Select Your Language

Notifications

webdunia
webdunia
webdunia
webdunia

ಮಾಜಿ ಕ್ರಿಕೆಟರ್ ಜಾವಗಲ್ ಶ್ರೀನಾಥ್ ತಂದೆ ಚಂದ್ರಶೇಖರ್ ಪತ್ತೆ

ಮಾಜಿ ಕ್ರಿಕೆಟರ್ ಜಾವಗಲ್ ಶ್ರೀನಾಥ್ ತಂದೆ ಚಂದ್ರಶೇಖರ್ ಪತ್ತೆ
, ಮಂಗಳವಾರ, 31 ಡಿಸೆಂಬರ್ 2013 (12:11 IST)
PR
PR
ಮೈಸೂರು: ಮಾಜಿ ಕ್ರಿಕೆಟರ್ ಜಾವಗಲ್ ಶ್ರೀನಾಥ್ ಅವರ ತಂದೆ ಚಂದ್ರಶೇಖರ್ ಅವರು ಜಯನಗರ ನಾಲ್ಕನೇ ಕ್ರಾಸ್‌ನಲ್ಲಿ ಪತ್ತೆಯಾಗಿದ್ದಾರೆ. ಬೆಳಿಗ್ಗೆ ಮೈಸೂರಿನ ದೇವರಾಜ ಮಾರ್ಕೆಟ್‌ಗೆ ಬಂದಿದ್ದ ವೇಳೆ ಅವರು ಕಾಣೆಯಾಗಿದ್ದರು. ಮೈಸೂರಿನ ಕುವೆಂಪುನಗರದಲ್ಲಿ ಅವರು ವಾಸವಾಗಿದ್ದರು. ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಬಂದಿದ್ದರು. ಚಂದ್ರಶೇಖರ್ ಅವರಿಗೆ ಮರವು ಇರುವುದರಿಂದ ಮನೆಯ ದಾರಿ ತಪ್ಪಿರಬಹುದೆಂದು ಭಾವಿಸಲಾಗಿತ್ತು.

ಅವರಿಗೆ 70 ವರ್ಷ ವಯಸ್ಸಾಗಿತ್ತು. ಎಂದಿನಂತೆ ಅವರ ಸಂಬಂಧಿಯೊಬ್ಬರ ಜತೆ ತರಕಾರಿ ಖರೀದಿಗೆ ಬಂದಿದ್ದಾಗ ಜನಜಂಗುಳಿಯಲ್ಲಿ ತಪ್ಪಿಹೋಗಿದ್ದರು.. ಪೊಲೀಸರು ಅವರ ಭಾವಚಿತ್ರವನ್ನು ತೆಗೆದುಕೊಂಡು ದೇವರಾಜ ಮಾರುಕಟ್ಟೆಯ ಸುತ್ತಮುತ್ತ ಹುಡುಕುತ್ತಿದ್ದರು.

Share this Story:

Follow Webdunia kannada