾ ಪ್ರಾಧಿಕಾರ ಆರಂಭಿಸಲಿದೆ.

ಮಾನಸಿಕ ಆರೋಗ್ಯ ಕಾನೂನು ಸೇವಾ ಘಟಕದ ಮೂಲಕ ಮಾನಸಿಕ ತೊಂದರೆಯಿಂದ ಬಳಲುತ್ತಿರುವವರಿಗೆ ವೈದ್ಯಕೀಯ ಮಾಹಿತಿ ನೀಡಲಾಗುವುದು.

ಜತೆಗೆ ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಔಷಧ ಮತ್ತಿತರ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದ್ದಾರೆ.

ಮೆಂಟಲ್ ಲೀಗಲ್ ಕ್ಲಿನಿಕ್ ಸ್ಥಾಪಿಸುವ ಬಗ್ಗೆ ಪ್ರಾಧಿಕಾರ ಪರೀಶೀಲಿಸಲಿದೆ ಎಂದು ಹೇಳಿದ ಅವರು ಯಾರಾದರೂ ವಕೀಲರು ಕ್ಲಿನಿಕ್ ಸ್ಥಾಪಿಸಲು ಮುಂದಾದರೆ ಪ್ರಾಧಿಕಾರದಿಂದ ಅವರಿಗೆ ಸಹಕಾರ ನೀಡಲಾಗುವುದು ಎಂದರು.

ಮಾನಸಿಕ ಆರೋಗ್ಯ ಸುಧಾರಣೆಗೆ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಕೇಂದ್ರ ಸರ್ಕಾರ ಒಂದು ಸಾವಿರ ಕೊಟಿ ರೂ. ಮೀಸಲಿಟ್ಟಿದ್ದು, ಇದರ ಸೂಕ್ತ ಬಳಕೆಗೆ ಕಾನೂನು ಸೇವಾ ಪ್ರಾಧಿಕಾರ ಕೆಲಸ ಮಾಡಲಿದೆ ಎಂದು ತಿಳಿಸಿದರು.

Share this Story:

Follow Webdunia kannada