Webdunia - Bharat's app for daily news and videos

Install App

ಮಂಗಳೂರು ಮೆಡಿಕಲ್ ವಿದ್ಯಾರ್ಥಿನಿ ರೇಪ್ : 8 ಯುವಕರ ಬಂಧನ

Webdunia
ಮಂಗಳವಾರ, 24 ಡಿಸೆಂಬರ್ 2013 (12:15 IST)
PR
PR
ಇಡೀ ಮಂಗಳೂರನ್ನು ಬೆಚ್ಚಿಬೀಳಿಸಿದ ಮೆಡಿಕಲ್ ವಿದ್ಯಾರ್ಥಿನಿಯೊಬ್ಬಳ ಅಪಹರಣ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು 8 ಮಂದಿ ಯುವಕರನ್ನು ಇಂದು ಬಂಧಿಸಿದ್ದಾರೆ. ಮೆಡಿಕಲ್ ವಿದ್ಯಾರ್ಥಿನಿಯನ್ನು ಮತ್ತು ಅವಳ ಗೆಳೆಯನನ್ನು ಕಳೆದ ಶನಿವಾರ ಅಪಹರಿಸಿ ಗೆಳೆಯನಿಂದಲೇ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿಸಿ ಕೀಚಕರು ವಿಕೃತ ಆನಂದವನ್ನು ಪಡೆದಿದ್ದರು. ಅಲ್ಲದೇ ಅದರ ಬ್ಲೂಫಿಲಂ ತೆಗೆದು, ಹಣ ನೀಡದಿದ್ದರೆ ಇಂಟರ್‌ನೆಟ್‌ನಲ್ಲಿ ಅಪಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಮಂಗಳೂರಿನ ರೆಸ್ಟೊರೆಂಟ್ ಒಂದರ ಬಳಿ ಗೆಳೆಯನ ಜತೆ ಕೂತು ಮಾತನಾಡುತ್ತಿದ್ದ ಮೆಡಿಕಲ್ ವಿದ್ಯಾರ್ಥಿನಿ ಹೊರಕ್ಕೆ ಬಂದ ಕೂಡಲೇ ಕಾರಿನಲ್ಲಿ ಆಗಮಿಸಿದ ಕೀಚಕರು ಬಲವಂತವಾಗಿ ಇಬ್ಬರನ್ನೂ ಕಾರಿನಲ್ಲಿ ಅಪಹರಣ ಮಾಡಿದರು.
ಇನ್ನಷ್ಟು ಮಾಹಿತಿ ಮುಂದಿನ ಪುಟದಲ್ಲಿ

PR
PR
ನಂತರ ಪಾಳುಮನೆಯೊಂದಕ್ಕೆ ಕರೆತಂದು ಗೆಳೆಯನ ಮುಂದೆಯೇ ವಿದ್ಯಾರ್ಥಿನಿಯನ್ನು ಬೆತ್ತಲೆ ನಿಲ್ಲಿಸಿದರು. ಅವರ ವಿಕೃತಿ ಅಷ್ಟಕ್ಕೇ ನಿಲ್ಲೋದಿಲ್ಲ. ಮೆಡಿಕಲ್ ವಿದ್ಯಾರ್ಥಿನಿಯನ್ನು ನಮ್ಮೆದುರೇ ರೇಪ್ ಮಾಡು ಎಂದು ಗೆಳೆಯನಿಗೆ ಸೂಚಿಸಿದರು. ಪ್ರಾಣಭಯಕ್ಕೆ ಹೆದರಿ ಕೀಚಕನೆದುರು ಬೆತ್ತಲಾಗಿ ಗೆಳತಿಯನ್ನು ರೇಪ್ ಮಾಡುತ್ತಾನೆ. ರೇಪ್ ಮಾಡದಿದ್ದರೆ ನಿನ್ನ ಕಣ್ಣೆದುರೇ ಗೆಳತಿಯ ಗ್ಯಾಂಗ್ ರೇಪ್ ಮಾಡ್ತೀವಿ ಎಂದು ಬೆದರಿಕೆ ಹಾಕಿದ್ದರು. ನಂತರ ಪಾತಕಿಗಳು ಮೊಬೈಲ್‌ನಲ್ಲಿ ರೇಪ್ ಮಾಡುತ್ತಿದ್ದ ದೃಶ್ಯವನ್ನು ಚಿತ್ರೀಕರಿಸಿದರು.

ನಂತರ ಅದನ್ನು ಇಂಟರ್ನೆಟ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಹೇಳಿ ಬೆದರಿಕೆ ಹಾಕಿ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಣ ತರುವಂತೆ ವಿದ್ಯಾರ್ಥಿನಿಯನ್ನು ತೊಕ್ಕೊಟ್ಟು ಬಳಿ ಬಿಟ್ಟು ಹೋಗುತ್ತಾರೆ. ಆ ಯುವತಿಗೆ ಆ ಗೆಳೆಯನನ್ನು ಪಾರು ಮಾಡುವ ಅನಿವಾರ್ಯತೆ ಇತ್ತು. ನಂತರ ಯುವತಿ ತನ್ನ ಗೆಳತಿಯ ಬಳಿ ವಿಷಯವನ್ನು ತಿಳಿಸುತ್ತಾಳೆ. ಗೆಳತಿಯ ಸಂಬಂಧಿಕರು ಮಂಗಳೂರಿನ ವಕೀಲೆ ಆಶಾ ನಾಯಕ್ ಅವರನ್ನು ಸಂಪರ್ಕಿಸುತ್ತಾರೆ.

PR
PR
ಆಶಾ ನಾಯಕ್ ವಿದ್ಯಾರ್ಥಿನಿಗೆ ಧೈರ್ಯ ತುಂಬಿ ಅವಳ ಮೂಲಕವೇ ಕೇಸು ದಾಖಲಿಸಿದರು. ಆ ನಂತರ ಕೀಚಕರನ್ನು ಹಿಡಿಯಲು ಪೊಲೀಸರು ಯೋಜನೆ ರೂಪಿಸಿದರು. ಮಂಗಳೂರು ಪೊಲೀಸರು ಯುವಕರು ಹೇಳಿದ್ದ 3 ಲಕ್ಷ ರೂ. ಕೊಟ್ಟು ಕಳಿಸಿ ನಂತರ ಪಾಳುಮನೆಯನ್ನು ಸುತ್ತುವರಿದು ದಾಳಿ ಮಾಡಿದಾಗ, ದುಷ್ಕರ್ಮಿಗಳು ಪೊಲೀಸ್ ಅಧಿಕಾರಿಗಳ ಮೇಲೆ ಕಾರುಹತ್ತಿಸಲು ಯತ್ನಿಸಿ ಎಸ್ಕೇಪ್ ಆಗಿದ್ದರು. ನಂತರ 8 ಮಂದಿ ಪಾತಕಿಗಳನ್ನು ಸುರತ್ಕಲ್‌ನ ಜಾಗವೊಂದರರಲ್ಲಿ ಇಂದು ಬಂಧಿಸಲಾಗಿದೆ.

8 ಮಂದಿ ಆರೋಪಿಗಳ ಪೈಕಿ ಮೂವರ ಮೇಲೆ ರೌಡಿಶೀಟ್‌ ಆರೋಪವಿದೆಯೆಂದು ಹೇಳಲಾಗಿದೆ. ಇಂತಹ ಅಮಾನುಷ ಕೃತ್ಯ ರೇಪ್‌ಗಿಂತಲೂ ಹೀನವಾಗಿದ್ದು, ದುಷ್ಕರ್ಮಿಗಳಿಗೆ ಘೋರ ಶಿಕ್ಷೆಯನ್ನು ವಿಧಿಸಬೇಕೆಂದು ಮಂಗಳೂರಿಗರು ಆಗ್ರಹಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments